ಮಕ್ಕಾ: ಮಕ್ಕಾದ ಪವಿತ್ರ ಹರಂ ಮಸೀದಿಯಿಂದ ಭಿಕ್ಷುಕನನ್ನು ಸೆರೆಹಿಡಿಯಲಾಗಿದ್ದು, ಆತನಿಂದ, ಭದ್ರತಾ ತಂಡವು ಸುಮಾರು ಐದಾರು ಲಕ್ಷ ಭಾರತೀಯ ರೂಪಾಯಿಗಳಿಗೆ ಸಮಾನವಾದ 31,000 ರಿಯಾಲ್ಗಳನ್ನು ಕಂಡುಹಿಡಿಯಲಾಗಿದೆ. ಯಾತ್ರಿಕರು ಮತ್ತು ಹರಮ್ಗೆ ಭೇಟಿ ನೀಡುವವರ ಬಳಿ ಸಹಾಯ ಬೇಡುತ್ತಿದ್ದ ಭಿಕ್ಷುಕನನ್ನು ಹರಮ್ ಭದ್ರತಾ ಘಟಕ ವಶಕ್ಕೆ ಪಡೆದುಕೊಂಡಿದೆ.
ಮುಂದಿನ ಕ್ರಮಕ್ಕಾಗಿ ಹರಮ್ ಭದ್ರತಾ ಇಲಾಖೆಯು ಭಿಕ್ಷುಕನನ್ನು ಸಂಬಂಧಪಟ್ಟ ಇಲಾಖೆಗಳಿಗೆ ಹಸ್ತಾಂತರಿಸಿದೆ. ಪವಿತ್ರ ಹರಮ್ ವಲಯವು ಭಿಕ್ಷಾಟನೆ ನಿಷೇಧಿತ ವಲಯವಾಗಿದೆ. ಹರಮ್ನಲ್ಲಿ ಭಿಕ್ಷಾಟನೆ ಮಾಡದಂತೆ ಅಧಿಕಾರಿಗಳು ಆಗಾಗ್ಗೆ ಎಚ್ಚರಿಕೆ ನೀಡಿದ್ದಾರೆ. ಭಿಕ್ಷಾಟನೆ ಮಾಡುವವರನ್ನು ಅಧಿಕಾರಿಗಳು ಬಂಧಿಸುತ್ತಾರೆ.
ಹರಮ್ ಭದ್ರತಾ ವಿಭಾಗದ ಸಹಾಯಕ ನಿರ್ದೇಶಕ ಕರ್ನಲ್ ಡಾ.ಬದ್ರ್ ಬಿನ್ ಸಊದ್, ಹರಮ್ ಭದ್ರತಾ ಅಧಿಕಾರಿ ಅಲಿ ಬಿನ್ ಆಯಿಲ್ ಅಸ್ಸಹ್ರಾನಿ ಅವರನ್ನು ಗೌರವಿಸಿದರು. ನಂತರ ಮಾತನಾಡಿದ ಅವರು, ಪವಿತ್ರ ಹರಮ್ನಲ್ಲಿ ಸೇವೆ ಸಲ್ಲಿಸುತ್ತಿರುವ ನಿಮ್ಮಂತಹವರು ನಮ್ಮ ಅಭಿಮಾನ ಎಂದು ಹೇಳಿದರು.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ