ಪಡುಬಿದ್ರಿ : ಅಲ್ ಕೌಸರ್ ಎಜುಕೇಶನಲ್ ಟ್ರಸ್ಟ್ ಪಡುಬಿದ್ರಿ
ಇದರ ಪ್ರಾಯೋಜಕತ್ವ ದಲ್ಲಿ
ಬ್ಲಿಸ್ಸ್ ವುಮೆನ್ಸ್ ಕಾಲೇಜ್ ಹಾಗೂ ಬ್ಲಿಸ್ಸ್ ಲಂಡನ್ ಇಸ್ಲಾಮಿಕ್ ಫ್ರೀ ಸ್ಕೂಲ್
ನ ಬ್ರೋಷರ್ ಲಾಂಚಿಂಗ್ ಕಾರ್ಯಕ್ರಮವು ಬ್ಲಿಸ್ಸ್ ವುಮೆನ್ಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಇದರ ಮುಖ್ಯ ಅತಿಥಿಯಾಗಿ ಭಾಗವಹಿಸಿದ
ಪಡುಬಿದ್ರಿ ಕೇಂದ್ರ ಜುಮ್ಮಾಮಸೀದಿಯ ಖತೀಬರಾದ ಅಲ್ ಹಾಜ್ ಎಸ್ ಎಂ ಅಬ್ದುರ್ರಹ್ಮಾನ್ ಮದನಿ ಯವರ ದುಆ
ಆಶೀರ್ವಾದ ದೊಂದಿಗೆ ನಿನ್ನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬ್ಲಿಸ್ಸ್ ಫ್ರೀ ಸ್ಕೂಲ್ ಹಾಗು ಕಾಲೇಜಿನ ವಿಶೇಷತೆಗಳನ್ನು ಒಳಗೂಂಡ ಬ್ರೋಷರ್ ಪತ್ರವನ್ನು ಬಂದ ಎಲ್ಲಾ ಅತಿಥಿಗಳು ಸೇರಿ ಬಿಡುಗಡೆ ಗೊಳಿಸಿದರು,
ಕಾರ್ಯಕ್ರಮದ ಅಧ್ಯಕತೆಯನ್ನು ಅಲ್ ಹಾಜ್ ಅಬ್ದುರ್ರಹ್ಮಾನ್ ವಹಿಸಿದರು,
ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸ್ನ ವಿಶೇಷತೆ ಹಾಗು ಭವಿಷ್ಯರೂಪಿಸುವಲ್ಲಿ ಒದಗುವ ಪ್ರಯೋಜನ ದ ಬಗ್ಗೆ ಬ್ಲಿಸ್ಸ್ ಫ್ರಿ ಸ್ಕೂಲ್ ನ ನಿರ್ದೇಶಕ ಪಾರೂಖ್ ಅಂಜದಿ ವಿಟ್ಲ ಸವಿಸ್ತರವಾಗಿ ವಿವರಿಸಿದರು.ಮುಖ್ಯ ಅತಿಥಿಯಾಗಿ ಅಲ್ ಕೌಸರ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಕೆ.ಯಮ್ ಅಬ್ದುಲ್ಲಾ ಹಾಜಿ , ಗೌರವ ಸದಸ್ಯರಾದ ಹಾಜಿ ಪಿ. ಎ ಅಬ್ದುರ್ರಹ್ಮಾನ್ , ಶಬ್ಬೀರ್ ಹುಸೈನ್ ಸಾಹೇಬ್, ಸ್ವಾಲಿಹ್ ಅಂಜದಿ , ಹನೀಫ್ ಅಹ್ಸನಿ, ಹಾಜಿ ಹಮಬ್ಬ ಮೊಹಿದ್ದೀನ್ ಮುಂತಾದವರು ಉಪಸ್ಥಿತರಿದ್ದರು.ಕಾಲೇಜಿನ ಎಜುಕೇಶನ್ ಅಡ್ವೈಸರ್ ಹಂಝತ್ ಕನ್ನಂಗಾರ್ ಸ್ವಾಗತಿಸಿದರು… ರಜಾಕ್ ಕನ್ನಂಗಾರ್
ವಂದಿಸಿದರು.ಕಾರ್ಯದರ್ಶಿ ರಮೀಝ್ ಹುಸೇನ್ ಬೇಂಗ್ರೆ ಕಾರ್ಯಕ್ರಮ ನಿರೂಪಿಸಿದರು. ವರದಿ : ಪಿ.ಎಂ.ಎಸ್ ಪಡುಬಿದ್ರಿ