ಕುವೈತ್ ಸಿಟಿ: ಕುವೈತ್ನಲ್ಲಿ ಮೂರು ತಿಂಗಳ ಪ್ರವಾಸಿ ವೀಸಾ ದೇಶದಲ್ಲಿ ವಾಸಿಸುವ ವಿದೇಶಿ ಪ್ರಜೆಗಳ ಸಂಗಾತಿ ಮತ್ತು ಮಕ್ಕಳಿಗೆ ಮಾತ್ರವಾಗಿದ್ದು, ಇತರ ಸಂದರ್ಶಕರಿಗೆ ಒಂದು ತಿಂಗಳಿಗಿಂತ ಹೆಚ್ಚು ಕಾಲ ವೀಸಾ ನೀಡದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪುನರ್ವಸತಿ ಸಚಿವಾಲಯ ಸೂಚಿಸಿದೆ.
ಗೃಹ ಇಲಾಖೆ ಇತ್ತೀಚೆಗೆ ಹೊರಡಿಸಿದ ಆದೇಶದ ಪ್ರಕಾರ, ಪೋಷಕರು ಮತ್ತು ಒಡಹುಟ್ಟಿದವರಿಗೆ ವೀಸಾ ಕೇವಲ ಒಂದು ತಿಂಗಳು ಮಾತ್ರ ಅವಕಾಶವಿದ್ದು, ವ್ಯಾಪಾರ ಅಗತ್ಯಗಳಿಗಾಗಿ ಸಂದರ್ಶಿಸುವರಿಗೆ ಒಂದು ತಿಂಗಳ ವೀಸಾ ನೀಡಲಾಗುವುದು. ಈ ಎರಡು ವಿಭಾಗಗಳ ಅವಧಿಯನ್ನು ಇನ್ನಷ್ಟು ಸುದೀರ್ಘಗೊಳಿಸದಂತೆ ಅಧಿಕಾರಿಗಳು ದೇಶಾದ್ಯಂತದ ಎಲ್ಲಾ ವಸತಿ ಕಚೇರಿಗಳಿಗೆ ಮಾಹಿತಿ ನೀಡಿದ್ದಾರೆ.
ಸಂದರ್ಶಕರ ವೀಸಾದಲ್ಲಿ ತಮ್ಮ ಹೆತ್ತವರನ್ನು (ಪೋಷಕರು ಅಥವಾ ಸಂಗಾತಿಯ ಪೋಷಕರು) ಕರೆತರಲು ವಿದೇಶಿಯರು ಕನಿಷ್ಠ 500 ದಿನಾರ್ ವೇತನ ಪಡೆಯುವವರಾಗಿರಬೇಕು. ಪತ್ನಿ ಮತ್ತು ಮಕ್ಕಳನ್ನು ಕರೆತರಲು 250 ದಿನಾರ್ಗಳು ಮೂಲ ವೇತನವಿದ್ದರೆ ಸಾಕು. ಪ್ರಾಯೋಜಕರ ಕೆಲಸ, ಸಂದರ್ಭಗಳು ಮತ್ತು ಭೇಟಿಯ ಉದ್ದೇಶವನ್ನು ಅವಲಂಬಿಸಿ ವೀಸಾ ಅವಧಿಯನ್ನು ಕಡಿತಗೊಳಿಸಲು ವಲಸೆ ವ್ಯವಸ್ಥಾಪಕರಿಗೆ ಅಧಿಕಾರ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ