ಮಂಗಳೂರು: ಟಿವಿ ಚರ್ಚೆಯೊಂದರಲ್ಲಿ ನಿರೂಪಕರೋರ್ವರು ಅನಗತ್ಯವಾಗಿ ಯಾರನ್ನೋ ಸಂತೋಷ ಪಡಿಸಿ ಪ್ರಚಾರ ಗಿಟ್ಟಿಸಿ ಜೇಬು ತುಂಬಿಸಲು ಪ್ರವಾದಿಯವರ ಹೆಸರನ್ನು ಎಳೆದು ತಂದು ನಿಂದನೆ ಮಾಡಿರುವುದು ಖಂಡನಾರ್ಹ ಎಂದು ಜಿಲ್ಲಾ ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಹೇಳಿದ್ದಾರೆ.
ಭಗವಾನ್ ರವರು ರಾಮಾಯಣಕ್ಕೆ ಸಂಬಂಧಪಟ್ಟು ಬರೆದ ಕೃತಿಯಲ್ಲಿ ಯಾವುದಾದರು ಸಮುದಾಯಕ್ಕೆ ಭಾವನೆಗೆ ಘಾಸಿಯಾಗುವಂತಹ ವಿಚಾರಗಳಿದ್ದರೆ; ಅದು ಬೆಂಬಲಾರ್ಹವಲ್ಲ. ಆದರೆ ಆ ಕುರಿತ ಚರ್ಚೆಯಲ್ಲಿ ಪ್ರವಾದಿಯವರ ಹೆಸರನ್ನು ಎಳೆದು ತರಬೇಕಾದ ಅಗತ್ಯವೇ ಇರಲಿಲ್ಲ. ಪ್ರೊ.ಭಗವಾನ್ ರವರು ಪ್ರವಾದಿಯವರ ಅನುಯಾಯಿಯಲ್ಲ. ಪ್ರವಾದಿಯವರ ಅನುಯಾಯಿಗಳಾರೂ ಶ್ರೀರಾಮನ ಕುರಿತು ಆಕ್ಷೇಪದ ಮಾತು ಆಡಿದ್ದೂ ಅಲ್ಲ. ಹಾಗಿರುವಾಗ ಅಲ್ಲಿ ಪ್ರವಾದಿಯವರ ಹೆಸರನ್ನು ಎಳೆದು ತರಬೇಕಾದ ಅಗತ್ಯ ಏನಿತ್ತು? ಇಂತಹ ಪತ್ರಕರ್ತರು ಸಮಾಜಕ್ಕೆ ಅಪಾಯಕಾರಿ. ಇಂತಹ ಹೇಳಿಕೆ ಗಳ ಮೂಲಕ ಸಮಾಜದಲ್ಲಿ ಅಶಾಂತಿ ಉಂಟಾಗಲಿದೆ. ಕೆಲವು ರಾಜಕೀಯ ಪಿತೂರಿಯ ಎಂಜಲು ದುಡ್ಡಿಗಾಗಿ ಈ ಶಾಂತಿಯ ಸಮಾಜದ ಒಗ್ಗಟ್ಟನ್ನು ಮುರಿಯುವ ಇಂತವರ ವಿರುದ್ಧ ಸ್ವಯಂ ಪ್ರೇರಿತರಾಗಿ ಅಧಿಕಾರಿಗಳು, ಸರ್ಕಾರಗಳು ಕೇಸು ದಾಖಲಿಸಬೇಕು.
ಮುಸಲ್ಮಾನರೆಂದರೆ ತನ್ನ ಸ್ವಂತ ಧರ್ಮದ ಆಚರಣೆಗಳನ್ನು ಜೀವನದಲ್ಲಿ ಅಳವಡಿಸುವುದರೊಂದಿಗೆ ಇನ್ನೂಂದು ಧರ್ಮವ ಗೌರವಿಸಬೇಕು. ಈ ವಚನ ಪಾಲಿಸದವ ನನ್ನವನಲ್ಲ ಎಂದು ಸಾರಿದ ಪ್ರವಾದಿ ಮಹಮ್ಮದ್ ಮುಸ್ತಫ (ಸ. ಅ ) ವರ ನಿಂದನೆ ಖಂಡನೀಯ ಎಂದು ಪತ್ರಿಕಾ ಪ್ರಕಟನೆಯಲ್ಲಿ ಅಭಿಪ್ರಾಯಿಸಿದ್ದಾರೆ.
Mr. Ajith you don’t know anything in Islam you first learn Quran Sharif then you speak about our Muhammad mustafa OK be careful Allah give you big punishment.
Mr. Ajith you don’t know anything in Islam you first learn Quran Sharif then you speak about our Muhammad mustafa OK be careful Allah give you big punishment.