ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮುರ ಜಮಾಅತ್ ಅಧೀನಕ್ಕೆ ಬರುವ ಪುಣಿಕೆತ್ತಾರ್ ಫ್ಯಾಮಿಲಿಯ ಹಿರಿಯರಾದ ಮರ್ಹೂಂ ಅಬ್ದುಲ್ ರಹಿಮಾನ್ ಹಾಗೂ ಖದೀಜಬೀವಿ ಉಮ್ಮ ಇವರ ಸ್ಮರಣಾರ್ಥವಾಗಿ ಅವರ ಮೊಮ್ಮಕ್ಕಳನ್ನೊಳಗೊಂಡ ಸದಸ್ಯರು ಸೇರಿಕೊಂಡು ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಪುಣಿಕೆತ್ತಾರ್ ವೆಲ್ಫೇರ್ ಟ್ರಸ್ಟ್ ಅಸ್ತಿತ್ವಕ್ಕೆ ತರಲಾಯಿತು.
ಪುಣಿಕೆತ್ತಾರ್ ಫ್ಯಾಮಿಲಿಯ ವಿಶೇಷ ಸಭೆಯು ದಿನಾಂಕ 15/9/2019 ರಂದು ಜರುಗಿತು.
ಪಿ ಯು ಅಬ್ದುರ್ರಹ್ಮಾನ್ ಉಸ್ತಾದರು ದುಆ ನೆರವೇರಿಸಿದರು. ಸಭೆಯನ್ನು ಉಮರ್ ಸಅದಿ ಆಲ್ಆಫ್ಹ್ಳಲಿ ಉದ್ಘಾಟನೆಗೈದರು. ನಂತರ ನೂತನ ಸಮಿತಿಯನ್ನು ಅಬ್ದುರ್ರಹ್ಮಾನ್ ಆಲ್ ಐನ್ ಅವರು ವೀಕ್ಷಕರಾಗಿ ನಡೆಸಿಕೊಟ್ಟು ಘೋಷಿಸಿದರು. 2019-20ನೇ ಸಾಲಿನ ಕಾರ್ಯಕಾರಿ ಸಮಿತಿ
ಸಲಹೆಗಾರರಾಗಿ ಪಿ.ಯು ಅಬ್ದುರ್ರಹ್ಮಾನ್ ಮುಸ್ಲಿಯಾರ್,ಅಬ್ದುರ್ರಹ್ಮಾನ್ ಸಖಾಫಿ ಮದ್ದಡ್ಕ, ಆಲಿಕುಂಞಿ ಸಖಾಫಿ ನಾವೂರು,ಅಬ್ದುಲ್ ಹಮೀದ್ ಮಾಚಾರ್.
ನೂತನ ಅಧ್ಯಕ್ಷರಾಗಿ ಹಾಫಿಳ್ ಯಾಕೂಬ್ ಸಅದಿ ನಾವೂರು,ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎ ಮುಹಮ್ಮದ್ ಶರೀಫ್ ನಿಂರ್ದಿ,ಕೋಶಾಧಿಕಾರಿ
ಪಿ.ವೈ ಸುಲೈಮಾನ್ (ಅಪ್ಪು),ಉಪಾಧ್ಯಕ್ಷರುಗಳಾಗಿ ಉಸ್ಮಾನ್ ಹಲ್ಲಾಜೆ ಮುರ, ಇಸ್ಮಾಯಿಲ್ ಸಖಾಫಿ ಮಾಚಾರ್,ಬಶೀರ್ ಲತ್ವೀಫಿ ಪಕ್ಕೀತಳ,ಜೊತೆ ಕಾರ್ಯದರ್ಶಿಗಳಾಗಿ ಉಮರ್ ಸಅದಿ ಅಲ್ ಆಫ್ಳಲಿ, ಆದಂ ಮಾಚಾರ್,ಹಮೀದ್ ಹಲ್ಲಾಜೆ. ಸಹಕೋಶಾಧಿಕಾರಿ ಪಿ.ಎ ಸುಲೈಮಾನ್ ದರ್ಖಾಸ್
ಸಮಿತಿ ಸಂಯೋಜಕರಾಗಿ ಅಬ್ದುರ್ರಹ್ಮಾನ್ ಅಲ್ ಐನ್ (ಯು ಎ ಇ),ಸುಲೈಮಾನ್ ಮಾಚಾರ್ (ಸೌದಿ ಅರೇಬಿಯಾ),ಮುಹಮ್ಮದ್ ಜಾಬಿರ್ (ಕುವೈಟ್)
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಪಿ.ಯು ಅಬೂಬಕ್ಕರ್ ಅಂಗಡಿ ನಾವೂರು,ಪಿ.ಎ ಇಬ್ರಾಹಿಮ್ ನಾವೂರು,ಪಿ.ವೈ ಉಮರ್ ಮುಸ್ಲಿಯಾರ್ ಮುರ, ರಫೀಖ್ ಮುಸ್ಲಿಯಾರ್ ಕಾಜೂರ್,ಅಸ್ಲಂ ಮುಈನಿ ಬೆಳಾಲು,ಮುಹಮ್ಮದ್ ಬಶೀರ್ ಪುಣಿಕೆತ್ತಾರ್, ಪಿ.ಎಸ್ ಪುತ್ತೊಲಿ ಪುಣಿಕೆತ್ತಾರ್,ಪಿ.ಎ ಅಬ್ದುಲ್ ಹಮೀದ್ ಬೆದ್ರಬೆಟ್ಟು,ಪಿ.ಎ ಅಶ್ರಫ್ ಸಅದಿ ನಾವೂರು,ಅಬ್ದುಲ್ ಬಾಸಿತ್ ಹಿಮಮಿ ಮರ್ಕಝ್, ಸಿದ್ದೀಕ್ ಬೆಂಝಾಲ್,ಪಿ.ಎ ಮಜೀದ್ ನಾವೂರು, ಪಿ.ಯು ಇಕ್ಬಾಲ್ ಕಿಲ್ಲೂರು,ಶಾಹುಲ್ ಹಮೀದ್ ನಾವೂರು,ಫಾರೂಖ್ ಮುರ,ಅಬ್ದುಲ್ಲಾ ಉಡುಪಿ,
ಪಿ.ಯು ಯೂಸುಫ್ ಕಿಲ್ಲೂರು ಇವರನ್ನು ಆಯ್ಕೆ ಮಾಡಲಾಯಿತು.
ನಂತರ ಸಮಿತಿಯ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.ಅಶ್ರಫ್ ಸಅದಿ ನಾವೂರು ಸ್ವಾಗತಿಸಿದರು, ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಧನ್ಯವಾದ ಮಾಡಿದರು.
ವರದಿ:ಶಾಝ್ ನಾವೂರು