janadhvani

Kannada Online News Paper

ಮಕಿ೯ನ್ಸ್ ವಿದ್ಯಾರ್ಥಿ ಮಲೇಷ್ಯಾದ ಅಂತರಾಷ್ಟ್ರೀಯ ಶೈಕ್ಷಣಿಕ ಸಮಾವೇಶಕ್ಕೆ

ಬೆಂಗಳೂರು: ಮಲೇಷ್ಯಾದ ಕೆಬಾಂಗ್ಸುನ್ ವಿದ್ಯಾಲಯ ಹಾಗೂ ಕಲ್ಲಿಕೋಟೆ ಮರ್ಕಝು ಸಖಾಫತಿ ಸುನ್ನಿಯ ಜಂಟಿಯಾಗಿ ಆಗಸ್ಟ್ ೨೦_೨೨ ದಿನಾಂಕಗಳಲ್ಲಿ ಅಂತರಾಷ್ಟ್ರೀಯ ಶೈಕ್ಷಣಿಕ ಸಮಾವೇಶವನ್ನು ಆಯೋಜಿಸಿದೆ. ಮಕಿ೯ನ್ಸ್ ವಿದ್ಯಾಸಂಸ್ಥೆಯ ಅಧ್ಯಾಪಕರಾದ ಜುನೈದ್ ಖಲೀಲ್ ನೂರಾನಿ ಹಾಗೂ ಸಂಸ್ಥೆಯ ವಿದ್ಯಾರ್ಥಿಯಾದ ಅಹ್ಮದ್ ಸಿಮಾಕ್ ರವರು ಪ್ರಸ್ತುತ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜುನೈದ್ ಖಲೀಲ್ ನೂರಾನಿ “A COMPARATIVE STUDY BETWEEN EPISTEMOLOGY OF SCIENTISM AND ISLAM”
ಎಂಬ ವಿಷಯ ಸಂಬಂಧಿಯಾಗಿಯೂ, ಅಹ್ಮದ್ ಸಿಮಾಕ್ “Human Fertilization To Post-Partum Haemorrhage: The Confluence Of Quran and Science” ಎಂಬ ವಿಷಯದ ಕುರಿತಾಗಿಯೂ ಪ್ರಬಂಧ ಮಂಡಿಸಲಿದ್ದಾರೆ. ಕಣ್ಣುರು ನಿವಾಸಿಯಾದ ‘ಜುನೈದ್ ಖಲೀಲ್ ನೂರಾನಿರವರು
ಪ್ರತಿಷ್ಠಿತ ಪುರವಣಿಗಳ ಅಂಕಣಕಾರರೂ, ಮಕಿ೯ನ್ಸ್ ವಿದ್ಯಾಸಂಸ್ಥೆಯ ಇಸ್ಲಾಮಿಕ್ ತುಲನಾತ್ಮಕ ಅಧ್ಯಯನ ವಿಭಾಗದ ಪ್ರಧಾನಿಯೂ ಆಗಿದ್ದಾರೆ. ಪೂನೂರು ನಿವಾಸಿಯಾದ ಅಹಮದ್ ಸಿಮಾಕ್ ರವರು ಬೆಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿದ್ಯಾಥಿ೯ಯಾಗಿದ್ದಾರೆ.

error: Content is protected !! Not allowed copy content from janadhvani.com