ಬೆಳ್ತಂಗಡಿ:ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ ಇದರ ನಾವೂರು ಶಾಖೆ ಇದರ ಮಹಾಸಭ ಶಾಖಾಧ್ಯಕ್ಷ ಸುಲೈಮಾನ್ ಪಿ ವೈ ಯವರ ಅಧ್ಯಕ್ಷತೆಯಲ್ಲಿ ನಡೆ ಯಿತು. ಸಯ್ಯಿದ್ ಇಂಬಿಚಿ ಕೋಯ ತಂಙಳ್ ಮಂಬುರಂ ದುವಾ ನಡೆಸಿದರು. ಹಾಫಿಳ್ ಯಾಕೂಬ್ ಸಅದಿ ನಾವೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬ್ದುಲ್ ರಹಿಮಾನ್ ಸಖಾಫಿ ತರಗತಿ ನೀಡಿದರು.ಮುರ ನಾವೂರು ಜಮಾಅತ್ ಅಧ್ಯಕ್ಷ ಪಿ. ಎ ಅಬೂಬಕ್ಕರ್, ಕೋಶಾಧಿಕಾರಿ ಯೂಸುಫ್ ಪಿ ಎ ಎಸ್ ವೈ ಎಸ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಎಸ್ಸೆಸ್ಸೆಫ್ ಬೆಳ್ತಂಗಡಿ ಸೆಕ್ಟರ್ ಅಧ್ಯಕ್ಷ ಕಮಾಲ್ ಮುಸ್ಲಿಯಾರ್ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಕಾರ್ಯದರ್ಶಿ ಶರೀಫ್ ಶಾಝ್ ಮುಂತಾದವರು ಉಪಸ್ಥಿತರಿದ್ದರು.
ನಂತರ ನೂತನ ಸಾಲಿನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಇಬ್ರಾಹಿಮ್ ಪಿ.ಎ ಉಪಾಧ್ಯಕ್ಷರುಗಳಾಗಿ ನಾಸಿರುದ್ದೀನ್ ಎನ್ ಎಂ, ಅಶ್ರಫ್ ಡಿ. ಎಂ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಕೋಡಿಕನ್ನಾಜೆ ಕಾರ್ಯದರ್ಶಿಗಳಾಗಿ ಕಬೀರ್ 5 ಸೆನ್ಸ್, ಸ್ವಾಲಿಹ್ ಪಿ ಎ ಕೋಶಾಧಿಕಾರಿಯಾಗಿ ಶರಫುದ್ದೀನ್ ಕಿರ್ನಡ್ಕ ಆಯ್ಕೆಯಾದರು. ಅಬ್ದುಲ್ ಮಜೀದ್ ಸ್ವಾಗತಿಸಿ ಸಿದ್ದೀಕ್ ವಂದಿಸಿದರು.