ಬೆಂಗಳೂರು: ದೇಶಾದ್ಯಂತ ಇಂದು ಎರಡನೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಒಟ್ಟು 11 ರಾಜ್ಯಗಳ 95 ಲೋಕಸಭಾ ಕ್ಷೇತ್ರಗಳಿಗೆ ಇಂದು ಮನದಾನ ನಡೆದಿದೆ. ರಾಜ್ಯದ 14 ಕ್ಷೇತ್ರಗಳಿಗೂ ಚುನಾವಣೆ ನಡೆದಿದ್ದು, ಒಟ್ಟಾರೆ ಶೇ.62ರಷ್ಟು ಮತದಾನವಾಗಿದೆ.
ರಾಜ್ಯದ 14 ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದಲ್ಲೇ ಮತದಾನ ಆರಂಭವಾಯಿತು. ಕೆಲವು ಅಹಿತಕರ ಘಟನೆಗಳನ್ನು ಹೊರತುಪಡಿಸಿ, ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ.
ಬೆಳಗ್ಗೆ 9 ಗಂಟೆ ವೇಳೆಗೆ ಶೇ.7.57ರಷ್ಟು ಮತದಾನವಾಗಿತ್ತು. 11 ಗಂಟೆಗೆ ಶೇ.19.58, ಮತದಾನ, 1 ಗಂಟೆಗೆ ಶೇ.36.31ರಷ್ಟು ಮತದಾನ, 3 ಗಂಟೆಗೆ 48.97 ಹಾಗೂ 5 ಗಂಟೆಗೆ 61.94ರಷ್ಟು ಮತದಾನವಾಗಿತ್ತು. 6 ಗಂಟೆಗೆ ಮತದಾನ ಮುಕ್ತಾಯದ ಮಾಹಿತಿ ಇನ್ನೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ. ಅಂದಾಜಿನ ಪ್ರಕಾರ ಜಿಲ್ಲಾವಾರು ಮತದಾನದ ಶೇಕಡವಾರು ವಿವರ ಇಲ್ಲಿದೆ.
- ದಕ್ಷಿಣ ಕನ್ನಡ – 72.97%
- ಉಡುಪಿ ಚಿಕ್ಕಮಗಳೂರು – 69.84%
- ಹಾಸನ – 71.20%
- ಚಿತ್ರದುರ್ಗ – 61.75%
- ತುಮಕೂರು – 70.28%
- ಮಂಡ್ಯ – 71.25%
- ಮೈಸೂರು – 63.20%
- ಚಾಮರಾಜನಗರ – 66.51%
- ಬೆಂಗಳೂರು ಗ್ರಾಮಾಂತರ – 59.43%
- ಬೆಂಗಳೂರು ಉತ್ತರ – 48.28%
- ಬೆಂಗಳೂರು ಕೇಂದ್ರ – 42.43%
- ಕೋಲಾರ – 69.99%
- ಚಿಕ್ಕಬಳ್ಳಾಪುರ – 69.33%
- ಬೆಂಗಳೂರು ದಕ್ಷಿಣ – 49.36%