ಮಕ್ಕಾ: ಹಜ್ ಪ್ರಯುಕ್ತ ಅಲ್-ಹರಮೈನ್ ಎಕ್ಸ್ಪ್ರೆಸ್ ರೈಲು ಹೆಚ್ಚಿನ ಸೇವೆಗಳನ್ನು ಒದಗಿಸುತ್ತಿದೆ. ಯಾತ್ರಿಕರಿಗೆ ಎರಡು ಗಂಟೆಗಳಲ್ಲಿ ಮಕ್ಕಾ ಮತ್ತು ಮದೀನಾ ನಡುವೆ ಸುಮಾರು 450 ಕಿ.ಮೀ ಕ್ರಮಿಸಿ ತಲುಪಬಹುದಾಗಿದೆ. ಹೊಸ ಸೇವೆ ಜುಲೈ 28 ರಿಂದ ಆಗಸ್ಟ್ 18 ರವರೆಗೆ ಮುಂದುವರಿಯಲಿದೆ
ಹರಮೈನ್ ರೈಲು ಪ್ರಸ್ತುತ, ವಾರಕ್ಕೆ 64 ಸೇವೆಗಳನ್ನು ಹೊಂದಿದೆ. ಇದನ್ನು 80 ಸೇವೆಗಳಾಗಿ ಹೆಚ್ಚಿಸಲಾಗಿದೆ. ಮದೀನಾ ಮಕ್ಕಾ ಎಕ್ಸ್ಪ್ರೆಸ್ ವಿಶ್ವದ ಅತಿ ವೇಗದ 10 ರೈಲುಗಳಲ್ಲಿ ಒಂದಾಗಿದೆ. ಸೇವೆಗಾಗಿ 35 ರೈಲುಗಳನ್ನು ಬಳಸಲಾಗುತ್ತಿದೆ.
450 ಕಿ.ಮೀ ಮಾರ್ಗದಲ್ಲಿ ಗಂಟೆಗೆ 300 ಕಿ.ಮೀ ವೇಗದಲ್ಲಿ ಪ್ರಯಾಣಿಸುವ ಮಕ್ಕಾ, ಜಿದ್ದಾ, ಕಿಂಗ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣ, ಕಿಂಗ್ ಅಬ್ದುಲ್ಲಾ ಎಕನಾಮಿಕ್ ಸಿಟಿ ಮತ್ತು ಮದೀನಾ ನಿಲ್ದಾಣಗಳಾಗಿದ್ದು, ಮಕ್ಕಾ ಮತ್ತು ಮದೀನಾ ನಡುವಿನ ಪ್ರಯಾಣದ ಸಮಯವು ಎರಡು ಗಂಟೆ 15 ನಿಮಿಷಗಳಾಗಿವೆ.
ನಾಲ್ಕು ಬ್ಯುಸಿನೆಸ್ ಕ್ಲಾಸ್, 8 ಆರ್ಥಿಕ ವರ್ಗ ಮತ್ತು ಒಂದು ಫುಡ್ ಕೋರ್ಟ್ ಮುಂತಾದ ಸೌಕರ್ಯ ಲಭ್ಯವಿದೆ. ರೈಲಿನಲ್ಲಿ 417 ಆಸನಗಳೊಂದಿಗೆ 13 ಬೋಗಿಗಳಿವೆ. ಹಜ್ ಋತುವಿನಲ್ಲಿ ಜುಲೈ 28 ರಿಂದ ಆಗಸ್ಟ್ 10 ರವರೆಗೆ ಮತ್ತು ಆಗಸ್ಟ್ 12 ರಿಂದ ಆಗಸ್ಟ್ 17 ರವರೆಗೆ ಹೆಚ್ಚುವರಿ ಸೇವೆಗಳು ಲಭ್ಯವಾಗಲಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ