ವೆಲ್ಲಿಂಗ್ಟನ್ : ನ್ಯೂಝಿಲೆಂಡ್ ನಲ್ಲಿ ಮುಸ್ಲಿಮ್ ಮಸೀದಿಗಳ ವಿರುಧ್ಧ ನಡೆದ ಭೀಕರ ದಾಳಿಯ ಹಿನ್ನಲೆಯಲ್ಲಿ ಅಲ್ಲಿನ ಮುಸ್ಲಿಮರನ್ನು ಸಾಂತ್ವನ ಪಡಿಸಿ,ಧನಾತ್ಮಕ ಮತ್ತು ಅನುಕರಣೀಯ ಹೆಜ್ಜೆಯನ್ನಿಟ್ಟ ಪ್ರಧಾನ ಮಂತ್ರಿ ಜಸಿಂತ ಆರ್ಡೇನ್ ಅವರಿಗೆ ಇಂಡಿಯನ್ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಳುಹಿಸಿದ ಪತ್ರವನ್ನು ಹಸ್ತಾಂತರಿಸಲಾಯ್ತು.
ನ್ಯೂಝಿಲೆಂಡ್ ಪಾರ್ಲಿಮೆಂಟ್ ಸಭೆಯಲ್ಲಿ ಲೇಬರ್ ಪಾರ್ಟಿ ಎಂ.ಪಿ. ಗ್ರೆಗ್ ಒಕೋರನ್ನರ್ ಪ್ರಧಾನ ಮಂತ್ರಿಗೆ ಪತ್ರವನ್ನು ಹಸ್ತಾಂತರಿಸಿದರು.
ಯುಎಇ ಯ ನ್ಯೂಝಿಲೆಂಡ್ ರಾಯಬಾರಿ ಮಾತ್ಯು ಹೋಕಿನ್ಸ್ ಮೂಲಕ ಈ ಪತ್ರವನ್ನು ಕಳುಹಿಸಲಾಗಿತ್ತು.
ಮುಸ್ಲಿಮರು ಆಘಾತಕ್ಕೊಳಗಾಗಿದ್ದ ಸಂದರ್ಭದಲ್ಲಿ ಅವರೊಲ್ಲಬ್ಬರಂತೆ ಧೈರ್ಯ ತುಂಬಿ, ಭಯೋತ್ಪಾದಕರ ಎಲ್ಲಾ ಯೋಜನೆಗಳನ್ನು ನಿರ್ನಾಮ ಮಾಡಿದ ನ್ಯೂಝಿಲೆಂಡ್ ಸರ್ಕಾರದ ನಿರ್ಧಾರವನ್ನು ಗ್ರಾಂಡ್ ಮುಫ್ತಿ ಪತ್ರದಲ್ಲಿ ಪ್ರಶಂಸಿಸಿದ್ದರು.
ವಿಶ್ವದ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಯಿರುವ ದೇಶಗಳಲ್ಲೊಂದಾದ ಭಾರತದ ಗ್ರ್ಯಾಂಡ್ ಮುಫ್ತಿಯವರು ಕಳುಹಿಸಿದ ಪತ್ರ ನೋಡಿ ಅತಿಯಾದ ಸಂತೋಷವಾಯಿತೆಂದೂ, ಪತ್ರದಲ್ಲಿ ಉಲ್ಲೇಖಿಸಲಾದ ಮೆಷಿನ್ ಗನ್’ಗಳ ನಿಷೇಧ ಸಹಿತ ಎಲ್ಲಾ ಕಾರ್ಯಗಳನ್ನು ಕಾನೂನುಬದ್ಧವಾಗಿ ಜಾರಿಗೆ ತರಲಾಗುವುದು ಎಂದು ಪ್ರಧಾನಿ ಜೆಸಿಂತಾ ಹೇಳಿದರು.