ದುಬೈ: ಕೋವಿಡ್ ಪ್ರತಿರೋಧದ ಭಾಗವಾಗಿ ದುಬೈನಲ್ಲಿ ವಿಧಿಸಲಾದ ನಿರ್ಬಂಧಗಳಿಗೆ ಭಾಗಶಃ ವಿನಾಯಿತಿ ನೀಡಲಾಗಿದೆ. ವಿಶೇಷ ಅನುಮತಿಯಿಲ್ಲದೆ ಬೆಳಗ್ಗೆ 7 ರಿಂದ ರಾತ್ರಿ 10 ರವರೆಗೆ ಪ್ರಯಾಣಿಸಲು ಅವಕಾಶವಿದೆ.
ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ನಿರ್ಧಾರ ಕೈಗೊಂಡಿದ್ದು, ಮಾಲ್ಗಳು ಮತ್ತು ರೆಸ್ಟೋರೆಂಟ್ಗಳು ನಿಯಂತ್ರಣದೊಂದಿಗೆ ಕಾರ್ಯನಿರ್ವಹಿಸಲಿದ್ದು, ಚಿತ್ರಮಂದಿರಗಳು, ಮನರಂಜನಾ ಕೇಂದ್ರಗಳು ಮತ್ತು ಪ್ರಾರ್ಥನಾ ಕೊಠಡಿಗಳನ್ನು ತೆರೆಯಲಾಗುವುದಿಲ್ಲ.
ಜಿಮ್, ಈಜುಕೊಳ, ಬಾರ್ ಮತ್ತು ಮಸಾಜ್ ಪಾರ್ಲರ್ಗಳಿಲ್ಲದೆ ಹೋಟೆಲ್ಗಳು ಕಾರ್ಯಾಚರಿಸಬಹುದು. 30% ಕ್ಕಿಂತ ಹೆಚ್ಚು ಉದ್ಯೋಗಿಗಳು ಸಂಸ್ಥೆಯಲ್ಲಿ ಇರಬಾರದು. ಸುರಕ್ಷಿತ ಅಂತರ ಪಾಲಿಸಿ, ಮುಖವಾಡ ಧರಿಸಿ ಮಾತ್ರ ಹೊರಗಡೆ ಬರಬಹುದು. ಉಲ್ಲಂಘನೆ ಗಮನಕ್ಕೆ ಬಂದರೆ 1,000 ದಿರ್ಹಂ ದಂಡ ವಿಧಿಸಲಾಗುತ್ತದೆ.
ವ್ಯಾಯಾಮ ಮತ್ತಿತರ ಕಾರ್ಯಗಳಿಗಾಗಿ ಮನೆಯ ಪರಿಸರಕ್ಕೆ ಇಳಿಯಬಹುದು. ಸಂಬಂಧಿಕರ ಸಂದರ್ಶನ ಮಾಡಬಹುದು ಆದರೆ, 60 ವರ್ಷ ದಾಟಿದವರ ಸಂದರ್ಶನ ಉಪೇಕ್ಷಿಸಬೇಕು. ಐದಕ್ಕಿಂತ ಹೆಚ್ಚಿನವರು ಗುಂಪು ಸೇರಬಾರದು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ. ದುಬೈ ಮೆಟ್ರೋ ಮತ್ತು ಇತರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಈ ತಿಂಗಳ 26 ರಿಂದ ಕಾರ್ಯನಿರ್ವಹಿಸಲಿವೆ.















ಇನ್ನಷ್ಟು ಸುದ್ದಿಗಳು
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮರುಪರಿಶೀಲಿಸುವಂತೆ ಕೆಸಿಎಫ್ ಆಗ್ರಹ
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ