ಮೂಲ: OM Tharuvana ಫೇಸ್ಬುಕ್ ಪೋಸ್ಟ್
ಕನ್ನಡಕ್ಕೆ :ಅಬೂಶಝ
“ಮುರ್ಸಿ ಪರಾಜಿತರಾಗುವರು, ಇಖ್ವಾನಿಸಂ ನುಚ್ಚುನೂರಾಗಲಿದೆ”
ಇದು ಸಮಸ್ತ ಅಧ್ಯಕ್ಷರಾಗಿದ್ದ,ಕಾಸರಗೋಡು ಸಅದಿಯ್ಯ ಸಂಸ್ಥೆಯ ಸಾರಥಿ ಮೌಲಾನಾ ಎಂ.ಎ. ಉಸ್ತಾದರ ಮಾತಾಗಿತ್ತು. ಒಂದು ಕ್ಷಣ ನಾನು ನಿಬ್ಬೆರಗಾದೆ!
ಉಸ್ತಾದರು ಈ ಮಾತು ಹೇಳುವಾಗ ಅರಬ್ ವಸಂತವೆಂಬ ಹೆಸರಿನಲ್ಲಿ ಟ್ಯುನೀಷಿಯಾದಿಂದ ಆರಂಭಗೊಂಡ ಕ್ರಾಂತಿ ಈಜೀಪ್ತ್ ಪ್ರವೇಶಗೊಂಡಿತ್ತು.
ಕ್ರಾಂತಿ ಜಯಿಸಿತ್ತು.ಮಾತ್ರವಲ್ಲ ಹುಸ್ನಿ ಮುಬಾರಕ್ ನ ಪದಚ್ಯುತಿ ನಡೆದ ಬೆನ್ನಲ್ಲೇ ಇಖ್ವಾನ್ ನಾಯಕರಾಗಿದ್ದ ಮುಹಮ್ಮದ್ ಮುರ್ಸಿ ಅಧಿಕಾರ ಗದ್ದುಗೆಯೇರಿ ಆಸೀನರಾಗಿದ್ದರು! ಈಜಿಪ್ಟ್ ಶಾಂತವಾಯಿತು.
ಇಂತಹ ಸಂಧರ್ಭದಲ್ಲಿ ಎಂ.ಎ. ಉಸ್ತಾದರ “ಮುರ್ಸಿ ಪರಾಜಿತರಾಗುವರು ಇಖ್ವಾನಿಸಂ ನುಚ್ಚುನೂರಾಗಲಿದೆ” ಎಂಬ ಮಾತು ನನ್ನನ್ನು ಚಕಿತಗೊಳಿಸಿತ್ತು.
ಈಜಿಪ್ಟ್ ನ ಸದ್ಯದ ಪರಿಸ್ಥಿತಿ,ಸಮಗ್ರ ಬದಲಾವಣೆ ಗಳನ್ನು ನಾನು ಉಸ್ತಾದರಿಗೆ ನೆನಪಿಸುವಾಗಲೂ ಉಸ್ತಾದರಲ್ಲಿ ಯಾವುದೇ ಬದಲಾವಣೆ ಇರದೆ ಅದೇ ಅಚಲವಾದ ತೀರ್ಮಾನವಾಗಿತ್ತು!
ಮಾತ್ರವಲ್ಲ ಬಶ್ಶಾರುಲ್ ಅಸದ್ ನ ಪರ ಉಸ್ತಾದ್ ವಕಾಲತ್ ವಹಿಸಿ “ಬಶ್ಶರ್ ಸರಿ” ಎಂದು ದೂರದೃಷ್ಟಿ ಎಸೆದಾಗ ನನಗೆ ಮತ್ತಷ್ಟು ಅಚ್ಚರಿ ಕಾದಿತ್ತು.
ಲಾಬ್ ಗೆ ಹಾಕಿ ನೋಡಿದರೂ ಬಶ್ಶಾರುಲ್ ಅಸದ್ ನಲ್ಲಿ ಇಸ್ಲಾಮಿಯತ್ ಸಿಗಲ್ಲ ಎಂದು ನಾನು ಹೇಳಿದಾಗ, ಸಿರಿಯಾ ಮತ್ತು ಅಲ್ಲಿನ ಜನತೆ ಸುರಕ್ಷಿತರಾಗಿದ್ದಾರೆಂಬುದನ್ನು ಉಸ್ತಾದರು ನನಗೆ ನೆನಪಿಸಿದರು.
ಉಸ್ತಾದರು ಈ ಮಾತು ಹೇಳುವಾಗ ಸಿರಿಯಾದಲ್ಲಿ ಕ್ರಾಂತಿ ಆರಂಭವಾಗಿದಯಷ್ಟೆ.
ಮೌಲಾನಾ ಎಂ.ಎ. ಉಸ್ತಾದರ ಮಾತು ನಿಜವಾಯಿತು.
ಒಂದು ವರ್ಷ ಪೂರ್ತಿಯಾಗುವುದರ ಮುಂಚೆಯೇ ಮುರ್ಸಿ ಮುಗ್ಗರಿಸಿ ಬಿದ್ದರು.ಅಧಿಕಾರ ನಷ್ಟವಾಯಿತು. ಕ್ರಾಂತಿಯ ಮೂಲಕ ಅಧಿಕಾರ ಗದ್ದುಗೆಯಲ್ಲಿ ಕುಳ್ಳಿರಿಸಿದ ಜನತೆ ಅಂತಹುದೇ ಕ್ರಾಂತಿಯ ಮೂಲಕ ಮುರ್ಸಿಯನ್ನು ಪಾತಾಳಕ್ಕೆ ತಳ್ಳಿದರು!

ನಿಜ ಹೇಳುವುದಾದರೆ, ಈಜಿಪ್ಟ್ ನ ಜನತೆಗೆ ಇಖ್ವಾನಿ ಸಂಘಟನೆಯೊಂದಿಗೋ, ಮುರ್ಸಿಯೊಂದಿಗೋ ಪ್ರೀತಿಯಿಂದ ಅವರನ್ನು ಅಧಿಕಾರಕ್ಕೆ ತಂದದ್ದಲ್ಲ. ಒಟ್ಟಿನಲ್ಲಿ ಹುಸ್ನಿ ಮುಬಾರಕ್ ನ ಸರಕಾರದೊಂದಿಗಿರುವ ಜನರ ಧ್ವೇಷ ಮತ್ತು ಅತೃಪ್ತಿ ಮುರ್ಸಿಗೆ ಅಧಿಕಾರ ಸಿಗುವಂತೆ ಮಾಡಿತು.
ಹುಸ್ನಿ ಮುಬಾರಕ್ ನ ಆಡಳಿತದೊಂದಿಗೆ ಅಲ್ಲಿನ ಜನತೆಗೆ ತೀವ್ರವಾದ ಅತೃಪ್ತಿ ಇತ್ತು. ವಿಶೇಷವಾಗಿ ಈಜಿಪ್ಟ್ ನಲ್ಲಿ ಗಟ್ಟಿಯಾಗಿ ಬೇರೂರಿದ್ದ ಆಧ್ಯಾತ್ಮಿಕ ತಲಪಾಯಕ್ಕೆ ಹುಸ್ನಿ ಮುಬಾರಕ್ ಪಾಶ್ಚಾತ್ಯ ಕರಿಸುವ ಮೂಲಕ ಕೊಡಲಿಯೇಟು ಹಾಕಿದ್ದರು.
ಅಮೆರಿಕ ಮತ್ತು ಇಸ್ರೇಲ್ ನೊಂದಿಗಿರುವ ಗಾಢ ಸಂಭಂದ,ಐ.ಎಂ ಎಫ್ ಸಹಿತ ಜಾಗತಿಕ ಸಂಪತ್ತು ಎಜೆನ್ಸಿಗಳಿಗೆ ರಾಷ್ಟ್ರವನ್ನು ಒತ್ತೆಯಿಟ್ಟದ್ದು, ಮುಂತಾದ ಎಡವಟ್ಟುಗಳಿಂದ ಈಜಿಪ್ಟ್ ಜನತೆ ಕಂಗಾಲಾಗಿ ಬೀದಿಗಿಳಿದಿದ್ದರು. ಬೂದಿಮುಚ್ಚಿದ ಕೆಂಡದಂತಿರುವ ಈ ದೈತ್ಯ ಸಮಸ್ಯೆಗಳ ಮೇಲೆ ಸವಾರಿ ಮಾಡುತ್ತಾ ಟ್ಯುನೀಷ್ಯಾದಿಂದ ಅರಬ್ ವಸಂತವೆಂಬ ಹೆಸರಿನಲ್ಲಿ ಕ್ರಾಂತಿ ಮಾಡುತ್ತಾ ಇಖ್ವಾನುಲ್ ಮುಸ್ಲಿಮೀನ್ ಎಂಬ ಸಳಫಿಸ್ಟ್ ಸಂಘವು ಮುನ್ನುಗ್ಗಿತು.
ಸಂಧರ್ಭೋಚಿತವಾಗಿ ಕಾರ್ಯಾಚರಿಸಿ ಪರಿಸ್ಥಿತಿ ತಮಗೆ ಅನುಕೂಲವಾಗುವಂತೆ ಚೆನ್ನಾಗಿ ನೋಡಿಕೊಂಡ ಪರಿಣಾಮ ಅಧಿಕಾರ ಸಳಫಿಸ್ಟ್ ಜಮಾತೇ ಇಸ್ಲಾಮಿ ಆಶಯದ ಇಖ್ವಾನಿಗಳ ಪಾಲಾಯಿತು.
ಭಾರತದಲ್ಲಿಯೂ ಇಂತಹ ತೀವ್ರ ಇಸ್ಲಾಮಿಸ್ಟ್ ಸಂಘಟನೆಗಳು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಅಧಿಕಾರ ಗದ್ದುಗೆಗೆ ಏರಲು ಶತಪ್ರಯತ್ನ ಮಾಡುತ್ತಿರುವುದು ಗಮನಾರ್ಹ.
ಅಧಿಕಾರ ಕೈಗೆ ಸಿಕ್ಕಾಗ ಮುರ್ಸಿ ಮತ್ತು ಇಖ್ವಾನಿಗಳಿಗೆ ಕ್ರಾಂತಿ ಎಂಬುದು ಬಾಯಿ ಮಾತಿನಂತೆ ಅಷ್ಟು ಸುಲಭವಲ್ಲ ಎಂದು ಮನದಟ್ಟಾಯಿತು. ಹುಸ್ನಿ ಮುಬಾರಕ್ ನ ಕೆಟ್ಟ ಆಡಳಿತದ ದಾರಿಯಲ್ಲೇ ಮುರ್ಸಿಗೆ ಸಂಚರಿಸಬೇಕಾಗಿ ಬಂತು. ನಿಜವಾಗಿ ಬೇರೆ ದಾರಿ ಅವರಿಗೆ ಇಲ್ಲವಾಗಿತ್ತು. ಪಾಶ್ಚಾತ್ಯ ಶಕ್ತಿಗಳು ಮುರ್ಸಿಯ ಭುಜಕ್ಕೆ ಕೈ ಹಾಕಿ ಬೆಂಬಲಕೊಟ್ಟವರಂತೆ ಪೋಸ್ ಕೊಟ್ಟರು. ರಾಷ್ಟ್ರವು ತೀವ್ರವಾದ ಆರ್ಥಿಕ ಬಿಕ್ಕಟ್ಟಿನಿಂದ ನಲುಗಿತು! ಗತ್ಯಂತರವಿಲ್ಲದೆ ಐಎಂಎಫ್ ನ ಮುಂದೆ ಬಿಕ್ಷಾಟನೆಯ ಪಾತ್ರೆ ಹಿಡಿಯಬೇಕಾಗಿ ಬಂತು.
ದೈತ್ಯ ಸಮಸ್ಯೆಗಳು ದುತ್ತೆಂದು ಬಂದು ನಿಂತಾಗ ಅದರ ಮಧ್ಯೆ ಇಖ್ವಾನಿಗಳಲ್ಲಿರುವ ಸಲಫಿಸ್ಟ್ ಗಳು ದರ್ಗಾಗಳನ್ನು ಹೊಡೆದುರುಳಿಸುವ ಕಾರ್ಯ ಆರಂಭಿಸಿದ್ದರು!
ಅನೇಕ ವರ್ಷಗಳಿಂದ ವಿಜ್ರಂಭಣೆಯಿಂದ ಸರಕಾರಗಳೇ ಮುಂದೆ ನಿಂತು ಆಚರಿಸುತ್ತಿದ್ದ ಬ್ರಹತ್ ಮೀಲಾದ್ ಆಚರಣೆಗಳನ್ನು ನಿಷೇಧಿಸಲಾಯಿತು.
ನಿರುದ್ಯೋಗ, ಇಂಧನ ಕ್ಷಾಮ ದುಪ್ಪಟ್ಟಾಯಿತು. ಪೆಟ್ರೋಲ್ ಬಂಕ್ ನ ಮುಂದೆ ಜನರು ತಾಸುಗಟ್ಟಲೆ ಕಾಯಬೇಕಾಗಿ ಬಂತು. ಸಹಿಸಲಾಗದೆ ಜನರು ಬೀದಿಗಿಳಿದು ಪ್ರತಿಭಟಿಸಿದರು.ಅನುಗ್ರಹಿಸಿ ಅಧಿಕಾರಕ್ಕೇರಿಸಿದ ಕೈಗಳಿಂದಲೇ ನಿಗ್ರಹಕ್ಕೆ ನಾಂದಿ ಹಾಡಲಾಯಿತು. ಎರಡನೇ ಕ್ರಾಂತಿಗೆ ನೇತೃತ್ವ ಕೊಡಲು ಸಾಮರ್ಥ್ಯವಿರುವ ಜನಶಕ್ತಿ ಈಜಿಪ್ಟಿನಲ್ಲಿ ಇರಲಿಲ್ಲ.
ಅಕ್ರಮ, ಲೂಟಿ, ಅರಾಜಕತೆ ತಾಂಡವಾಡಬಹುದೆಂದು ಬಹುತೇಕ ಖಚಿತವಾದಾಗ ಸೈನ್ಯ ಈಜಿಪ್ಟ್ ನ್ನು ತನ್ನ ಸರ್ಪದಿಗೆ ತೆಗೆದುಕೊಂಡಿತು. ಇದಾಗಿದೆ ಸತ್ಯ.
ಕೆಲವರು ಹೇಳುವಂತೆ ಸೈನ್ಯದ ಕಾರ್ಯಾಚರಣೆ ಮೂಲಕ ಮುರ್ಸಿಯನ್ನು ಪದಚ್ಯುತಿ ಗೊಳಿಸಲಾಯಿತೆಂಬುದು ತಪ್ಪು. ಅದು ಇಖ್ವಾನಿಸಂ ಎಂಬ ತೀವ್ರ ಇಸ್ಲಾಮಿಸ್ಟ್ ಕರಾಳ ಗ್ರೂಪುಗಳನ್ನು ಬಿಳುಪು ಮಾಡುವ ಅಜೆಂಡಾದ ಭಾಗವಾಗಿದೆ.
2011 ರಲ್ಲಿ ನಡೆದ ಕ್ರಾಂತಿಯ ಹೆಸರಲ್ಲಿ ಪದಚ್ಯುತಿಗೊಂಡ ಮುರ್ಸಿಯನ್ನು ಸಹಜವಾಗಿಯೇ ವಿಚಾರಣಾ ಕೈದಿಯಾಗಿಸಿ ಜೈಲಲ್ಲಿ ಕೂರಿಸಲಾಯಿತು. ಜೈಲಿನಲ್ಲಿ ಮುರ್ಸಿಗೆ ಅನುಭವಿಸಬೇಕಾಗಿ ಬಂದ ಅಮಾನವೀಯ ಯಾತನೆಗಳು ಖಂಡನಾರ್ಹವಾಗಿದೆಯಾದರೂ
ಅದರಾಚೆಗೆ ಮುರ್ಸಿಗೆ ಕೆಲವರು ನೀಡುವ ಹುತಾತ್ಮ ಪದವಿಯ ಹಿಂದೆ ಮತರಾಜಕೀಯ ತೀವ್ರವಾದ ಗ್ರೂಪುಗಳ ಕೈವಾಡವಿದೆ.
ಮುರ್ಸಿ ಸಂಚರಿಸಿದ ಪಥ ಸರಿಯೆಂದಾದರೆ ಇಖ್ವಾನಿಸಂ ಸರಿಯಾದ ಪಥವೆಂದಾಗುತ್ತದೆ. ಇಖ್ವಾನಿಸಂ ಸರಿಯೆಂದಾದರೆ ಅದರ ಆದರ್ಶ ಆಶಯ ಬೇರುಗಳಾದ ಸಲಫಿಸಂ ಮತ್ತು ಮೌದೂದಿಸಂ ಸರಿಯೆಂದಾಗುತ್ತದೆ. ಇವೆರಡೂ ಸರಿಯೆಂದಾದರೆ ಈ ಆದರ್ಶದಿಂದ ಪ್ರಭಾವಿತರಾಗಿ ಜಗತ್ತಿನಾದ್ಯಂತ ನಡೆಯುವ ಉಗ್ರವಾದದ ವಿಧ್ವಂಸಕ ಕ್ರತ್ಯಗಳು ಸರಿಯೆಂದಾಗುತ್ತದೆ. ಮುರ್ಸಿಯ ಆದರ್ಶ ಸರಿಯೆಂದು ಒಪ್ಪಿಕೊಳ್ಳುವಾಗ, ಹಸನುಲ್ ಬನ್ನಾ,
ಸಯ್ಯದ್ ಖುತುಬ್ ಇವರು ಮಾದರೀ ಪುರುಷರಾಗಿ ಕಂಡ ರಶೀದ್ ರಿಳಾ, ಜಮಾಲ್ ಅಫ್ಘಾನಿ, ಮುಹಮ್ಮದ್ ಅಬ್ದು ಎಲ್ಲರೂ ಸರಿಯಾಗಿ ಕಾಣುತ್ತಾರೆ. ಹಾಗಾದರೆ ಈ ಕರಾಳ ಕೈಗಳು ಮುಂದಿಟ್ಟ, ಪಾಶ್ಚಾತೀಕರಿಸಿದ ಇಸ್ಲಾಂ ಕೂಡಾ ಸರಿಯಾದ ಇಸ್ಲಾಂ ಎಂದಾಗುತ್ತದೆ.
ಇದೆಲ್ಲವೂ ಸರಿಯೆಂದು ವಾದಿಸುವವರು ಮುರ್ಸಿಗೆ ಶಹೀದ್ ಪಟ್ಟ ನೀಡಿ ತಿಥಿ ಆಚರಿಸಿ ಆತ್ಮ ಸಂತ್ರಪ್ತಿಗೊಳ್ಳಲಿ.
ಮದೀನಾ ಮಿಹ್ರಾಬ್ ಬಳಿ ಮುರ್ಸಿ ನಮಾಜು ಮಾಡುವ ಚಿತ್ರವನ್ನು ತೋರಿಸಿ ಆವೇಶಭರಿತರಾಗುವುದನ್ನು ಕಾಣುವಾಗ, ನಮಾಜಿನ ಚಾಪೆಯಲ್ಲಿ ಕುಳಿತು ಕಣ್ಣು ಕೈಗಳನ್ನು ಮೇಲೆಕ್ಕೆತ್ತಿ ಪ್ರಾರ್ಥಿಸುವ ಸದ್ದಾಂ ಹುಸೈನರ ಚಿತ್ರ ನೆನಪಿಗೆ ಬಂತು .ಅದು ಕೂಡಾ ಕ್ರಾಂತಿಯ ನಂತರದ ಸಿಂಪಥಿ ಚಿತ್ರವಾಗಿತ್ತು






