janadhvani

Kannada Online News Paper

ಉಮ್ರಾ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ-6 ತಿಂಗಳಲ್ಲಿ 41 ಲಕ್ಷ ವೀಸಾ ಬಿಡುಗಡೆ

ಜಿದ್ದಾ: ಪವಿತ್ರ ಉಮ್ರಾಗೆ ಈ ಋತುವಿನ ಪ್ರಾರಂಭದಿಂದ ಕಳೆದ ವಾರದ ವರೆಗೆ 41 ಲಕ್ಷ ವೀಸಾಗಳನ್ನು ನೀಡಲಾಗಿದೆ. ಹಜ್ ಮತ್ತು ಉಮ್ರಾ ಸಚಿವಾಲಯದ ಪ್ರಕಾರ, ಹಜ್, ಉಮ್ರಾ ಸೇವಾ ಕಂಪೆನಿಗಳಲ್ಲಿ 8430 ಪುರುಷರು ಮತ್ತು 1739 ಮಹಿಳೆಯರು ಸೇವಾ ನಿರತರಾಗಿದ್ದಾರೆ.

ಒಟ್ಟು 41,16,827 ವೀಸಾಗಳನ್ನು ನೀಡಲಾಗಿದೆ. ಈ ಪೈಕಿ 36,72,648 ಯಾತ್ರಿಗಳು ಪವಿತ್ರ ಭೂಮಿಗೆ ತಲುಪಿದ್ದಾರೆ. 4,39,785 ಯಾತ್ರಿಕರು ಸೌದಿ ಅರೇಬಿಯಾದಲ್ಲಿದ್ದು, ಉಳಿದವರು ಉಮ್ರಾ ನಿರ್ವಹಿಸಿದ ನಂತರ ತಮ್ಮ ದೇಶಕ್ಕೆ ಮರಳಿದ್ದಾರೆ. ವಿಮಾನಗಳ ಮೂಲಕ ಹೆಚ್ಚಿನ ಉಮ್ರಾ ಯಾತ್ರಿಕರು ಇಲ್ಲಿಗೆ ಆಗಮಿಸಿದರು.

ಈ ವರ್ಷದ ಉಮ್ರಾ ಯಾತ್ರೆಯು 2018 ಸೆಪ್ಟೆಂಬರ್ 11ರಿಂದ ಪ್ರಾರಂಭವಾಗಿದೆ.ಈ ಉಮ್ರಾ ಋತುವಿನಲ್ಲಿ ಹೆಚ್ಚಿನ ಯಾತ್ರಿಕರು ಪಾಕಿಸ್ತಾನದಿಂದ ಆಗಮಿಸಿದ್ದಾರೆ. 9,10,028 ಯಾತ್ರಿಕರು ಪಾಕಿಸ್ತಾನದಿಂದ ಆಗಮಿಸಿದ್ದು, 5,96,970 ಯಾತ್ರಿಕರು ಇಂಡೋನೇಷ್ಯಾದಿಂದಲೂ ಆಗಮಿಸಿದರು. ಭಾರತದಿಂದ 3,91,087 ಯಾತ್ರಿಗಳು ಸೌದಿ ಅರೇಬಿಯಾಕ್ಕೆ ಆಗಮಿಸಿದರು. ವಿಷನ್ 2030 ರ ಭಾಗವಾಗಿ ಎರಡು ಕೋಟಿ ಯಾತ್ರಿಕರಿಗೆ ಅನುಕೂಲವಾಗುವಂತೆ ಸೌಕರ್ಯಗಳನ್ನು ಒದಗಿಸಲು ಸೌದಿ ಸರ್ಕಾರ ಯೋಜನೆ ರೂಪಿಸುತ್ತಿದೆ.

error: Content is protected !! Not allowed copy content from janadhvani.com