ದುಬೈ: ಭಾರತೀಯರಾದ ದುಬೈ ಸಂದರ್ಶಕರಿಗೆ ಶುಭ ಸುದ್ದಿ. ಇನ್ನು ಮುಂದೆ ದುಬೈ ವಿಮಾನ ನಿಲ್ದಾಣದಲ್ಲಿರುವ ಡ್ಯುಟಿ ಫ್ರೀ ಶಾಪ್‌ಗಳಿಂದ ಭಾರತೀಯ ಹಣ ನೀಡಿ ಖರೀದಿ ನಡೆಸಬಹುದಾಗಿದೆ. ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂರು ಟರ್ಮಿನಲ್‌ಗಳು ಮತ್ತು ಅಲ್ ಮಖ್ತೂಂ ವಿಮಾನ ನಿಲ್ದಾಣದಲ್ಲೂ ಇನ್ನು ಮುಂದೆ ಭಾರತೀಯ ಕರೆನ್ಸಿಗೆ ಮೌಲ್ಯ ಲಭಿಸಲಿದೆ.
ಈ ಹಿಂದೆ ಭಾರತೀಯ ರೂಪಾಯಿಗಳನ್ನು ಡಾಲರ್, ದಿರ್ಹಂ ಅಥವಾ ಯೂರೋ ಆಗಿ ಪರಿವರ್ತಿಸಿ ಖರೀದಿ ನಡೆಸಬೇಕಾಗಿತ್ತು. ದುಬೈ ಡ್ಯೂಟಿ ಫ್ರೀ ವಿನಿಮಯ ನಡೆಸಬಹುದಾದ ಹದಿನೇಳನೇ ಕರೆನ್ಸಿಯಾಗಿದೆ ಭಾರತೀಯ ಕರೆನ್ಸಿ. ದುಬೈ ಒಳಪಡುವ ಯುಎಇಯಲ್ಲಿ ವಿಶ್ವದಲ್ಲೇ ಅತೀ ಹೆಚ್ಚಿನ ಭಾರತೀಯರಿದ್ದಾರೆ.
ದಿನವಹಿ ಸಾವಿರಾರು ಭಾರತೀಯರು ಸಂದರ್ಶಕರಾಗಿಯೂ ಯುಎಇಗೆ ಆಗಮಿಸುತ್ತಿದ್ದಾರೆ. ಹೊಸ ಯೋಜನೆಯು ಸಂದರ್ಶಕರಿಗೆ ಹೆಚ್ಚಿನ ಉಪಯೋಗ ನೀಡಲಿದೆ.
ಡ್ಯೂಟಿ ಫ್ರೀ ಮೂಲಕ 2018ರಲ್ಲಿ 2.015 ಬಿಲಿಯನ್ ಡಾಲರ್ (13,800 ಕೊಟಿ ಭಾರತೀಯ ರೂಪಾಯಿ) ವಿನಿಮಯ ನಡೆದಿತ್ತು. ದಿನದ 24 ಗಂಟೆಯೂ ಕಾರ್ಯಾಚರಿಸುವ ಇಲ್ಲಿ 47 ರಾಷ್ಟ್ರಗಳ 6100 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ದುಬೈ ವಿಮಾನ ನಿಲ್ದಾಣದಲ್ಲಿ 38,00 ಚ.ಅ. ಮೀಟರ್ ವಿಸ್ತೀರ್ಣದಲ್ಲಿ ವ್ಯಾಪಾರವನ್ನು ನಡೆಸಲಾಗುತ್ತಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ