ಮಕ್ಕಾ: ಪವಿತ್ರ ರಮಝಾನ್ ಮತ್ತು ಮಸ್ಜಿದುಲ್ ಹರಾಮ್‌ಗೆ ಗೌರವ ತೋರಲು ವಿಶ್ವಾಸಿಗಳಿಗೆ ಸಾಧ್ಯವಾಗ ಬೇಕೆಂದು ದ್ವಿಹರಮ್‌ಗಳ ಕಾರ್ಯಾಲಯ ಅಧಿಕಾರಿ ಶೈಖ್ ಡಾ.ಅಬ್ದುರ್ರಹ್ಮಾನ್ ಅಲ್ ಸುದೈಸ್ ಹೇಳಿದ್ದಾರೆ.
ಅತ್ಯಂತ ಪ್ರತಿಫಲ ಲಭಿಸುವ ಪುನೀತ ರಾತ್ರಿಗಳಲ್ಲಿ ಐಹಿಕ ಕೃತ್ಯಗಳಲ್ಲಿ ಮುಳುಗದಿರುವಂತೆ ಎಚ್ಚರ ವಹಿಸಬೇಕು.ಮಹಿಳೆಯರಿಗೆ ನಮಾಜ್ ನಿರ್ವಹಿಸಲು ಉತ್ತಮ ಅವರ ಮನೆಯಾಗಿದೆ.ಅದೇ ವೇಳೆ ತ್ವವಾಫ್ ಗಾಗಿ ಮತ್ತು ರೌಳಾ ಝಿಯಾರತ್ ಗಾಗಿ ಆಗಮಿಸುವ ಮಹಿಳೆಯರು ಇಸ್ಲಾಮ್ ಪ್ರತಿಪಾದಿಸಿದ ರೀತಿಯಲ್ಲಿರುವ ವಸ್ತ್ರಗಳನ್ನು ಧರಿಸಿ ಮಸೀದಿಗೆ ಬರುವಂತೆ ಇಶಾ ನಮಾಝಿನ ಬಳಿಕ ನಡೆದ ಪ್ರವಚನದಲ್ಲಿ ಅವರು ಹೇಳಿದರು.
ರಮಝಾನ್ ನಲ್ಲಿ ತ್ವವಾಫ್ ಮಾಡುವವರಿಗಾಗಿ ಮತಾಫನ್ನು ಸೀಮಿತ ಗೊಳಿಸಲಾಗಿದ್ದು, ವಿಶ್ವಾ ಸಿಗಳಿಗೆ ತೊಂದರೆ ಉಂಟಾಗುವ ರೀತಿಯಲ್ಲಿ ಹರಮ್ ಒಳಗಿನ ನಡೆದಾರಿಯಲ್ಲಿ ದಟ್ಟಣೆ ಉಂಟು ಮಾಡಬಾರದು. ಯಾತ್ರಾರ್ಥಿಗಳ ಸಹಕಾರಕ್ಕಾಗಿ ಸುರಕ್ಷಾ ವಿಭಾಗಗಳನ್ನು ನಿಯುಕ್ತಿಗೊಳಿಸಲಾಗಿದ್ದು, ಅವರ ನಿರ್ದೇಶನಗಳನ್ನು ಕಡೆಗಣಿಸದಿರುವಂತೆ ಶೈಖ್ ಅಲ್ ಸುದೈಸ್ ಹೇಳಿದ್ದಾರೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ