ನವ ದೆಹಲಿ (ಜನವರಿ 10); ಕಳೆದ ಭಾನುವಾರ ಸಂಜೆ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಹಾಸ್ಟೆಲ್ಗೆ ನುಗ್ಗಿ ವಿದ್ಯಾರ್ಥಿ ಸಂಘದ ನಾಯಕಿ ಐಶ್ ಘೋಷ್ ಮೇಲೆ ಹಲ್ಲೆ ನಡೆಸಿದ 8 ಜನ ಆರೋಪಿಗಳ ಗುರುತು ಪತ್ತೆ ಹಚ್ಚಲಾಗಿದೆ. ಈ ಪೈಕಿ ಇಬ್ಬರು ಎಬಿವಿಪಿ ಕಾರ್ಯಕರ್ತರು ಎಂದು ದೆಹಲಿ ಪೊಲೀಸ್ ಉಪ ಆಯುಕ್ತ ಜಾಯ್ ಟಿರ್ಕಿ ತಿಳಿಸಿದ್ದಾರೆ.
ಕಳೆದ ಭಾನುವಾರ ಸಂಜೆ ಜೆಎನ್ಯು ವಿಶ್ವವಿದ್ಯಾಲಯಕ್ಕೆ ನುಗ್ಗಿದ್ದ ಕಿಡಿಗೇಡಿಗಳು ಪೆರಿಯಾರ್ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಹಿಂಸಾಚಾರ ಸೃಷ್ಟಿಸಿದ್ದರು. ವಿದ್ಯಾರ್ಥಿನಿಯರು ಹಾಗೂ ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿದ್ದರು. ಇದರಲ್ಲಿ ವಿದ್ಯಾರ್ಥಿ ಸಂಘದ ನಾಯಕಿ ಐಶ್ ಘೋಷ್ ತಲೆಗೆ ಬಲವಾದ ಪೆಟ್ಟಾಗಿದ್ದು ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಕೇಂದ್ರ ಸರ್ಕಾರದ ವಿರುದ್ಧ ಕಟು ವಿಮರ್ಶೆ ಎದುರಾಗಿತ್ತು. ಈ ನಡುವೆ ಹಿಂದೂ ಪರ ಸಂಘಟನೆಯ ಮುಖ್ಯಸ್ಥನೋರ್ವ ಈ ದಾಳಿಯ ಹೊಣೆ ಹೊತ್ತಿದ್ದು ಈ ವಿವಾದ ಮತ್ತೊಂದು ತಿರುವು ಪಡೆದಿತ್ತು
ಇದೀಗ ಈ ಪ್ರಕರಣದ ತನಿಖೆಯ ಕುರಿತು ಮಾಹಿತಿ ನೀಡಿರುವ ದೆಹಲಿ ಪೊಲೀಸ್ ಉಪ ಆಯುಕ್ತ ಜಾಯ್ ಟಿರ್ಕಿ, “ಜೆಎನ್ಯು ಕ್ಯಾಂಪಸ್ನಲ್ಲಿ ನಡೆದ ಹಿಂಸಾಚಾರದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ಈ ಕುರಿತ ತನಿಖೆ ಪ್ರಗತಿಯಲ್ಲಿದೆ. ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದ ಆರೋಪಿಗಳ ಪೈಕಿ 8 ಜನರನ್ನು ಈಗಾಗಲೇ ಗುರುತಿಸಲಾಗಿದೆ. ಈ ಪೈಕಿ ಇಬ್ಬರು ಎಬಿವಿಪಿ ಕಾರ್ಯಕರ್ತರು” ಎಂದು ತಿಳಿಸಿದ್ದಾರೆ.
ಜೆಎನ್ಯು ವಿದ್ಯಾರ್ಥಿಗಳ ಮೇಲೆ ದಾಳಿ ನಡೆದಾಗಲೇ ಪ್ರತಿಯೊಬ್ಬರೂ ಸಹ ಎಬಿವಿಪಿ ಕಾರ್ಯಕರ್ತರೇ ಈ ಕೆಲಸ ಮಾಡಿದ್ದು ಎಂದು ಆರೋಪಿಸಿದ್ದರು. ಆದರೆ, ಇದೀಗ ಪೊಲೀಸರೇ ಘಟನೆ ಸಂಬಂಧ ಎಬಿವಿಪಿ ಕಾರ್ಯಕರ್ತರನ್ನು ಗುರುತಿಸಿದ್ದು, ಈ ವಿವಾದ ಮುಂದಿನ ದಿನಗಳಲ್ಲಿ ಯಾವ ರೂಪ ಪಡೆದುಕೊಳ್ಳುತ್ತದೆ ಎಂಬ ವಿಚಾರ ಇದೀಗ ಕುತೂಹಲಕ್ಕೆ ಕಾರಣವಾಗಿದೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ