ನಚಿಕ್ಜಮಂಗಳೂರು:ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ಭವಿಷ್ಯದ ಭರವಸೆಯ ತಂಡವಾಗಿರುವ ಟೀಮ್ ಹಸನೈನ್ ನ ಬೆಂಗಳೂರು,ಕೊಡಗು,ಚಿಕ್ಕಮಂಗಳೂರು,ಹಾಸನ,ಮೈಸೂರು ಹಾಗೂ ಶಿಮೊಗ್ಗ ಜಿಲ್ಲೆಗಳ ಟೀಮ್ ಹಸನೈನ್ ಖಿಯಾದ-18 ಟ್ರೈನಿಂಗ್ ಕ್ಯಾಂಪ್ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಉಪಾಧ್ಯಕ್ಷ ಸಯ್ಯದ್ ಹಾಮಿಮ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 13 ಗುರುವಾರ ಬೆಳಿಗ್ಗೆ 9:00 ಗಂಟೆಗೆ ಶಾದುಲೀ ಜುಮಾ ಮಸ್ಜಿದ್ ಮದರಸ ಹಾಲ್ ಉಪ್ಪಳ್ಳಿಯಲ್ಲಿ ನಡೆಯಲಿರುವುದು.
ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಶರೀಫ್ ಮಾಸ್ಟರ್ ಬೆಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ತರಗತಿಯನ್ನು ನಡೆಸಲಿರುವರು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಉಸ್ಮಾನ್ ಹಂಡುಗುಳಿ,ಹೊಸ್ಮಾರ್ ಸ ಅದಿ,ಇಬ್ರಾಹಿಂ ಚಿಕ್ಕಮಂಗಳೂರು,ಶಾಹಿನ್ ಚಿಕ್ಕಮಂಗಳೂರು ಹಾಗೂ ಇನ್ನಿತರ ರಾಜ್ಯ ಹಾಗೂ ಚಿಕ್ಕಮಂಗಳೂರು ಜಿಲ್ಲಾ ನಾಯಕರು ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ಟೀಮ್ ಹಸನೈನ್ ರಾಜ್ಯ ಉಸ್ತುವಾರಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಪ್ರಕಟನೆಯಲ್ಲಿ ತಿಳಿಸಿದ್ದಾರೆ.