ಬೆಳ್ತಂಗಡಿ: SYS ಹಾಗೂ SSF ಇದರ ಜಂಟಿ ಆಶ್ರಯದಲ್ಲಿ ಜನವರಿ 5 ಶನಿವಾರ ಮಗ್ರಿಬ್ ನಮಾಝಿನ ಬಳಿಕ ಬದ್ರ್ ಜುಮ್ಮಾ ಮಸ್ಜಿದ್ ಜಾರಿಗೆಬೈಲ್ ವಠಾರದಲ್ಲಿ ಮರ್ಹೂಂ ಚಿತ್ತಾರಿ ಉಸ್ತಾದ್ ವೇದಿಕೆಯಲ್ಲಿ “ತಾಜುಲ್ ಉಲಮಾ ಅನುಸ್ಮರಣೆ ಹಾಗೂ ಬೃಹತ್ ಸುನ್ನಿ ಸಮ್ಮೇಳನ” ವು ನಡೆಯಲಿದೆ.
ಸಂಜೆ ಬಹು|ಅಬ್ಬೊನು ಶಾಫಿ ಪಳ್ಳಾದೆ ಇವರು ಧ್ವಜಾರೋಹಣಕ್ಕೆ ಚಾಲನೆ ನೀಡಲಿದ್ದಾರೆ. ಮಗ್ರಿಬ್ ನಮಾಝಿನ ಬಳಿಕ ಎಸ್ ಎಸ್ ಎಫ್ ಜಾರಿಗೆಬೈಲು ಶಾಖಾ ಪ್ರತಿಭಾ ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್ ಹಾಗೂ ಜಿ ಸಿ ಸಿ ನಡೆಸಿಕೊಂಡು ಬರುತ್ತಿರುವ ನಾರಿಯತ್ತ್ ಸ್ವಲಾತ್ ವಾರ್ಷಿಕ ನಡೆಯಲಿದೆ.
ನಂತರ ತಾಜುಲ್ ಉಲಮಾ ಅನುಸ್ಮರಣಾ ಸಂಗಮ ಹಾಗೂ ಸುನ್ನಿ ಸಮ್ಮೇಳನ ನಡೆಯಲಿದ್ದು, ಪ್ರಸ್ತುತ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಹೈದರ್ ಯಂತ್ರಡ್ಕ ವಹಿಸಲಿದ್ದು , ಸ್ಥಳೀಯ ಖತೀಬರಾದ ಬಹು|ಅಬ್ದುರಹ್ಮಾನ್ ಬಾಖವಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ .
ಬಹು| ಅಸ್ಸಯ್ಯದ್ ಶರಫುದ್ದೀನ್ ಅಲ್ ಹೈದ್ರೋಸಿ ತಂಙಳ್ ಎರ್ಮಾಡ್ ದುಆ ಆಶೀರ್ವಚನ ಮಾಡಲಿದ್ದಾರೆ ಹಾಗೂ ಬಹು| ರಫೀಕ್ ಅಹ್ಸನಿ ಚೇಳಾರಿ, ಕೇರಳ ಇವರು ಮುಖ್ಯ ಪ್ರಭಾಷಣಗೆಯ್ಯಲಿದ್ದಾರೆ.
ಅದಲ್ಲದೆ ಇನ್ನು ಹಲವಾರು ಸಾದಾತುಗಳು,ಉಲಮಾ ಉಮಾರಾ , ಸಂಘಟನಾ ನೇತಾರರು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿಯ ಕನ್ವೀನರ್ ನಾಸಿರ್.N ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.