ದುಬೈ: ಯುಎಇಯಲ್ಲಿ ಅನಿವಾಸಿಗಳಿಗೆ ಕುಟುಂಬ ವಿಸಾ ಅನುಮತಿಸಲು ಆದಾಯವನ್ನು ಮಾನದಂಡವಾಗಿಸುವ ಕಾನೂನು ಜಾರಿಗೆ ಬಂದಿದೆ. ಹುದ್ದೆ ಮತ್ತು ಆದಾಯದ ಅನುಸಾರವಾಗಿ ಈ ವರೆಗೆ ಕುಟುಂಬವನ್ನು ಪ್ರಾಯೋಜಿಸಲು ಅನುಮತಿ ನೀಡಲಾಗುತ್ತಿದ್ದವು. ಹೊಸ ಕಾನೂನಿನ ಪ್ರಕಾರ ಮಧ್ಯಮ ವರ್ಗದ ಅನೇಕರಿಗೆ ಕುಟುಂಬವನ್ನು ಕರೆತರುವುದು ಸಾಧ್ಯವಾಗಲಿದೆ.
ಪ್ರತೀ ತಿಂಗಳು 4, ಅಥವಾ 5 ಸಾವಿರ ದಿರ್ಹಂ ಮತ್ತು ವಾಸ ಸೌಕರ್ಯ ಇರುವ ಅನಿವಾಸಿಗಳಿಗೆ ಕುಟುಂಬ ವಿಸಾ ಅನುಮತಿಸಲಾಗುತ್ತಿದೆ. ಹೆಂಡತಿ, ಹದಿನೆಂಟರ ಒಳಗಿರುವ ಮಕ್ಕಳನ್ನು ಪ್ರಾಯೋಜಿಸಲು ಸಾಧ್ಯವಾಗಲಿದೆ. ಈ ಕಾನೂನಿಗೆ ಇತ್ತೀಚೆಗೆ ಯುಎಇ ಮಂತ್ರಿ ಮಂಡಲ ಅನುಮೋದನೆ ನೀಡಿದೆ.
ಫೆಡರಲ್ ಐಡೆನ್ಟಿಟಿ ಫಾರ್ ಸಿಟಿಝನ್ಶಿಪ್ ಅಧಿಕೃತರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಂತರ್‌ರಾಷ್ಟ್ರೀಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಈ ಕಾನೂನು ರೂಪೀಕರಿಸಲಾಗಿದೆ. ಈ ಕ್ರಮದಿಂದಾಗಿ ಅನೇಕರಿಗೆ ವರದಾನವಾಗಲಿದೆ ಎಂದು ಮೇಜರ್ ಜನರಲ್ ಸಈದ್ ರಕನ್ ಅಲ್ ರಶ್ದೀ ಅಭಿಪ್ರಾಯ ಪಟ್ಟಿದ್ದಾರೆ.