ನರಿಂಗಾನ:ಅಲ್ ಮದೀನಾ ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ಕ್ರಾಂತಿಗೆ ಒಂದು ಐತಿಹಾಸಿಕ ಸಾಧನೆ ಸೇರ್ಪಡೆಯಾಗಿದೆ. ಅಲ್ ಮದೀನಾ ಹಿಫ್ಳುಲ್ ಖುರ್ ಆನ್ ಕಾಲೇಜ್ ವಿದ್ಯಾರ್ಥಿಗಳಿಬ್ಬರು ಐತಿಹಾಸಿಕ ಸಾಧನೆಯನ್ನು ಮಾಡಿ ಸಮಾಜದಲ್ಲಿ ಅಭಿನಂದನೆಗೆ ಪಾತ್ರರಾಗಿದ್ದಾರೆ.
ಶಾಲೆ ಕಲಿಕೆಯೊಂದಿಗೆ ಕೇವಲ 14 ತಿಂಗಳಲ್ಲಿ ಸಂಪೂರ್ಣ ಖುರ್ ಆನನ್ನು ಕಂಠಪಾಠ ಮಾಡಿದ ಸ್ವಫ್ವಾತುಲ್ಲಾಹ್ ಉಳ್ಳಾಲ ಮತ್ತು 15 ತಿಂಗಳಲ್ಲಿ ಪೂರ್ಣಗೊಳಿಸಿದ ಇಬ್ರಾಹಿಂ ಖಲೀಲ್ ಅಲ್ ಮದೀನಾದ ನೂತನ ತಾರೆಗಳಾಗಿ ಸಾರಥಿ ಶೈಖುನಾ ಶರಫುಲ್ ಉಲಮಾ ಉಸ್ತಾದರ ವಿಶೇಷ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸ್ವಫ್ವಾತುಲ್ಲಾಹ್ ಉಳ್ಳಾಲದ ಉಸ್ಮಾನ್ ಮದನಿ ಮತ್ತು ಸಫಿಯ್ಯ ದಂಪತಿಯ ಪುತ್ರ ಮತ್ತು ಇಬ್ರಾಹಿಂ ಖಲೀಲ್ ಬೋಳಿಯಾರ್ ನಿವಾಸಿ ಅಬೂಬಕ್ಕರ್ ಮುಸ್ಲಿಯಾರ್ ಮತ್ತು ಫಾತಿಮಾ ದಂಪತಿಗಳ ಕಿರಿಯ ಮಗ.
ವಿದ್ಯಾರ್ಥಿಗಳ ಈ ಸಾಧನೆಗೆ ಹಿಫ್ಳುಲ್ ಖುರ್ ಆನ್ ಕಾಲೇಜಿನ ಪ್ರಾಂಶುಪಾಲರಾದ ಹಾಫಿಳ್ ಮರ್ಷದ್ ಹುಮೈದಿ, ಹಾಫಿಳ್ ಅಬ್ದುಲ್ ಅಝೀಝ್ ಹಿಮಮಿ, ಹಾಫಿಳ್ ಇಸ್ಮಾಯಿಲ್ ಹುಮೈದಿ, ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ, ಸದರ್ ಮುದರ್ರಿಸ್ ಅಬ್ದುರ್ರಹ್ಮಾನ್ ಅಹ್ಸನಿ, ಅಬ್ದುಲ್ ಅಝೀಝ್ ಅಹ್ಸನಿ, ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಸಹಿತ ಸಿಬ್ಬಂದಿ ಮತ್ತು ವಿದ್ಯಾರ್ಥಿ ವರ್ಗ ಪ್ರಶಂಸಿರುತ್ತಾರೆ.
Ma Sha Allah
Thabarakallah
ماشاءالله
Masha allha
Masha allha
ماشاءالله
Congratulations
Masha allha