janadhvani

Kannada Online News Paper

ಸೌದಿ ಅರೇಬಿಯಾ: 20 ಉದ್ಯೋಗಗಳು ಸ್ವದೇಶೀಕರಣದಿಂದ ಮುಕ್ತ

ರಿಯಾದ್: ಸೌದಿ ಅರೇಬಿಯಾದಲ್ಲಿ, ಕೃಷಿ ಮತ್ತು ಮೀನುಗಾರಿಕೆ ವಲಯದ 20 ಉದ್ಯೋಗಗಳನ್ನು ಸ್ವದೇಶೀಕರಣದಿಂದ ಕೈ ಬಿಡಲಾಗಿದೆ. ಎರಡು ಸಚಿವಾಲಯಗಳ ಒಪ್ಪಂದದ ಮೇರೆಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹೊಸ ಹೆಜ್ಜೆಯು ಭಾರತೀಯರಿಗೆ ಅನುಗ್ರಹವಾಗಿ ಪರಿಣಮಿಸಿದೆ.

ಮೀನುಗಾರಿಕೆ, ಕೃಷಿ, ಜಾನುವಾರು ಕೃಷಿ, ಜೇನು ಕೃಷಿ ಮತ್ತು ಇತರ ಸಂಬಂಧಿತ 20 ಉದ್ಯೋಗಗಳನ್ನು ಕೈಬಿಡಲಾಗಿದೆ.ಕಳೆದ ಸೆಪ್ಟೆಂಬರ್‌ನಿಂದ ಮೀನುಗಾರಿಕೆ ವಲಯದಲ್ಲಿ ದೇಶೀಕರಣವನ್ನು ಜಾರಿಗೆ ತರಲಾಗಿತ್ತು.

ಪ್ರತಿ ದೋಣಿಯಲ್ಲಿ ಕನಿಷ್ಠ ಒಬ್ಬ ಸ್ಥಳೀಯ ವ್ಯಕ್ತಿ ಇರಬೇಕೆಂಬ ವ್ಯವಸ್ಥೆಯನ್ನು ಕಾನೂನಿನಲ್ಲಿ ಜಾರಿಗೆ ತರಲಾಗಿತ್ತು.ಈ ವಲಯದಲ್ಲಿ ಸಾವಿರಾರು ಮಲಯಾಳಿಗಳು ಮತ್ತು ತಮಿಳರು ಕಾರ್ಯನಿರ್ವಹಿಸುತ್ತಿದ್ದಾರೆ. ದೇಶೀಕರಣದ ಜಾರಿಯಿಂದಾಗಿ ಹಲವರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದರು.

ಏತನ್ಮಧ್ಯೆ, ವ್ಯವಸಾಯದಲ್ಲಿ ಹೊಸ ತಂತ್ರಜ್ಞಾನಗಳನ್ನು ತರುವ ಹೂಡಿಕೆದಾರರಿಗೆ ವಿದೇಶೀ ನೌಕರರನ್ನು ನೇಮಕ ಮಾಡಲು ವೀಸಾಗಳನ್ನು ಅನುಮತಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ದೇಶೀಕರಣವನ್ನು ಜಾರಿಗೆ ತಂದ ಎಲ್ಲಾ ವಲಯಗಳಲ್ಲಿ ತಪಾಸಣೆ ಮುಂದುವರಿಯುತ್ತಿದೆ.

error: Content is protected !! Not allowed copy content from janadhvani.com