ಕೆಸಿಎಫ್ ಒಮಾನ್ ಸೊಹಾರ್ ಝೋನ್ ಹಮ್ಮಿಕೊಂಡ ಇಲೈಕ ಯಾರಸೂಲಲ್ಲಾ ಮಿಲಾದ್ ಕಾರ್ಯಕ್ರಮವು ಮನಮ್ ಸೊಹಾರ್ ಹೋಟೆಲ್ ಪಲಜ್ ನಲ್ಲಿ ಝೋನ್ ಅಧ್ಯಕ್ಷ ಆರಿಫ್ ಮದಕ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಸಯ್ಯದ್ ಆಬಿದ್ ಅಲ್ ಹೈದ್ರೋಸಿ ಇವರು ನೆರವೇರಿಸಿ ಪ್ರವಾದಿ ಮುಹಮ್ಮದ್ ಸ.ಅ. ರವರ ಸಂದೇಶ ಮತ್ತು 48ನೇ ಒಮಾನ್ ರಾಷ್ಟ್ರೀಯ ದಿನಾಚರಣೆಯ ಶುಭಾಶಯವನ್ನು ಕೋರಿದರು. ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಿದ ಕೆಸಿಎಫ್ ಅಂತರಾಷ್ಟ್ರೀಯ ಸಂಘಟನಾ ಅದ್ಯಕರಾದ MSM ಅಬ್ದುಲ್ ರಶೀದ್ ಝೈನಿ ಖಾಮಿಲ್ ಸಖಾಫಿ ಪ್ರವಾದಿ ಮುಹಮ್ಮದ್ ಸ.ಅ. ರವರು ಈ ಜಗತ್ತಿಗೆ ಸಾರಿದ ಶಾಂತಿಯ ಸಂದೇಶ ಹಾಗು ಅವರ ಜೀವನ ಚರ್ಯೆಯನ್ನು ತಮ್ಮೆಲ್ಲರ ಜೀವನದಲ್ಲಿ ಅಳವಡಿಸಲು ಕರೆನೀಡೂವುದರೊಂದಿಗೆ ಡಿಸೆಂಬರ್ 3 ರಂದು KCF,SSF,SYS ವತಿಯಿಂದ ಮಂಗಳೂರಿನಲ್ಲಿ ಜರುಗಲಿರುವ ಕನೆಕ್ಟ್ 2018 ಈ ಕಾರ್ಯಕ್ರಮದ ವಿಷೇಷತೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆಸಿಎಫ್ ಒಮಾನ್ ಗೌರವಾದ್ಯಕ್ಷ ಉಮರ್ ಸಖಾಫಿ ಮಿತ್ತೂರು, SSF ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ರಹಮಾನ್ ಮೊಗರ್ಪಣೆ ಸುಳ್ಯ, ಮನೋಜ್ ಕುಮಾರ್ ವ್ಯವಸ್ಥಾಪಕರು ಬದ್ರ್ ಅಲ್ ಸಮಾ ಆಸ್ಪತ್ರೆ, ಮಹಮ್ಮದಲಿ ಸಖಾಫಿ ವಯನಾಡ್ ಇವರು ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಸಭೆಯಲ್ಲಿ ಹನೀಫ್ ಸಅದಿ ಕೊಡ್ತಮೊಗೇರು, ಝುಬೈರ್ ಸಅದಿ ಪಟ್ರಾಕೋಡಿ, ಉಬೈದುಲ್ಲಾ ಸಖಾಫಿ, ಸಾದಿಕ್ ಸುಳ್ಯ, ಶಫೀಕ್ ಮಾರ್ನಬೈಲು, ಅಶ್ರಫ್ ಭಾರತ್ ಸುಳ್ಯ ಇವರು
ಉಪಸ್ಥಿತರಿದ್ದರು. ಕೆಸಿಎಫ್ ಸೊಹಾರ್ ಝೋನಿನ ಉತ್ತಮ ಸಂಘಟಕ ವರ್ಷದ ಪ್ರಶಸ್ತಿಯನ್ನು ಇಕ್ಬಾಲ್ ಎರ್ಮಾಳ್ ಮತ್ತು ಸಾದಿಕ್ ಕಾಟಿಪಳ್ಳ ಇವರು ಪಡೆದುಕೊಂಡರು.
ಕಾರ್ಯಕ್ರಮದಡೆಯಲ್ಲಿ ಫಖ್ರೇ ಆಲಂ ರಝ್ವಿ ಮುಂಬೈ ಇವರು ನಅತೇ ಶರೀಫ್ ಮೂಲಕ ಸಭಿಕರ ಮನಸ್ಸನ್ನು ಮದೀನ ಮುನ್ವರ್ ಗೆ ಕೊಂಡೊಯ್ದರು. ಕಾರ್ಯಕ್ರಮದ ಆರಂಭದಲ್ಲಿ ಕೆಸಿಎಫ್ ಸೊಹಾರ್ ಝೋನ್ ಕಾರ್ಯಕರ್ತರು ಮೌಲೂದ್ ಪಾರಾಯಣ, ಬುರ್ದ ಮಜ್ಲಿಸ್ ನಡೆಸಿಕೊಟ್ಟರು. ಕೆಸಿಎಫ್ ಒಮಾನ್ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಲಿ ಸುಳ್ಯ ಇವರು ಸ್ವಾಗತಸಿದರೆ, ಝೋನ್ ಕಾರ್ಯದರ್ಶಿ ಅಶ್ರಫ್ ಕುತ್ತಾರ್ ವಂದಿಸಿ, ಕಲಂದರ್ ಬಾವ ಇವರು ಕಾರ್ಯಕ್ರಮ ನಿರೂಪಿಸಿದರು.