janadhvani

Kannada Online News Paper

ಕೊಡಗು ಸಂತ್ರಸ್ತರಿಗೆ ಸಂಗ್ರಹಿಸಿದ ಹಣವನ್ನು ಕರ್ನಾಟಕ ರಾಜ್ಯ ಸುನ್ನಿ ಒಕ್ಕೂಟಕ್ಕೆ ಹಸ್ತಾಂತರ

ಚಿತ್ರದುರ್ಗ SSF ಮತ್ತು SYS ಕೊಡಗು ಸಂತ್ರಸ್ತರಿಗೆ ಸಂಗ್ರಹಿಸಿದ 1,15,500 ರೂಪಾಯಿ ಹಣವನ್ನು ಇಹ್ಸಾನ್ ಚೆಯರ್ಮಾನ್ ಶಾಫಿ ಸಅದಿ ಯವರ ಮೂಲಕ ಕರ್ನಾಟಕ ರಾಜ್ಯ ಸುನ್ನಿ ಒಕ್ಕೂಟಕ್ಕೆ ಹಸ್ತಾಂತರಿಸಲಾಯಿತು.ಚಿತ್ರದುರ್ಗ ಜಾಮಿಯ ಮಸೀದಿ ಯ ಖತೀಬ್ ಮೌಲಾನಾ ಆದಂ ಸಖಾಫಿ,ಇಹ್ಸಾನ್ supervisor ಹಮೀದ್ ಮುಸ್ಲಿಯಾರ್ ನಗರ, ಇಹ್ಸಾನ್ ಸದಸ್ಯ ಅಲ್ತಾಫ್ ಕುಂಪಲ, SYS ಚಿತ್ರದುರ್ಗ ಜಿಲ್ಲಾ ಕೋಶಾಧಿಕಾರಿ ಫಝಲುಲ್ಲಾ ಸಾಬ್,SYS ಚಿತ್ರದುರ್ಗ ಜಿಲ್ಲಾ ನಾಯಕ ಬಾಸಿತ್ ಸಾಬ್ ಮುಂತಾದವರು ಉಪಸ್ತಿತರಿದ್ದರು.