ರಿಯಾದ್: ಸೌದಿ ಖಾಸಗಿ ವಲಯದಲ್ಲಿ ಸಂಬಳವನ್ನು ಸಕಾಲದಲ್ಲಿ ಒದಗಿಸುವ ಸಂಸ್ಥೆಗಳನ್ನು ಪತ್ತೆಹಚ್ಚಲು ಅಲ್ಲಿನ ಕಾರ್ಮಿಕ ಸಚಿವಾಲಯವು ಹೊಸ ವ್ಯವಸ್ಥೆಯನ್ನು ಸ್ಥಾಪಿಸುತ್ತಿದ್ದು, ನೌಕರರಿಗೆ ಸಂಪೂರ್ಣ ಸಂಬಳ ನೀಡುವಲ್ಲಿ ನಿಖರತೆ ಪಾಲಿಸಿರುವ ಬಗೆಗಿನ ಪ್ರಮಾಣಪತ್ರವನ್ನು ಆನ್ ಲೈನ್ ಮೂಲಕ ಪಡೆಯುವ ಹೊಸ ವ್ಯವಸ್ಥೆ ಇದಾಗಿದೆ.
ಕಾರ್ಮಿಕ ಸಚಿವಾಲಯದ ಅಡಿಯಲ್ಲಿ ಈ ಯೋಜನೆ ಜಾರಿಯಾಗುತ್ತಿದ್ದು, ಮುಂಚಿತವಾಗಿ ವಿತರಿಸಲಾದ ವೇತನ ಭದ್ರತೆ ಕಾನೂನು ಸಂಸ್ಥೆಗಳ ಪತ್ತೆಹಚ್ಚುವಿಕೆ ಕೂಡ ಹೊಸ ವ್ಯವಸ್ಥೆಯ ಗುರಿಯಾಗಿದೆ. ಅದೂ ಅಲ್ಲದೆ ಅಂತಹ ಕಂಪನಿಗಳಿಗೆ ಉದ್ಯೋಗಿಗಳನ್ನು ಆಕರ್ಷಿಸುವುದು ಕೂಡ ಸಚಿವಾಲಯದ ಉದ್ದೇಶ ಎನ್ನಲಾಗಿದೆ.
ಆನ್ ಲೈನ್ ಮೂಲಕ ಪಡೆದುಕೊಳ್ಳುವ ಪ್ರಮಾಣಪತ್ರಕ್ಕೆ ಎರಡು ತಿಂಗಳ ಕಾಲಾವಧಿಯಿದ್ದು, ಕಳೆದ ಮೂರು ತಿಂಗಳುಗಳು ಸಂಪೂರ್ಣ ನೌಕರರಿಗೆ ಸಂಬಳ ನಿಖರವಾಗಿ ಕೊಟ್ಟಿರಬೇಕು, ವಿಮೆ ಸುರಕ್ಷತೆ ಕಾನೂನು ಬಗ್ಗೆ ದೂರು ಇಲ್ಲದಿರಬೇಕು ಎಂಬುದು ಪ್ರಮಾಣ ಪತ್ರ ಪಡೆಯಲು ಷರತ್ತುಗಳಾಗಿವೆ.
ಹೊಸ ವಿಧಾನ ಮೂಲಕ ಹೆಚ್ಚಿನ ಸ್ವದೇಶಿಗಳನ್ನು ಖಾಸಗಿ ವಲಯಕ್ಕೆ ಆಕರ್ಷಿಸುವುದು ಸಾಧ್ಯವಿದೆ ಎಂದು ಉದ್ಯೋಗ ಸಚಿವಾಲಯವು ನಿರೀಕ್ಷಿಸುತ್ತಿದೆ.