ದುಬೈ: ಏಷ್ಯಾ ಮೂಲದ ವಲಸಿಗರನ್ನು ಅವಮಾನಿಸುವ ರೀತಿಯಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಧ್ವೇಷ ಹರಡುವಂತೆ ಪ್ರಚಾರ ನಡೆಸಿದ ಯುಎಇ ಮೂಲದ ಪತ್ರಕರ್ತನೊಬ್ಬನನ್ನು ಬಂಧಿಸಲಾಗಿದೆ.
ಕವಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯನಾಗಿರುವ ತಾರಿಕ್ ಅಲ್-ಮೆಹ್‌ಯಾಸ್ ಬಂಧಿತ ವ್ಯಕ್ತಿ. ವೀಡಿಯೊದಲ್ಲಿ ಭಾರತೀಯರು ಮತ್ತು ಬಂಗಾಳಿಗಳನ್ನು ಅರಬ್ ಪ್ರಜೆಗಳೊಂದಿಗೆ ಹೋಲಿಸುವಲ್ಲಿ ಆತನ ಕೃತ್ಯವು ತೀವ್ರ ಕಾನೂನುಬಾಹಿರ ಎಂದು ಉಲ್ಲೇಖಿಸಿ ಸಾರ್ವಜನಿಕ ಪ್ರೋಸಿಕ್ಯೂಷನ್ ಆತನನ್ನು ಬಂಧಿಸಲು ಆದೇಶಿಸಿದೆ. ಸಮಾಜದ ಭಾವನೆಗಳನ್ನು ಕೆದಕುವಂತಹ ಪ್ರಯತ್ನವನ್ನು ಆತ ಮಾಡಿದ್ದಾನೆ. ಈ ಕ್ರಮ ಯುಎಇ ಎತ್ತಿಹಿಡಿದಿರುವ ಸಹಿಷ್ಣುತೆ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಯುಎಇ ಅಧಿಕಾರಿ ತಿಳಿಸಿದ್ದಾರೆ.
ದೇಶ, ನಂಬಿಕೆ, ಬಣ್ಣ ಅಥವಾ ಭಾಷೆಯ ಹೆಸರಿನಲ್ಲಿ ವಿಭಾಗೀಯತೆಗೆ ಪ್ರಯತ್ನಿಸುವುದನ್ನು ದೇಶದಲ್ಲಿ ಅನುಮತಿಸಲಾಗುವುದಿಲ್ಲ. ಅಂತಹ ಪ್ರವೃತ್ತಿಯನ್ನು ಬಲವಾಗಿ ವಿರೋಧಿಸಲಾಗುತ್ತದೆ. ಎಲ್ಲರನ್ನೂ ಗೌರವಿಸುವುದು ಯುಎಇಯ ಮೂಲ ನೀತಿ. ಇದನ್ನು ಉಲ್ಲಂಘಿಸಿದರೆ ಕಠಿಣ ಕ್ರಮಕ್ಕೆ ಕಾರಣವಾಗುತ್ತದೆ ಎಂದು ಯುಎಇ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಈ ಹಿಂದೆ, ಕುವೈತ್ ನಟಿಯೊಬ್ಬಳು ಪಶ್ಚಿಮದಲ್ಲಿ ಕರೋನವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿಡಿಯೋ ಅದರ ಮುಂದುವರಿದ ಭಾಗ ಎಂದು ಮಾಧ್ಯಮಗಳು ಗಮನಸೆಳೆದಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ