ದುಬೈ: ವಾಟ್ಸ್ ಆ್ಯಪ್ ಖಾತೆಗಳನ್ನು ಹ್ಯಾಕ್ ಮಾಡುವ ಹುನ್ನಾರಗಳ ವಿರುದ್ದ ಜಾಗರೂಕತೆಯಿಂದ ಇರುವಂತೆ ಯುಎಇ ಟೆಲಿಕಾಂ ರೆಗುಲೇಟರಿ ಅಥಾರಿಟಿಯು ಎಚ್ಚರಿಕೆ ನೀಡಿದೆ. ಅಜ್ಞಾತರು ಕಳುಹಿಸುವ ವೆರಿಫಿಕೇಶನ್ ಕೋಡ್ಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಅಥಾರಿಟಿ ವ್ಯಕ್ತಪಡಿಸಿದೆ.
ವಾಟ್ಸ್ ಆ್ಯಪ್ ಪ್ರಾರಂಭಿಸುವಾಗ ಲಭಿಸುವ ವೆರಿಫಿಕೇಶನ್ ಕೋಡ್ಗಳಿಗಲ್ಲದೆ ಯಾವುದೇ ಅನ್ಯ ವೆರಿಫಿಕೇಶನ್ಗೆ ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿಲ್ಲ. ಹೀಗೆ ಲಭಿಸುವ ಕೋಡ್ಗಳನ್ನು ಅನ್ಯರೊಂದಿಗೆ ವಿನಿಮಯ ಮಾಡುವುದೂ ತರವಲ್ಲ ಎಂದು ಅಥಾರಿಟಿ ತಿಳಿಸಿದ್ದು, ಒಂದು ವೇಳೆ ಹಾಗೇನಾದರೂ ಕೋಡ್ಗಳನ್ನು ನೀಡಿದಲ್ಲಿ ನಿಮ್ಮ ವಾಟ್ಸ್ ಆ್ಯಪ್ ಹ್ಯಾಕ್ ಮಾಡಲ್ಪಡುವ ಸಾಧ್ಯತೆ ಅತೀ ಹೆಚ್ಚು ಎಂದಿದೆ. ಅಕೌಂಟ್ ವೆರಿಫೈ ಮಾಡುವ ನೆಪದಲ್ಲಿ ಬರುವ ಲಿಂಕ್ ಮತ್ತು ಅಟಾಚ್ಮೆಂಟ್ಗಳನ್ನು ಕಡೆಗಣಿಸುವಂತೆಯೂ ಅಥಾರಿಟಿ ಎಚ್ಚರಿಸಿದೆ.
ಅನುಮಾನಾಸ್ಪದ ಲಿಂಕ್ಗಳನ್ನು ತೆರೆಯುವುದಾಗಲಿ, ನಿಮ್ಮ ಮಾಹಿತಿಯನ್ನು ನೀಡುವುದಾಗಲಿ ಮಾಡಬಾರದು. ಹ್ಯಾಕರ್ಗಳು ಹಾದಿ ತಪ್ಪಿಸುವ ಸಲುವಾಗಿ ಇಂಗ್ಲೀಷ್ ಹೊರತಾಗಿ ಫ್ರೆಂಚ್ ಭಾಷೆಯಲ್ಲೂ ವೆರಿಫಿಕೇಶನ್ ಕೋಡ್ಗಳನ್ನು ಕಳುಹಿಸುತ್ತಾರೆ. ಇಂತಹ ವಂಚನೆಗಳ ಬಗ್ಗೆ ಜಾಗರೂಕತೆಯಿಂದ ಇರುವಂತೆ ಟಿಆರ್ಎ ತಿಳಿಸಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ