janadhvani

Kannada Online News Paper

ಪ್ರವಾದಿ (ಸ.ಅ) ನಿಂದನೆ:ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ನಿಂದ ದೂರು ದಾಖಲು

ಉಳ್ಳಾಲ:ಪ್ರವಾದಿ (ಸ.ಅ) ರವರನ್ನು ನಿಂದನೆ ಮಾಡಿ ಕೋಮು ಸಂಘರ್ಷಕ್ಕೆ ಪ್ರಚೋದನೆ ಮಾಡುವ ರೀತಿಯಲ್ಲಿ ಮಾಧ್ಯಮದ ಸಿದ್ದಾಂತಕ್ಕೆ ಅಗೌರವ ತೋರಿ,ಮುಸ್ಲಿಮರ ಭಾವನಯನ್ನು ಕೆರಳಿಸಿದ ಸುವರ್ಣ ನ್ಯೂಸ್ ಚಾನಲ್ ನಿರೂಪಕ ಅಜಿತ್ ಹನುಮಕ್ಕನವರು ಹಾಗೂ ಸುವರ್ಣ ನ್ಯೂಸ್ ಚಾನಲ್ ವಿರುದ್ದ ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ವತಿಯಿಂದ ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ಅಧ್ಯಕ್ಷ ಜಲೀಲ್ ಫರೀದ್ ನಗರ ರವರ ನೇತೃತ್ವದಲ್ಲಿ ಕೋಣಾಜೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.

ಈ ಸಮಯದಲ್ಲಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಫಲ್ ಫರೀದ್ ನಗರ,ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ,ಅಬೂಸ್ವಾಲಿಹ್,ಬದ್ರುದ್ದೀನ್,ಅಬೂಬಕ್ಕರ್,ಫೈಝಲ್,ಮುನೀರ್,ಸ್ವದಖಾ,ಇಸ್ಮಾಯಿಲ್,ರೀಯಾಝ್,ಶಾಹುಲ್ ಹಮೀದ್,ಅಲ್ತಾಫ್ ಫಾಳಿಲಿ,ಇಕ್ಬಾಲ್ ಮದನಿ ಮೊದಲಾದವರು ಉಪಸ್ಥಿತರಿದ್ದರು.