janadhvani

Kannada Online News Paper

ಮಂಗಳೂರು ಗೋಲಿಬಾರ್: ಕುಮಾರಣ್ಣನ ಸಿಡಿ ಸಂಪೂರ್ಣ- ವಾಯ್ಸ್ ಆಫ್ ಪೀಸ್

ಮಂಗಳೂರು: ಮಂಗಳೂರು ಗೋಲಿಬಾರ್ ಪ್ರಕರಣ ಪೂರ್ವ ನಿಯೋಜಿತ ಎಂಬುದು ಪ್ರಾರಂಭದಲ್ಲಿ ಇನ್ಸ್‌ಪೆಕ್ಟರ್ ಮುಹಮ್ಮದ್ ಷರೀಫ್ “ನಮ ಗೋಲಿಬಾರ್ ಮಲ್ಪುಗ “, ನಂತರ ಬಂದರ್ ಠಾಣೆ ಮುಂಭಾಗದಲ್ಲಿ ”ಸರ್ ಒಂದು ಹೋಗಲಿ” , ಇನ್ಸ್‌ಪೆಕ್ಟರ್ ಸಾಂತರಾಮ ಕುಂದರ್ “ಹತ್ತು ಗುಂಡು ಹೊಡೆದು ಒಂದು ಬೀಲಲಿಲ್ಲ ಒಬ್ಬರು ಸಾಯಲಿಲ್ಲವಲ್ಲ” ಎಂಬ ವೀಡಿಯೋ ನೋಡಿದ ಪ್ರಜ್ಞಾವಂತ ಜನತೆಗೆ ಅರಿವಿದೆ.

ಕೆಲವರು ಸತ್ಯ ಅರಿತೂ ಮಾಧ್ಯಮ ಮೂಲಕ ಜನರಲ್ಲಿ ತಪ್ಪು ಕಲ್ಪನೆಗೆ ಹತಾಶ ಪ್ರಯತ್ನ ನಡೆಸುತ್ತಿದ್ದಾರೆ. ಏನೇ ಪ್ರಯತ್ನ ಮಾಡಿದರು ಸತ್ಯ ಸತ್ಯವಾಗಿ ಉಳಿದದ್ದೇ ಜಗತ್ತಿನ ಇತಿಹಾಸ.

ಕಮಿಷನ್ ರು ಮಂಗಳೂರು ಗೋಲಿಬಾರ್ ನ ನೈಜತೆಯನ್ನು ಜನತೆ ಮುಂದಿಡಿವುದು ಈ ರೀತಿಯಲ್ಲಾಗಿರಲಿ, ತಾವೇ ಹೇಳಿಕೊಂಡಂತೆ.
1) ಬಂದರು ಠಾಣೆಗೆ ಬೆಂಕಿ ಹಚ್ಚಲು ಬಂದ 7000 ಮಂದಿಯ ವೀಡಿಯೋ ಬಿಡುಗಡೆಯಾಗಲಿ,

2) 33 ಪೋಲಿಸ್ ರಿಗೆ ಮೇಜರ್ ಗಾಯವಾದಾಗ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಪೋಟೋಗಳು ಬರಲಿ.

3 )ಕೋವಿ ಅಂಗಡಿ ಎರಡು ಅಲಗೆ ಬಾಗಿಲು ಹೊಡೆದ ವೀಡಿಯೋ ಒಂದು ಲಕ್ಷ ಲಾಸ್ ಎಂಬ ಕೇಸು ದಾಖಲಿಸಿದ್ದು ಅದರ ಸತ್ಯಾಂಷ

4 )ಬಂದರ್ ರೈಟರ್ ಮಹೇಶ್ 2000 ಸಾವಿರ ಮಂದಿ ಹೊಡೆದ FIR ದಾಖಲೆಯ ನೈಜತೆ ಬಯಲಾಗಲಿ.

5 . ಮಾರ್ಕೆಟ್‌ ನಲ್ಲಿ ಗೋಲ್ಡ್ ಹಾಗೂ ಊದುಬತ್ತಿ ಅಂಗಡಿ ಮಾಲಕರು ತಮ್ಮ ಕೆಲಸದವರು ಹಾಗೂ ಸ್ಥಳೀಯ ಯುವಕರೊಂದಿಗೆ ಮಾರಕ ಆಯುಧ ಗಳೊಂದಿಗೆ ದಾಂಧಲೆ ನಡೆಸಿದವರ ವೀಡಿಯೋ ಬಯಲಿಗೆ ಬರಲಿ ಅದರೊಂದಿಗೆ ಅವರ ಮೇಲೆ ದಾಖಲಾದ ಕೇಸು ಬಯಲಾಗಲಿ.

6) ಗಲಭೆ ಮೊದಲು ವಿಧ್ಯಾರ್ಥಿಗಳ ಮೇಲೆ, ಅಂಗಡಿಗಳಿಗೆ ನುಗ್ಗಿ ನಡೆಸಿದ ದಾಂಧಲೆ, ರಾವ್ ಸರ್ಕಲ್ ನಲ್ಲಿ ವಿಧ್ಯಾರ್ಥಿಗಳ ಮೇಲಿನ ದೌರ್ಜನ್ಯ , ಅಮಾಯಕರ ಮೇಲಿನ ಗೋಲಿಬಾರ್, ಸಲಫಿ ಮಸೀದಿಗೆ ಪೋಲೀಸರು ನಡೆಸಿದ ಕಲ್ಲೆಸೆತ ಎಲ್ಲವೂ ಬಹಿರಂಗವಾಗಲಿ.

ಕೊನೆಯದಾಗಿ ಗೋಲಿಬಾರ್ ನಡೆದ ಅಮಾಯಕರ ಮನೆಗೆ , ಆಸ್ಪತ್ರೆಯಲ್ಲಿದ್ದ ರೋಗಿಯೆಡೆಗೆ, ನೀವಾಗಲಿ, ಜಿಲ್ಲಾಧಿಕಾರಿಯಾಗಲಿ ಭೇಟಿ ನೀಡಿದ ವೀಡಿಯೋ ವೈರಲ್ ಮಾಡಿ.

ಇದೆಲ್ಲವನ್ನರಿತು ಮಂಗಳೂರಿಗೆ ಆಗಮಿಸಿ, ಜನರೊಂದಿಗೆ ಕಾನೂನು ಹೋರಾಟಕ್ಕೆ ಕೈ ಜೋಡಿಸಿದ, ಅದರೆಡೆಯಲ್ಲಿ ಸತ್ಯವನ್ನು ತಿರುಚಲು ಪ್ರಯತ್ನಿಸಿದವರಿಗೆ ಸಿ ಡಿ ಬಿಡುಗಡೆ ಮಾಡಿ ಚಾಟಿ ಬೀಸಿದ ಮಾಜಿ ಮುಖ್ಯಮಂತ್ರಿ ಶ್ರೀ ಎಚ್ .ಡಿ ಕುಮಾರಸ್ವಾಮಿಯವರ ಕಾರ್ಯ ಶ್ಲಾಘನೀಯ ಹಾಗೂ ಸಂಪೂರ್ಣ ಎಂದು ಮಂಗಳೂರು ಜನತೆಯ ಪರವಾಗಿ ವಾಯ್ಸ್ ಆಫ್ ಪೀಸ್ ಕುದ್ರೋಳಿ ಸಂತೋಷ ವ್ಯಕ್ತಪಡಿಸಿದೆ.

error: Content is protected !! Not allowed copy content from janadhvani.com