ಕುವೈತ್ ಸಿಟಿ: ತಾಪಮಾನದಲ್ಲಿ ಏರಿಕೆ ಕಂಡು ಬಂದಿದ್ದು, ಶುಚೀಕರಣ ಕಾರ್ಮಿಕರ ಕೆಲಸದ ಸಮಯದಲ್ಲಿ ಬದಲಾವಣೆ ತರಲಾಗಿದ್ದು, ಮುಂಜಾನೆ ಮೂರರಿಂದ ಅಪರಾಹ್ನ 11ರ ವರೆಗೆ ಪರಿಷ್ಕೃತ ಕೆಲಸದ ಸಮಯವಾಗಿದೆ.
ವಿಶ್ವದಲ್ಲಿ ಇತ್ತೀಚೆಗೆ ಅತೀ ಹೆಚ್ಚು ಉಷ್ಣತೆ ಕಂಡುಬಂದ ಎರಡು ದೇಶಗಳ ಪೈಕಿ ಒಂದು ಕುವೈತ್ ಆಗಿದೆ. 2016ರ ಜುಲೈ 21ಕ್ಕೆ ಕುವೈತ್ನ ಮಿತ್ರಿಬಾದಲ್ಲಿ ಅತೀ ಹೆಚ್ಚಿನ ಉಷ್ಣತೆ ಕಂಡು ಬಂದಿದ್ದು, ಅಂದು 53.9ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈ ವರ್ಷ ಕೂಡ ಕುವೈತ್ ನಲ್ಲೇ ಹೆಚ್ಚಿನ ಅಂದರೆ 52 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ.
ಮುಂದಿನ ದಿನಗಳಲ್ಲಿ ತಾಪಮಾನದಲ್ಲಿ ಉಷ್ಣತೆಯು 60 ಡಿಗ್ರಿ ಸೆಲ್ಸಿಯಸ್ ಗೆ ಮೇಲೆ ಹೋಗಲಿರುವುದಾಗಿ ಹವಾಮಾನ ಪರಿಣಿತರು ತಿಳಿಸಿದ್ದಾರೆ. ಸೂರ್ಯ ತಾಪವು ನೇರವಾಗಿ ತಗುಲುವ ಹೊರಗಿನ ಕೆಲಸಗಾರ ಕೆಲಸದ ಸಮಯದಲ್ಲಿ ಅಪರಾಹ್ನ 11ರಿಂದ ಸಂಜೆ 5ರವರೆಗೆ ಸರಕಾರ ನಿಷೇಧ ಹೇರಿತ್ತು. ಅಲ್ಲದೆ ಉಷ್ಣತೆ ಏರುವ ಆಗಸ್ಟ್ ವರೆಗೆ ಹೊರಗಿನ ಕೆಲಸಗಾರರ ಕೆಲಸದ ಸಮಯ ಸಂಜೆ ಐದರ ಬಳಿಕ ಮಾಡಬೇಕು ಎಂದು ಸಂಸತ್ನಲ್ಲಿ ಒತ್ತಡ ಕೇಳಿಬಂದಿತ್ತು.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ