ಒಮಾನ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಇದರ ಅಧೀನದ ಸೀಬ್ ಝೋನ್ ವತಿಯಿಂದ ‘ಸಂದೇಶ ವಾಹಕರೇ ತಮ್ಮೆಡೆಗೆ’ ಎಂಬ ಶೀರ್ಷಿಕೆಯಡಿಯಲ್ಲಿ ಮೀಲಾದ್ ಕಾನ್ಫರೆನ್ಸ್ ನವೆಂಬರ್ 22(ಇಂದು) ಗುರುವಾರ ಸಂಜೆ 8ಕ್ಕೆ ಬರ್ಕ ಅಲ್ ಫವಾನ್ ಸಭಾಂಗಣದಲ್ಲಿ ನಡೆಯಲಿದೆ.
ಕೆ.ಸಿ.ಎಫ್ ಒಮಾನ್ ಅಧ್ಯಕ್ಷರಾದ್ ಸೈಯ್ಯದ್ ಆಬಿದ್ ಅಲ್ ಹೈದ್ರೋಸ್ ಎಮ್ಮೆಮ್ಮಾಡು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷರಾದ ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಖ್ಯ ಪ್ರಭಾಷಣಗೈಯ್ಯುವರು. ಕೇರಳ ಫೋಲ್ಕ್ಲೋರ್ ಅಕಾಡಮಿ ಪ್ರಶಸ್ತಿ ವಿಜೇತರು, ಖ್ಯಾತ ದಫ್ ಮುಟ್ಟ್ ಕಲಾವಿದರೂ ಆದ ಕೋಯ ಕಾಪಾಡ್ ಮತ್ತು ತಂಡದಿಂದ ಪ್ರವಾದಿ ಪ್ರಕೀರ್ತನಾ ಕಾರ್ಯಕ್ರಮ ನಡೆಯಲಿದೆ. ಒಮಾನ್ ನಲ್ಲಿರುವ ಕನ್ನಡಿಗ ಪ್ರವಾದಿ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸುವಂತೆ ಕೆ.ಸಿ.ಎಫ್ ಸೀಬ್ ಝೋನ್ ನೇತಾರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Kannada Online News Paper