ಪ್ರೀತಿಯ ಉಸ್ತಾದರೇ..
ನಿಮ್ಮನ್ನು ನಾನು ಇದುವರೆಗೂ ಮುಖತಃವಾಗಿ ನೋಡಿಲ್ಲ. ಆದರೂ ನನಗೆ ನಿಮ್ಮನ್ನು ಚೆನ್ನಾಗಿ ಗೊತ್ತು. ಅದು ನಿಮ್ಮ ಮುಖಾಂತರನೋ, ನಿಮ್ಮ ಶಿಷ್ಯ ವೃಂದದ ಮುಖಾಂತರವಾಗಿಯೋ ಅಲ್ಲ. ತಮಗೆ ಯಾರೊಡನೆಯೂ ವೈರತ್ವ ಇಲ್ಲದಿದ್ದರೂ, ನಿಮ್ಮ ಯಶಸ್ಸುಗಳನ್ನು ನೋಡಿ ವೈರತ್ವ ಬೆಳೆಸಿಕೊಂಡವರ ಮೂಲಕವಾಗಿತ್ತು ನಾನು ಮೊದಲನೆಯದಾಗಿ ನಿಮ್ಮನ್ನು ಪರಿಚಯಿಸಿಕೊಂಡದ್ದು..ಮೊದಲನೆಯದಾಗಿ ಕೇಳಿಸಿಕೊಂಡದ್ದು…
ಪಂಡಿತರ ಪ್ರೊಫೆಶನಲ್ ಎಂದು ಒಮ್ಮೆ ಮನೋರಮಾ ಪತ್ರಿಕೆಯು ಬರೆದದ್ದನ್ನು ಓದಿದ ನಂತರವಾಗಿತ್ತು ನಾನು ನಿಮ್ಮನ್ನು ಗಮನಿಸತೊಡಗಿದ್ದು.
ಯಾರೊಡನೆಯೂ ವೈರತ್ವವಿಲ್ಲದೆ , ಮುಗುಳ್ನಗೆಯೊಂದಿಗೆ ಅನಾಥರ ಪಾಲಿನ ಆಸರೆಯಾಗಿ, ಆಸರೆಯಿಲ್ಲದವರ ಪಾಲಿನ ರಕ್ಷಕರಾಗಿ, ಪಂಡಿತರ ಉಸ್ತಾದರಾಗಿ, ಜಗತ್ತು ಗುರುತಿಸುವ, ಗೌರವಿಸುವ ಭಾರತದ ಮುಸ್ಲಿಂ ನಾಯಕನಾಗಿ, ಈ ಪಟ್ಟಿ ಎಣಿಸಿ ಮುಗಿಸಲು ಸಾಧ್ಯವಿಲ್ಲ.
ಮುಟ್ಟಿದೆಲ್ಲವನ್ನೂ ಚಿನ್ನವಾಗಿ ಮಾರ್ಪಡಿಸುವ ತಮ್ಮೊಂದಿಗೆ ಮಾತನ್ನು ದೀರ್ಗಗೊಳಿಸದೆ ವಿಷಯವನ್ನು ಹಂಚಿಕೊಳ್ಳುತ್ತೇನೆ. ಸಾಂಸ್ಕೃತಿಕ ಕೇರಳಕ್ಕೆ ಒಂದು ಮೆಡಿಕಲ್ ಕಾಲೇಜಿನ ಅಗತ್ಯತೆಯಿದೆ. ಅದು ಕೇರಳದಲ್ಲೇ ಆಗಬೇಕೆಂದಿಲ್ಲ. ತಾವೊಮ್ಮೆ ಬೆರಳು ತೋರಿಸಿದರೆ ಪ್ರಾಣವನ್ನು ನೀಡಲೂ ಸಿದ್ದರಿರುವ ಜನಲಕ್ಷಗಳನ್ನೊಳಗೊಂಡ ಒಂದು ಸಮೂಹವು ಎಲ್ಲದಕ್ಕೂ ರೆಡಿಯಾಗಿ ತಮ್ಮೊಂದಿಗಿರುವರು ಅನ್ನುವುದು ತಮ್ಮ ಕೆಲವೊಂದು ತೀರ್ಮಾನಗಳು ಸಾಕ್ಷಿಯಾಗಿಸಿದೆ.
ಅದಲ್ಲದೆ ನೂರಾರು ಮೆಡಿಕಲ್ ಕಾಲೇಜ್ ಗಳಲ್ಲಿ ತಮ್ಮ ನೇತೃತ್ವದಲ್ಲಿ ಸಾಂತ್ವನ ಸೇವೆಯ ಮೂಲಕ ಕೋಟಿಗಳನ್ನು ವ್ಯಯಿಸಿ ಕೇರಳ ಮಾತ್ರವಲ್ಲದೆ ಭಾರತದ ಇತರ ಪ್ರದೇಶಗಳಲ್ಲೂ ಜಾತಿ, ಧರ್ಮವನ್ನು ನೋಡದೆ ನಡೆಸಲಾಗುತ್ತಿದೆ.
ಒಬ್ಬಳು ಮಲಯಾಳಿ ಅನ್ನುವ ಕಾರಣಕ್ಕಾಗಿ ನಾನು ಅಭಿಮಾನ ಪಡುತ್ತಿದ್ದೇನೆ.
ಒಂದು ಕೆಲಸವನ್ನು ಮಾಡಬೇಕೆಂದು ತೀರ್ಮಾನಿಸಿದರೆ ಬೆಟ್ಟದಷ್ಟು ಸಮಸ್ಯೆಗಳು ಎದುರಾದರೂ, ಮುಗುಳ್ನಗೆಯೊಂದಿಗೆ ಎದುರಿಸುವ ದೊಡ್ಡ ಧೈರ್ಯವನ್ನು ನಾನು ಕಂಡದ್ದು ನಿಮ್ಮಲ್ಲಿ ಮಾತ್ರವಾಗಿದೆ.
ಈ ಭೂಮಿಯಲ್ಲಿ ಐದು ಸೆಂಟ್ಸ್ ಜಾಗ ಇಲ್ಲ ಅಂತ ಹೇಳಲ್ಪಟ್ಟ ನೋಲೆಡ್ಜ್ ಸಿಟಿ , ಎಲ್ಲಾ ಸಂಕಷ್ಟ, ಸಮಸ್ಯೆಗಳನ್ನು ಬದಿಗೊತ್ತಿ ಉದ್ಘಾಟನೆಗೆ ಸಜ್ಜುಗೊಂಡಿರುವುದು ಕೇವಲ ಉದಾಹರಣೆ ಮಾತ್ರ!
ಕೆಲವು ವಿಷಯಗಳನ್ನು ಹಂಚಲು ಹಲವರಿದ್ದಾರೆ, ಆದರೆ ನಿಮಗೆ ನೀವೇ ಸರಿಸಾಟಿ. ಇಷ್ಟೊಂದು ವೈರತ್ವವನ್ನು ಎದುರಿಸಿಯೂ ಎಲ್ಲರೊಂದಿಗೂ ಸೌಹಾರ್ದತೆಯೊಂದಿಗೆ ಮುನ್ನಡೆಯುವುದು ಹೇಗೆ ಎಂದು ಹಲವಾರು ಬಾರಿ ನನ್ನಲ್ಲಿ ಆಶ್ಚರ್ಯವನ್ನು ಮೂಡಿಸಿದೆ.
ಕಮಾಲಿಯಾ ಮೆಡಿಕಲ್ ಕಾಲೇಜ್ ಅನ್ನುವ ಕನಸಿನ ಪದ್ಧತಿಯು ರಾಜಕೀಯ ಅಂಧತ್ವನ್ನು ಬೆಳೆಸಿದ ಕೆಲವರಿಂದಾಗಿ ಇಲ್ಲವಾಗಿಸಿದ್ದು ಮರೆತಿಲ್ಲ. ಸಮುದಾಯದ ಹೆಸರೇಳಿಕೊಂಡು ಕೆಲವರು ಹಿಂದಿನಿಂದ ತೋರಿದ ದ್ವೇಷಕ್ಕೆ ಬಲಿಪಶುಗಳಾದದ್ದು ಇದೇ ಸಮುದಾಯವಾಗಿದೆ.ಈ ಸಮುದಾಯಕ್ಕೆ ನ್ಯಾಯ, ಭಯಮುಕ್ತ ಕ್ಯಾಂಪಸ್ ಗಳು ಬೇಕು ಅನ್ನುವುದು ನಿಜ.
ತಮ್ಮಂತೆ ಜಗತ್ತು ಗುರುತಿಸಲ್ಪಡುವ ಇನ್ನೊಬ್ಬ ಮುಸ್ಲಿಂ ನಾಯಕ ಭಾರತದಲ್ಲಿಲ್ಲ.
ಮುಸ್ಲಿಂ ಭಾರತಕ್ಕೆ ಐಟೆಕ್ ಕನಸುಗಳನ್ನು ಕಾಣಲು ಕಲಿಸಿದ್ದೂ, ಸಮುದಾಯದ ಪಂಡಿತರನ್ನು ಐಕಾನ್ ಗಳಂತೆ ಕಾಣಲು ಪ್ರೇರೇಪಿಸಿದ್ದೂ ನೀವು. ಬಾಂಬ್ ಸ್ಪೋಟಗಳ ಸದ್ದುಗಳೊಂದಿಗೆ ಜೀವಿಸುತ್ತಿದ್ದ ಕಾಶ್ಮೀರದ ಮಕ್ಕಳನ್ನು ಮರ್ಕಝ್ ಗೆ ಕರೆತಂದು, ಅಲ್ಲಿ ಅವರನ್ನು ಈ ದೇಶಕ್ಕಾಗಿ ಹೋರಾಡುವಂತಹ ಮನೋಸ್ಥಿತಿಯನ್ನು ಬೆಳೆಸಲು ಪ್ರೇರಣೆ ನೀವಾಗಿರುವಿರಿ.
ಉತ್ತರ ಪ್ರದೇಶ, ಬಿಹಾರ, ಕಾಶ್ಮೀರ ಸೇರಿದಂತೆ ನೀವು ನಿಮ್ಮ ಸೇವೆ ಲಭಿಸದ ರಾಜ್ಯಗಳು ಇಲ್ಲ ಅಂತಲೇ ಹೇಳಬಹುದು.
ಭಾರತದ ವಿವಿಧ ಭಾಗಗಳಲ್ಲಿ ಸಮುದಾಯ, ಸಂಘಟನೆಗಳ ಸಮಯದಾಯದ ಅಭ್ಯುದಯಕ್ಕಾಗಿ ಓಡಾಡಿದ ಚರಿತ್ರೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ರಿಂದಾಗಿದೆ ದೇಶ ಕೇಳಿದ್ದು.
ಮರೆಯಲು ಸಾಧ್ಯವಿಲ್ಲ ನಮ್ಮ ರಾಜ್ಯದಲ್ಲಿ ಯಾವುದೇ ಮಕ್ಕಳೂ ಆಹಾರ ಸಿಗದೆ ಅಲೆಯಬಾರದು ಎಂದು ಹೇಳಲು SYS ಹಾಗೂ SSF ನ ಕರ್ಮಧೀರ ಕಾರ್ಯಕರ್ತರಿಗೆ ಕಲಿಸಿಕೊಟ್ಟದ್ದು ತಾವು. ತಾವು ಮನಸ್ಸು ಮಾಡಿದ್ದೇ ಆದಲ್ಲಿ ನಾನು ವಿನಂತಿಸಿದ್ದು ಖಂಡಿತವಾಗಿಯೂ ನಡೆಯಬಹುದು. ನನ್ನ ವಿನಂತಿ ತಮ್ಮ ಗಮನದಲ್ಲಿರಬಹುದೆಂಬ ನಿರೀಕ್ಷೆಯೊಂದಿಗೆ,
ಕೆಲವೊಂದು ಕಾರಣಗಳಿಂದ ನಿಮ್ಮ ಗಮನಕ್ಕೆ ಬಂದಿಲ್ಲದಿದ್ದಲ್ಲಿ ಮತ್ತೊಮ್ಮೆ ಕಾಣುವೆ ಅನ್ನುವ ಆತ್ಮವಿಶ್ವಾಸದೊಂದಿಗೆ,ಗೌರವಾದರಗಳೊಂದಿಗೆ…
ಫಾತಿಮಾ ರಶೀದ್.
https://m.facebook.com/story.php?story_fbid=1396625597145734&id=100003949211425
ಅನುವಾದ : ಸ್ನೇಹಜೀವಿ ಅಡ್ಕ
ಸಹಕಾರ : ಇಮ್ತಿ ಬೈರಿಕಟ್ಟೆ, ಹಾರಿಸ್ ಕೋನಿಮಾರ್