ಬೆಂಗಳೂರು: ಫೆಬ್ರವರಿಯಲ್ಲಿ ಎಸ್ಎಸ್ಎಫ್ ರಾಷ್ಟ್ರೀಯ ಸಮ್ಮೇಳನ ರಾಮ್ ಲೀಲಾ ಮೈದಾನ ದೆಹಲಿಯಲ್ಲಿ ನಡೆಯಲಿದೆ. ವಿವಿಧ ರಾಜ್ಯಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಪ್ರಸ್ತುತ ಸಮ್ಮೇಳನದ ಅಧಿಕೃತ ಘೋಷಣಾ ಸಮಾವೇಶವು ಬೆಂಗಳೂರಿನ ಐಇಬಿ ಆಡಿಟೋರಿಯಂನಲ್ಲಿ ನಾಳೆ (ಡಿ. 23) ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ನಡೆಯುವ ಸಮಾವೇಶದಲ್ಲಿ ಬಹು: ಶಂಸುಲ್ ಹಕ್ ಖಾದ್ರಿ, (ಅಧ್ಯಕ್ಷರು ಕರ್ನಾಟಕ ಜಂಇಯ್ಯತುಲ್ ಉಲೇಮಾ) ಮತ್ತು ಮಾಜಿ ಸಚಿವ ಕೆ. ರಹಮಾನ್ ಖಾನ್ ಮುಖ್ಯ ಅಥಿತಿಗಳಾಗಿ ಆಗಮಿಸುವರು..SSF ರಾಷ್ಟ್ರೀಯ ಅಧ್ಯಕ್ಷ ಶೌಕತ್ ನಈಮಿ ಅಲ್ ಬುಖಾರಿ ಕಾಶ್ಮೀರ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕ್ಕರ್ ಸಿದ್ದೀಕ್ M A, ಎನ್.ಕೆ.ಎಂ. ಶಾಫಿ ಸಅದಿ, ಎಸ್ಎಸ್ಎ ಖಾದರ್ ಹಾಜಿ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಸಂಘಟನೆಯ ಸಬಲೀಕರಣದ ಬಗ್ಗೆ ಮತ್ತು ಸಾಂಘಿಕ ಚಟುವಟಿಕೆಗಳನ್ನು ಇಡೀ ರಾಜ್ಯಕ್ಕೆ ಹರಡುವುದು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮುಸ್ಲಿಮ್ ಮತ್ತು ಅಲ್ಪಸಂಖ್ಯಾತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಈ ಸಮ್ಮೇಳನ ಚರ್ಚಿಸಲಿದೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶಿಕ್ಷಣ ವಲಯದಲ್ಲಿ ಎಸ್ಎಸ್ಎಫ್ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಅರ್ಹ ವಿದ್ಯಾರ್ಥಿಗಳಿಗೆ ಆಹಾರ ಮತ್ತು ವಸತಿ ಸೌಕರ್ಯ ಒದಗಿಸಿ, ಎಸ್ಎಸ್ಎಫ್ ನೈತಿಕ ಮೌಲ್ಯ ಆಧಾರಿತ ಶಿಕ್ಷಣ ನೀಡುತ್ತಿದೆ.
ಸಮ್ಮೇಳನದ ಅಧಿಕೃತ ಘೋಷಣೆಗೆ ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.