ಮಾಣಿ : ಸುನ್ನೀ ಯುವಜನ ಸಂಘ ಮಾಣಿ ಇದರ ಆಶ್ರಯದಲ್ಲಿ ಹಿಜಾಮ ಹಾಗೂ ಅಕ್ಯುಪಂಕ್ಚರ್ ಚಿಕಿತ್ಸಾ ಶಿಬಿರವು ಆದಿತ್ಯವಾರ ಮಾಣಿ ದಾರುಲ್ ಇರ್ಶಾದ್ ನಲ್ಲಿ ನಡೆಯಿತು,ಎಸ್ ವೈ ಎಸ್ ಬಂಟ್ವಾಳ ಝೋನ್ ಅಧ್ಯಕ್ಷರಾದ ಹಂಝ ಮದನಿಯವರು ದುಆ ನೆರೆವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,ಸೆಂಟರ್ ಅಧ್ಯಕ್ಷರಾದ ಅಬ್ದುರ್ರಝ್ಝಾಕ್ ಮದನಿ ಅಲ್ ಕಾಮಿಲ್ ಸಖಾಫಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತ ಭಾಷಣ ಮಾಡಿದರು,
ಡಾ.ಅಬ್ದುಲ್ ಸುಲ್ತಾನ್ ಪಾಲಕ್ಕಾಡ್ ರವರು ಹಿಜಾಮ ಮತ್ತು ಅಕ್ಯುಪಂಚರ್ ಬಗ್ಗೆ ಮಾಹಿತಿ ನೀಡಿದರು,ಡಾ. ಜಂಶೀದ್,ಡಾ.ಸಫ್ವಾನ್ ಸಲೀಂ ವಲಂಜೇರಿ,ಡಾ.ಅಮೀನ್ ಮಂಜೇಶ್ವರ,ಡಾ.ಮುಹಮ್ಮದ್ ರುಫೈಲ್,ಡಾ.ಹಸೀನಾ ಹಾಗೂ ಡಾ.ಅಲ್ ಸಫಾ ಶಿಬಿರ ನಡೆಸಿಕೊಟ್ಟರು,
40 ಪುರುಷರು ಹಾಗೂ 20 ಮಹಿಳೆಯರು ಶಿಬಿರದ ಪ್ರಯೋಜನ ಪಡೆದರು,ಕಾರ್ಯಕ್ರಮದಲ್ಲಿ ದಾರುಲ್ ಇರ್ಶಾದ್ ವಿದ್ಯಾಸಂಸ್ಥೆಯ ಮ್ಯಾನೇಜರ್ ಇಬ್ರಾಹಿಂ ಸಅದಿ ಮಾಣಿ,ಸೆಂಟರ್ ಉಪಾಧ್ಯಕ್ಷರಾದ ಯೂಸುಫ್ ಹಾಜಿ ಸೂರಿಕುಮೇರು, ಕೋಶಾಧಿಕಾರಿ ಖಾಸಿಂ ಹಾಜಿ ಪರ್ಲೋಟು,ಕಾರ್ಯದರ್ಶಿ ಅಬ್ದುಲ್ ಲತೀಫ್ ಮದನಿ ಕಲ್ಲಡ್ಕ,ಅಲ್ ಮದರಸತುಲ್ ಇರ್ಶಾದಿಯ್ಯಾ ಇದರ ಮುಖ್ಯೋಪಾಧ್ಯಾಯರಾದ ನಝೀರ್ ಅಮ್ಜದಿ ಸರಳಿಕಟ್ಟೆ, ದಾರುಲ್ ಇರ್ಶಾದ್ ಮುದರ್ರೀಸ್ ಯಅ್ ಕೂಬ್ ಸಅದಿ ಅಲ್ ಅಫ್ಳಲಿ ಅತಿಥಿಗಳಾಗಿ ಭಾಗವಹಿಸಿದರು,
ಎಸ್ ವೈ ಎಸ್ ಮಾಣಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಯೂಸುಫ್ ಸಯೀದ್ ನೇರಳಕಟ್ಟೆ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದಗೈದರು.