ಬೆಂಗಳೂರು: ‘ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಗೊತ್ತಾಗಲ್ಲ ಅನ್ಕೊಂಡಿದ್ದಾರೆ ಬಿಜೆಪಿಯವರು’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನು ಏಳು ಬಾರಿ ಶಾಸಕನಾಗಿದ್ದವನು. ರಾಜಕೀಯ ಏನು ಅನ್ನೋದು ನನಗೂ ಗೊತ್ತು. ನಮ್ಮ ಶಾಸಕರ ಜೊತೆ ಎಷ್ಟೆಷ್ಟು ಮೀಟಿಂಗ್ ಮಾಡಿದ್ದಾರೆ ಎಂಬುದೆಲ್ಲಾ ಗೊತ್ತಿದೆ ನನಗೆ’ ಎಂದು ಚಾಟಿ ಬೀಸಿದ್ದಾರೆ.
‘ನಮ್ಮ ಶಾಸಕರು ಸೇರಿದಂತೆ ಬಿಜೆಪಿಯ ಯಾವ ಶಾಸಕರಿಗೂ ಚುನಾವಣೆ ನಡೆಯೋದು ಬೇಕಿಲ್ಲ. ಬಿಜೆಪಿಯ ಶಾಸಕರೇ ನನಗೆ ಫೋನ್ ಮಾಡಿ ಅಣ್ಣಾ ಹೇಗಾದ್ರು ಮಾಡಿ ಎಲೆಕ್ಷನ್‌ಗೆ ಹೋಗೋದು ತಪ್ಪಿಸಿ ಎಂದಿದ್ದಾರೆ. ಚುನಾವಣೆ ಬೇಕಿರುವುದು ಬಿಜೆಪಿಯ ದೆಹಲಿ ಮಟ್ಟದ ನಾಯಕರಿಗೆ ಮಾತ್ರ. ಹೋಗಿರೊ ಶಾಸಕರನ್ನು ಕರೆತರುವ ಪ್ರಯತ್ನ ಮಾಡ್ತಿದ್ದೇವೆ. ಯಾವ ರೀತಿ ಅನ್ನೋದನ್ನ ಹೇಳೋದಕ್ಕೆ ಆಗಲ್ಲ.’ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅಥವಾ ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿ ಮಾಡಿದರೆ ಶಾಸಕರು ವಾಪಸ್ ಬರ್ತಾರೆ ಅನ್ನೊ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಐದು ವರ್ಷ ನೀವೇ ಮುಖ್ಯಮಂತ್ರಿ ಅಂತ ಕುಮಾರಸ್ವಾಮಿ ಅವರಿಗೆ ಹೇಳಿದ್ದೀವಿ. ಅವರನ್ನು ವರ್ಷದವರೆಗೆ ಇಳಿಸುವ ಮಾತಿಲ್ಲ. ಅತೃಪ್ತರ ಮನವೊಲಿಸುವ ಸಭೆ ನಡೆಸುತ್ತಿದ್ದೀವಿ ನೋಡೋಣ ಏನಾಗುತ್ತದೆ’ ಎಂದರು.















ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ ಸಮಿತಿಯಿಂದ ಅಭಿನಂದನೆಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
‘ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್’- ಮಂಗಳೂರಿನ ಸಮಾವೇಶಕ್ಕೆ ಕ್ಷಣಗಣನೆ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಪಬ್ಲಿಕ್ ಟಿವಿಯ ರಂಗನಾಥ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ
‘ಕೈ’ ಪಾಲಯಕ್ಕೆ ಸಿಎಂ ಇಬ್ರಾಹಿಂ ಗುಡ್ ಬೈ – ಜೆಡಿಎಸ್ ಸೇರುವುದು ಖಚಿತ.?
ಮದ್ರಸಾಗಳಲ್ಲಿ, ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಕಲಿಸಲಾಗುತ್ತಿದೆ- ರಾಜ್ಯ ಸರ್ಕಾರ
ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ಉಕ್ಕುಡ ಆಯೋಜಿಸಿದ ಸ್ನೇಹ ಸಂಗಮ
ರಾಜ್ಯದಲ್ಲಿ ನೈಟ್ ಕರ್ಪ್ಯೂ- ರಾತ್ರಿ 10 ರಿಂದ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ