ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ SSF ‘ಯೌವನ ಮರೆಯಾಗುವ ಮುನ್ನ’ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯಾದ್ಯಾಂತ ಎಲ್ಲಾ ಘಟಕಗಳಲ್ಲಿ ನಡೆಸುತ್ತಿರುವ ಯೂನಿಟ್ ಸಮ್ಮೇಳನ ಕಕ್ಕಿಂಜೆ SSF ಶಾಖೆ ವತಿಯಿಂದ ಅಕ್ಟೋಬರ್ 25 ರಂದು GK ಕೋಟೆಜ್ ಕಕ್ಕಿಂಜೆಯಲ್ಲಿ ಸಂಜೆ 6 ಘಂಟೆಗೆ ನಡೆಯಲಿದೆ.
ಕಕ್ಕಿಂಜೆ SSF ಅಧ್ಯಕ್ಷರಾದ ರಫೀಖ್ ಮದನಿಯವರ ಅಧ್ಯಕ್ಷತೆಯಲ್ಲಿ, SYS ಕಕ್ಕಿಂಜೆ ಬ್ರಾಂಚ್ ಅಧ್ಯಕ್ಷ ಪಿ.ಎಸ್ ಅಬ್ದುರ್ರಹ್ಮಾನ್ ಬಾಖವಿ ಉಧ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ SSF ಕಾರ್ಯದರ್ಶಿ ಹಾಫಿಲ್ ಸುಫ್ಯಾನ್ ಸಖಾಫಿ ಕಾವಳ್ಕಟ್ಟೆ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಹಾಫಿಲ್ ಅಶ್ರಫ್ ಸಖಾಫಿಯವರು ಸ್ವಾಗತ ಭಾಷಣ ನಡೆಸುವರು.
ಕಾರ್ಯಕ್ರಮವನ್ನು ವಿಜಯಗೊಳಿಸುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.