ರಿಯಾದ್: ಮೆಟ್ರೊ ಯೋಜನೆಗಾಗಿ ಟ್ರೈನ್ ಬೋಗಿಗಳು ಸೌದಿ ತಲುಪಿದ್ದು, ಜರ್ಮನಿಯಿಂದ ತರಲಾದ ಬೋಗಿಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ತಯಾರಿಸಲಾಗುತ್ತದೆ. ಚಾಲಕನಿಲ್ಲದೆ ಚಲಿಸಲಿರುವ ರೈಲುಗಳು ದಿನದ 24 ಗಂಟೆಗಳು ಪರೀಕ್ಷೆಯನ್ನು ನಡೆಸಲಿದೆ.
ರಿಯಾದ್ ಮೆಟ್ರೊ 176 ಕಿ.ಮೀ ಉದ್ದದಲ್ಲಿ ಆರು ರೇಖೆ ಗಳನ್ನು ನಿರ್ಮಿಸಲಾಗುತ್ತಿದೆ. ಮೂರು ಕಂಪೆನಿಗಳಿಗೆ ಇದರ ನಿರ್ಮಾಣ ಉಸ್ತುವಾರಿಯನ್ನು ವಹಿಸಲಾಗಿದೆ. 63 ಕಿಮೀ ಉದ್ದದ ನೀಲಿ ಮತ್ತು ಕೆಂಪು ರೇಖೆಗಳ ನಿರ್ಮಾಣವನ್ನು ಬಿಎಸಿಎಸ್ ಕಂಪನಿಗೆ ವಹಿಸಲಾಗಿದೆ. ಬಿಎಸಿಎಸ್‌ಗೆ ಒಟ್ಟು 67 ಮೆಟ್ರೊ ರೈಲುಗಳನ್ನು ಸೀಮೆನ್ಸ್ ಕಂಪನಿ ನೀಡಲಿದೆ. ಇದರಲ್ಲಿ ಎರಡು ಬೋಗಿಗಳ 26 ರೈಲುಗಳು ಮತ್ತು ನಾಲ್ಕು ಬೋಗಿಗಳ ನಲ್ವತ್ತೊಂದು ರೈಲುಗಳು ಒಳಗೊಂಡಿದೆ. ಮತ್ತು ಸ್ವಯಂಚಾಲಿತ ರೈಲು ನಿಯಂತ್ರಣ ವ್ಯವಸ್ಥೆಯನ್ನು ಕೂಡಾ ಕಂಪೆನಿ ಒದಗಿಸಲಿದೆ.
ಅಗ್ನಿ ನಿರೋಧಕ ಅಲ್ಯೂಮಿನಿಯಂ ಬೋಗಿಗಳು, ಪ್ರತಿ ಬೋಗಿಯಲ್ಲೂ 1.4 ಮೀ ಉದ್ದದ ಮೂರು ಬಾಗಿಲುಗಳು, ಕುಟುಂಬ, ಪ್ರಥಮ, ಸಿಂಗಲ್ ಕ್ಲಾಸ್ ಆಸನಗಳು, ಸುರಕ್ಷೆಗಾಗಿ ಯಾತ್ರಿಕರ ಸಂಭಾಷಣೆ ಮತ್ತು ದೃಶ್ಯಗಳನ್ನು ಸೆರೆಹಿಡಿಯಬಹುದಾದ ಕ್ಯಾಮೆರಾಗಳು, ಗಂಟೆಗೆ 90 ಕಿ.ಮೀ. ವೇಗ ಇವು ಮೆಟ್ರೋ ಯೋಜನೆಯ ವಿಷೇಶತೆಯಾಗಿದೆ. ರಿಯಾದ್ ಮೆಟ್ರೋ ಈ ವರ್ಷ ತನ್ನ ಮೊದಲ ಹಂತದ ನಿರ್ಮಾನವನ್ನು ಪೂರ್ಣಗೊಳಿಸಲಿದೆ. 2021 ರ ಹೊತ್ತಿಗೆ, ರೈಲುಗಳು ಸರಾಗವಾಗಿ ಚಲಿಸಲಿವೆ.