ದುಬೈ:ವಯಸ್ಸಾದ ಗೃಹ ಕಾರ್ಮಿಕರು ಆರೋಗ್ಯವಂತರಾಗಿದ್ದರೆ, 60 ವರ್ಷದ ನಂತರವೂ ಉದ್ಯೋಗ ಒಪ್ಪಂದವನ್ನು ನವೀಕರಿಸಬಹುದು. ಆದರೆ ಯುಎಇ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು, ಷರತ್ತುಗಳಿಗೆ ಒಳಪಟ್ಟು ಮಾತ್ರ ಪರವಾನಗಿ ನೀಡಲಾಗುವುದು ಎಂದು ವ್ಯಕ್ತಪಡಿಸಿದೆ.
ಉತ್ತಮ ಆರೋಗ್ಯ ಹೊಂದಿರುವ ಬಗ್ಗೆ ದೃಢೀಕರಿಸುವ ಸರ್ಕಾರಿ ಅಧಿಕೃತ ಸಂಸ್ಥೆ ನೀಡಿದ ಪ್ರಮಾಣಪತ್ರ. ಉದ್ಯೋಗದಾತನು ಗೃಹ ಉದ್ಯೋಗಿಯ ವೈದ್ಯಕೀಯ ವೆಚ್ಚಗಳನ್ನು ಸಂಪೂರ್ಣವಾಗಿ ಭರಿಸಲು ಸಿದ್ಧನಾಗಿರಬೇಕು ಮತ್ತು ನಿವಾಸ ವೀಸಾವನ್ನು ಮುಂದುವರಿಸಲು ಅಧಿಕೃತ ಏಜೆನ್ಸಿಗಳಿಂದ ಅನುಮತಿ ಪಡೆಯಬೇಕು ಎಂಬುದು ನಿಬಂಧನೆಗಳಾಗಿವೆ.
ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುವ ಕೆಲಸಗಾರರನ್ನು ಮಂದುವರಿಸಲು ಅನುವು ಮಾಡಬೇಕೆಂದು ಉದ್ಯೋಗದಾತರು ಮತ್ತು ಕುಟುಂಬದ ಸದಸ್ಯರು ನಿರಂತರವಾಗಿ ಒತ್ತಾಯಿಸುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೇಶೀಯ ಉದ್ಯೋಗ ಸಚಿವಾಲಯ (ಎಸಿಇ)ದ ಅಂಡರ್ ಸೆಕ್ರೆಟರಿ ಖಲೀಲ್ ಖೂರಿ ಹೇಳಿದರು.
ಈ ಸುಧಾರಣೆಯು ಯುಎಇಯಿಂದ ನೇಮಕಗೊಂಡ ಮತ್ತು ಮೂರು ತಿಂಗಳೊಳಗೆ ಉದ್ಯೋಗ ಒಪ್ಪಂದಗಳ ಅವಧಿ ಮುಗಿದ ಕಾರ್ಮಿಕರ ವೀಸಾ ನವೀಕರಣಕ್ಕೆ ಮಾತ್ರ ಅನ್ವಯಿಸುತ್ತದೆ.
ಗೃಹ ಕಾರ್ಮಿಕರು, ಖಾಸಗಿ ನಾವಿಕರು, ಕಾವಲುಗಾರರು, ಭದ್ರತಾ ಸಿಬ್ಬಂದಿ, ಕುರುಬ, ವಾಹನ ನಿಲುಗಡೆ ಕೆಲಸಗಾರ, ಮನೆ ಪಾಲನೆ ಮಾಡುವವರು, ಫಾಲ್ಕನ್ ತರಬೇತುದಾರರು, ಖಾಸಗಿ ತರಬೇತುದಾರರು, ಶಿಕ್ಷಕ, ಮನೆಕೆಲಸಗಾರ, ತೋಟಗಾರ, ಖಾಸಗಿ ದಾದಿ, ಖಾಸಗಿ ಪಿಆರ್ಒ, ಅಡುಗೆಯವರು ಮುಂತಾದವರಿಗೆ ಇದು ಅನ್ವಯ, ತದ್ಬೀರ್ ಸೇವಾ ಕೇಂದ್ರಗಳ ಮೂಲಕ ವೀಸಾ ಸೇವೆಗಳನ್ನು ಪೂರ್ಣಗೊಳಿಸಬಹುದು.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು