janadhvani

Kannada Online News Paper

ದೇಶದ ಮೂಲೆ ಮೂಲೆಗಳಲ್ಲೂ ವಿಮಾನ ನಿಲ್ದಾಣ-ವಿಮಾನಯಾನ ಸಚಿವ

ಬೆಂಗಳೂರು,(ಫೆ.20): ಇಂದಿನಿಂದ ಬೆಂಗಳೂರಿನಲ್ಲಿ ಏರ್​ ಶೋ ಪ್ರಾರಂಭವಾಗಿದ್ದು, ಕೇಂದ್ರ ವಿಮಾನಯಾನ ಸಚಿವ ಸುರೇಶ್​ ಪ್ರಭು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಅವರು,  2020 ರ ವೇಳೆಗೆ ಭಾರತದ ವೈಮಾನಿಕ ಉದ್ಯಮ ವಿಶ್ವದಲ್ಲೇ ಮೂರನೇ ಸ್ಥಾನಕ್ಕೆ ಏರಲಿದೆ ಎಂದರು.

ನಮ್ಮ ದೇಶದ ವೈಮಾನಿಕ ಉದ್ಯಮ ಕಳೆದ ನಾಲ್ಕು ವರ್ಷಗಳಲ್ಲಿ 30% ಹೆಚ್ಚಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದೆ ಎಂದರು.
65 ಬಿಲಿಯನ್ ಡಾಲರ್ಸ್​ನಲ್ಲಿ 103 ಹೊಸ ಏರ್​​ಪೋರ್ಟ್​​​​ಗಳು ಭಾರತದಲ್ಲಿ ಸ್ಥಾಪನೆಯಾಗಲಿವೆ. ದೇಶದ ಮೂಲೆ ಮೂಲೆಗಳಿಗೆ ವಿಮಾನ ಪ್ರಯಾಣ ದೊರೆಯಲಿದೆ. ಸಣ್ಣ ಊರುಗಳಲ್ಲಿ ಕೂಡಾ ವಿಮಾನ ಹಾರಾಟ ನಡೆಯಲಿದೆ ಎಂದು ಹೇಳಿದರು.

ವಿಶನ್ 2040 ಎನ್ನುವ ಗುರಿಯಿಟ್ಟುಕೊಂಡಿದ್ದೇವೆ. 2300 ಹೊಸ ವಿಮಾನಗಳು ಭಾರತಕ್ಕೆ ಅವಶ್ಯಕತೆ ಇದೆ. ಹೆಚ್ಚಿನ ಪ್ರಮಾಣದಲ್ಲಿ ಆ ವಿಮಾನಗಳನ್ನು ನಮ್ಮ ದೇಶದಲ್ಲೇ ತಯಾರಿಸುವ ಉದ್ದೇಶವಿದೆ. ನಾವು ಅನೇಕ ದೇಶಗಳ ಜೊತೆ ಚರ್ಚಿಸಿ ವೈಮಾನಿಕ ಉದ್ಯಮ ಹೆಚ್ಚಿಸುವಲ್ಲಿ ಕಾರ್ಯನಿರತವಾಗಿದ್ದೇವೆ ಎಂದರು.

ಎಲ್ಲಾ ಉದ್ಯಮದವರಿಗೂ ಈ ಏರ್ ಶೋ ಒಳ್ಳೆ ಅವಕಾಶ ನೀಡಲಿದೆ. ಏರೋ ಇಂಡಿಯಾ ನಮ್ಮ ಹೆಮ್ಮೆಯ ಕಾರ್ಯಕ್ರಮ. ಮೊದಲ ಬಾರಿಗೆ ಗ್ಲೋಬಲ್ ಸಿಇಒ ರೌಂಡ್ ಟೇಬಲ್ ಕಾನ್ಫರೆನ್ಸ್ ನಡೆಯಲಿದೆ. ಇದು ಉದ್ಯಮದ ಬೆಳವಣಿಗೆಗೆ ಬಹಳ ದೊಡ್ಡ ವೇದಿಕೆ ಒದಗಿಸಲಿದೆ ಎಂದರು.

error: Content is protected !! Not allowed copy content from janadhvani.com