janadhvani

Kannada Online News Paper

ಭಾರತ-ಪಾಕ್ ಬಿಕ್ಕಟ್ಟನ್ನು ಚರ್ಚೆಗಳ ಮೂಲಕ ಬಗೆಹರಿಸಬೇಕು-ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ.ಉಸ್ತಾದ್

ಕೋಝಿಕ್ಕೋಡ್: ಭಾರತ-ಪಾಕ್ ಬಿಕ್ಕಟ್ಟನ್ನು ಶಾಂತಿಯುತ ಚರ್ಚೆಗಳ ಮೂಲಕ ಪರಿಹರಿಸಬೇಕು ಎಂದು ಭಾರತದ ಗ್ರಾಂಡ್ ಮುಫ್ತಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದರು.

ದಕ್ಷಿಣ ಭಾರತದ ಸಾಮಾಜಿಕ ರಾಜಕಾರಣಿಗಳ ನೇತೃತ್ವದಲ್ಲಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರಿಗೆ ಕೋಝಿಕೋಡ್ ನಲ್ಲಿ ಏರ್ಪಡಿಸಿದ್ದ ಆತಿಥ್ಯ ಸಮಾವೇಶದಲ್ಲಿ ಮಾತನಾಡುತ್ತಿದ್ದರು.

ಭಾರತ ಮತ್ತು ಪಾಕಿಸ್ತಾನ ನಡುವಿನ ಸಮಸ್ಯೆಗಳನ್ನು ಚರ್ಚೆಯ ಮೂಲಕ ಬಗೆಹರಿಸಬೇಕು. ಪಾಕಿಸ್ತಾನವು ಭಾರತದ ಮೇಲೆ ನಡೆಸುತ್ತಿರುವ ದಾಳಿಯನ್ನು ವಿಶ್ವಸಂಸ್ಥೆಯು ಗಂಭೀರವಾಗಿ ಪರಿಗಣಿಸಿ,ಜಾಗತಿಕ ನ್ಯಾಯಾಲದಲ್ಲಿ ಪರಿಹಾರ ಕಾಣಬೇಕು.ಗಡಿಯಲ್ಲಿ ಪಾಕಿಸ್ತಾನ ನಡೆಸುತ್ತಿರುವ ದಾಳಿಯು ಅನ್ಯಾಯವಾಗಿದೆ. ಅವುಗಳನ್ನು ನಿಲ್ಲಿಸಬೇಕು. ಆದರೆ ಯುದ್ಧವು ತ್ವರಿತ ಪರಿಹಾರವಾಗಿರಬಾರದು.

ಅಣ್ವಸ್ತ್ರ ಹೊಂದಿರುವ ಎರಡು ದೇಶಗಳು ಯುದ್ಧಕ್ಕೆ ಮುಂದಾದಾಗ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವು ನಾಗರಿಕರು ಸಂಕಷ್ಟಕ್ಕೀಡಾಗುತ್ತಾರೆ. ಪ್ರಪಂಚದಲ್ಲಿ ನಡೆದ ಯುದ್ಧಗಳಲ್ಲಿ ಅನೇಕ ನಾಗರಿಕರನ್ನು ಕಳಕೊಂಡ ಇತಿಹಾಸವು ನಮ್ಮ ಮುಂದಿದೆ .ಶಾಂತಿಯುತ ಪ್ರಕ್ರಿಯೆಗಳ ಮೂಲಕ ಸಮಸ್ಯೆಯನ್ನು ಬಗೆಹರಿಸಬಹುದಾದರೆ, ಜಗತ್ತಿನಲ್ಲಿ ಭಾರತ ತನ್ನ ಖ್ಯಾತಿಯನ್ನು ಹೆಚ್ಚಿಸಲಿದೆ ಎಂದು ಕಾಂತಪುರಂ ಹೇಳಿದರು.

ಅಬುಧಾಬಿಯಲ್ಲಿ ನಡೆಯುತ್ತಿರುವ ಇಸ್ಲಾಮಿಕ್ ದೇಶಗಳ ಸಂಘಟನೆ (ಒಐಸಿ) ಯ ವಿದೇಶಾಂಗ ಮಂತ್ರಿಗಳ ಶೃಂಗಸಭೆಯಲ್ಲಿ ಭಾರತಕ್ಕೆ ನೀಡಲಾದ ಗೌರವ ಅತಿಥಿಗಳ ಸ್ಥಾನಮಾನವು ಸಂಸ್ಥೆಯಿಂದ ಗಮನಾರ್ಹವಾದ ಸೂಚಕವಾಗಿದೆ ಎಂದು ಮುಸ್ಲಿಯಾರ್ ಗಮನಸೆಳೆದಿದ್ದಾರೆ.

ಇದು ದಕ್ಷಿಣ ಏಷ್ಯಾದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಹೇತುವಾಗಲಿದೆ.ವಿಶ್ವದಲ್ಲೇ ಅತೀ ಹೆಚ್ಚು ಮುಸ್ಲಿಮರಿರುವ ಎರಡನೇ ದೇಶ ಭಾರತಕ್ಕೆ ಒಐಸಿ ಯಲ್ಲಿ ಪೂರ್ಣ ಸದಸ್ಯ ಸ್ಥಾನಮಾನಕ್ಕೆ ಒತ್ತು ನೀಡಬೇಕೆಂದು ಅವರು ಆಗ್ರಹಿಸಿದರು.

error: Content is protected !! Not allowed copy content from janadhvani.com