ದುಬೈ: ಪಾಸ್‌ಪೋರ್ಟ್ ಮತ್ತು ಗುರುತು ಚೀಟಿ ತೋರಿಸದೆ ದುಬೈ ವಿಮಾನ ನಿಲ್ದಾಣದ ಮೂಲಕ ಯಾತ್ರೆ ಮಾಡಬಹುದು. ಯಾತ್ರೆಯ ಮಾಹಿತಿ, ಮಾನವರ ಸಹಾಯ ಇಲ್ಲದೆ ಯಾತ್ರೆಯನ್ನು ಪೂರ್ತಿಗೊಳಿಸಲು ಸಹಾಯಕವಾಗುವ ಸ್ಮಾರ್ಟ್ ಟನಲ್ ಸೌಕರ್ಯದ ಎಮಿಗ್ರೇಷನ್ ವ್ಯವಸ್ಥೆ ಇದೀಗ ಜನಾಕರ್ಷಣೆಯ ಕೇಂದ್ರ ವಾಗುತ್ತಿದೆ. ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ನ ಮುಂದಿರುವ ಬಿಸಿನೆಸ್ ಯಾತ್ರಿಕರು ಹೊರಡುವ ಭಾಗದಲ್ಲಿ ಈ ವ್ಯವಸ್ಥೆಯನ್ನು ಪ್ರಥಮ ಹಂತವಾಗಿ ಸಜ್ಜುಗೊಳಿಸಲಾಗಿದೆ.
ಸ್ಮಾರ್ಟ್ ಟನಲ್ ಮೂಲಕ ಒಮ್ಮೆ ಸಲೀಸಾಗಿ ನಡೆದು ಬಿಟ್ಟರೆ ಮಾತ್ರ ಸಾಕು ಕ್ರಮಗಳೆಲ್ಲವೂ ಪೂರ್ಣಗೊಂಡಿರುತ್ತದೆ. ಪಾಸ್‌ಪೋರ್ಟ್‌ನಲ್ಲಿ ಎಕ್ಸಿಟ್ ಸ್ಟಾಂಪ್ ಅಚ್ಚೊತ್ತಬೇಕಾಗಿಲ್ಲ. ಎಮಿರೇಟ್ಸ್ ಐಡಿ ಪಂಚ್ ಮಾಡಬೇಕೆಂದಿಲ್ಲ. ನಡೆದಾಡುವ ವೇಳೆ ಅಲ್ಲಿ ಅಳವಡಿಸಲಾದ ಕ್ಯಾಮರಾವನ್ನು ಒಮ್ಮೆ ನೋಡಿದರೆ ಮಾತ್ರ ಸಾಕು ಕ್ಷಣದಲ್ಲಿ ಎಲ್ಲವೂ ಮುಗಿದು ಬಿಡುತ್ತದೆ.
ಕಳೆದ ವರ್ಷ ಈ ವ್ಯವಸ್ಥೆಯ ಸೌಕರ್ಯವನ್ನು ದುಬೈ ಜನರಲ್ ಡೈರೆಕ್ಟರೇಟ್ ಆಫ್ ರೆಸಿಡೆನ್ಸಿ ಆ್ಯಂಡ್ ಫಾರಿನೇರ್ಸ್ ಅಫೇರ್ಸ್ ಅಧಿಕಾರಿ ಮೇಜರ್ ಜನರಲ್ ಮುಹಮ್ಮದ್ ಅಹ್ಮದ್ ಅಲ್ ಮರ್ರಿ ಯಾತ್ರಿಕರಿಗೆ ತರೆದು ಕೊಟ್ಟಿದ್ದರು. ಇದು ಅರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪ್ರಕಾರ ಕಾರ್ಯಾಚರಿಸುವ ವಿಶ್ವದ ಪ್ರಥಮ ಎಮಿಗ್ರೇಷನ್ ವ್ಯವಸ್ಥೆಯಾಗಿದ್ದು, ಯಾತ್ರಿಕರು ಹಾದು ಹೋಗುವಾಗ ಇದರಲ್ಲಿರುವ ಬಯೋ ಮೆಟ್ರಿಕ್ ವ್ಯವಸ್ಥೆಯಲ್ಲಿ ಅವರ ಮುಖ ಪತ್ತೆಹಚ್ಚಿ ಸಿಸ್ಟಮ್ ನಲ್ಲಿ ಅಡಕವಾಗಿರುವ ಮಾಹಿತಿಯೊಂದಿಗೆ ತುಲನೆ ಮಾಡಲಾಗುತ್ತದೆ. ಆ ಪ್ರಕಾರ ಸ್ಮಾರ್ಟ್ ಟನಲ್ ಕಾರ್ಯಾಚರಣೆ ಮಾಡುತ್ತದೆ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು