janadhvani

Kannada Online News Paper

ಎಸ್ಸೆಸ್ಸೆಫ್ ಗ್ರ್ಯಾಂಡ್ ಸುನ್ನಿ ಇಜ್ತಿಮಾ ಪೋಸ್ಟರ್ ಬಿಡುಗಡೆ

ಕೊಪ್ಪಳ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಕೊಪ್ಪಳ ಜಿಲ್ಲಾ ವತಿಯಿಂದ ಜನವರಿ 22 ಶನಿವಾರದಂದು ಗಂಗಾವತಿ ಇಲಾಹಿ ಕಾಲೊನಿ ಕೆಬಿಎನ್ ಗಾರ್ಡನ್ ನಲ್ಲಿ ನಡೆಯಲಿರುವ ಏಕದಿನ ಗ್ರ್ಯಾಂಡ್ ಸುನ್ನಿ ಇಜ್ತಿಮಾ ಇದರ ಪೋಸ್ಟರ್ ಬಿಡುಗಡೆ ಸಮಾರಂಭ ಗಂಗಾವತಿಯ ಜುಲೈ ನಗರದಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಎಸ್ಎಸ್ಎಫ್ ಕಾರ್ಯದರ್ಶಿ ಹಾಫಿಝ್ ಸುಫ್ಯಾನ್ ಸಖಾಫಿಯವರು ಕಂಪ್ಲಿ ಆಝಂ ಪಾಷಾ ಖಾದ್ರಿ ಯವರಿಗೆ ಪೊಸ್ಟರ್ ನೀಡಿ ಬಿಡುಗಡೆ ಮಾಡಲಾಯಿತು. ಎಸ್ಸೆಸ್ಸೆಫ್ ರಾಜ್ಯ ನಾಯಕ ಖಾಝಿ ಗುಲಾಮ್ ಹುಸೇನ್ ರಜ್ವಿ ಬುದುಗುಂಪ, ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಮೌಲಾನ ನಝೀರ್ ಅಹ್ಮದ್ ಸಾಹೇಬ್, ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ನೂರುದ್ದೀನ್ ರಝ್ವಿ, ಪ್ರಧಾನ ಕಾರ್ಯದರ್ಶಿ ಮೆಹಬೂಬ್ ಸಾಹೇಬ, ಗಂಗಾವತಿ ಡಿವಿಷನ್ ಅಧ್ಯಕ್ಷ ಹಾಫಿಝ್ ಸಲೀಂ ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಹಾಜರಿದ್ದರು.