janadhvani

Kannada Online News Paper

ದುಬೈ ಶಾರ್ಜಾ ನಡುವೆ ಫೆರ್ರಿ ಸೇವೆ ಆರಂಭ

ದುಬೈ: ದುಬೈ ಶಾರ್ಜಾ ನಡುವೆ ಫೆರ್ರಿ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ. ದುಬೈ ರಸ್ತೆ ಮತ್ತು ಸಾರಿಗೆ ಇಲಾಖೆ (ಆರ್‌ಟಿಎ) ವತಿಯಿಂದ ದಿನನಿತ್ಯ 42 ಫೆರ್ರಿ ಸೇವೆಗಳನ್ನು ಒದಗಿಸಲಾಗುತ್ತದೆ.

ಯಾತ್ರಾ ಸಮಯವು 35 ನಿಮಿಷವಾಗಿದ್ದು, ಪ್ರತೀ ಯಾತ್ರೆಯಲ್ಲಿ 125 ಯಾತ್ರಿಕರಿಗೆ ಸಂಚರಿಸಬಹುದಾಗಿದೆ. ದುಬೈ ಶಾರ್ಜಾ ನಡುವಿನ ಸಾರಿಗೆ ದಟ್ಟಣೆಗೆ ಈ ಮೂಲಕ ಪಾರಿಹಾರವಾಗಲಿದೆ ಎನ್ನಲಾಗಿದೆ.

ಸಿಲ್ವರ್ ಕ್ಲಾಸ್‌ಗೆ 15 , ಗೋಲ್ಡ್ ಕ್ಲಾಸ್‌ಗೆ 25 ದಿರ್ಹಂ ಯಾತ್ರಾ ದರವನ್ನು ನಿಗದಿ ಪಡಿಸಲಾಗಿದೆ.ಶಾರ್ಜಾ ಅಕ್ವೇರಿಯಂ ಮರೈನ್ ಫೆರ್ರಿ ಸ್ಟೇಷನ್ ನಿಂದ ಬೆಳಿಗ್ಗೆ ಐದು ಗಂಟೆಗೆ ಮತ್ತು ದುಬೈ ಅಲ್ ಗುಬೈಬಾ ಸ್ಟೇಷನ್ ನಿಂದ ಬೆಳಿಗ್ಗೆ 5:15 ಕ್ಕೆ ಸೇವೆ ಆರಂಭಗೊಳ್ಳಲಿದೆ.ಬೆಳಗ್ಗೆ ಮತ್ತು ಸಂಜೆ ಹೊತ್ತು ದಟ್ಟಣೆಯ ಅವಧಿಯಲ್ಲಿ ಅರ್ಧ ಗಂಟೆಗೊಮ್ಮೆ ಸೇವೆ ಲಭ್ಯವಾಗಲಿದ್ದು, ಉಳಿದ ವೇಳೆ ಒಂದೂವರೆ ಗಂಟೆಗೊಮ್ಮೆ ಸೇವೆ ಲಭ್ಯವಾಗಲಿದೆ. ಶಾರ್ಜಾ ಸ್ಟೇಷನ್ ನಲ್ಲಿ ಉಚಿತ ವಾಹನ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದೆ. ಐದು ವರ್ಷ‌ದ ಕೆಳಗಿನ ಮಕ್ಕಳಿಗೆ ಉಚಿತ ಪ್ರಯಾಣ.