ಬುರೈದ : ಸುಮಾರು 2 ವರ್ಷಗಳ ಹಿಂದೆ ಮಂಗಳೂರು ವಿಟ್ಲ ಸಮೀಪದ ಉರಿಮಜಲು ನಿವಾಸಿ ಶಾಹುಲ್ ಹಮೀದ್ ಎಂಬ ವ್ಯಕಿಯು ಸೌದಿ ಅರೇಬಿಯಾದ ಬುರೈದದಲ್ಲಿ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದರು. ಆ ಸಮಯದಲ್ಲಿ ಮೃತರ ಮರಣಾನಂತರ ಎಲ್ಲಾ ಪ್ರಕ್ರಯಿಯನ್ನು ಕೆ.ಸಿ.ಎಫ್ ಬುರೈದ ಸೆಕ್ಟರ್ ನೇತೃತ್ವದಲ್ಲಿ ನೆರವೇರಿಸಿತು.
ಅಪಘಾತವು ಸಂಬಂಧಪಟ್ಟ ಇಲಾಖೆಯಲ್ಲಿ ಕೇಸು ದಾಖಲಾಗಿತ್ತು ಈ ಕೇಸನ್ನು ಮೃತರ ಪರವಾಗಿ ವಕಾಲಾತ್ತು ವಹಿಸಿ ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಕ್ಲಪ್ತ ಸಮಯದಲ್ಲಿ ಸಂಗ್ರಹಿಸಿ ಬುರೈದ ಕೆ.ಸಿ.ಎಫ್. ಇಲಾಖೆಗೆ ಒದಗಿಸಿತು. ನಂತರ ಈ ಕೇಸ್ ಕೋರ್ಟ್ ಮೆಟ್ಟಲೇರಿತು. ಕೋರ್ಟಿನಲ್ಲಿ ಈ ಭಾಗದ ಉದ್ಯಮಿ ಮತ್ತು ಸಮಾಜ ಸೇವಕ ಅಬ್ದುಲ್ ಲತೀಫ್ ಶೇರಿ ಮತ್ತು ಕೆ.ಸಿ.ಎಫ್. ಬುರೈದ ಸೆಕ್ಟರ್ ರಿಲೀಫ್ ಚಯರ್ ಮ್ಯಾನ್ ತಾಜುದ್ದೀನ್ ಕೆಮ್ಮಾರ ಸತತ 2 ವರ್ಷಗಳ ಕಾನೂನು ಹೋರಾಟವನ್ನು ನಡೆಸಿ ಕೊನೆಗೆ ಮೊದಲನೇ ಹಂತದ ಪರಿಹಾರವಾಗಿ 50 ಸಾವಿರ ಸೌದಿ ರಿಯಾಲ್ (9,60,746 INR) ಒದಗಿಸಲು ಸಾಧ್ಯವಾಯಿತು. ಈ ಪರಿಹಾರ ಮೊತ್ತವನ್ನು ಮೃತರ ಕುಟುಂಬ ಸದಸ್ಯರು, ರಿಯಾದ್ ನಲ್ಲಿ ಉದ್ಯೋಗದಲ್ಲಿರುವ ನಿಸಾರ್ ಅವರಿಗೆ ಬುರೈದ ಕೆ.ಸಿ.ಎಫ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಈ ಪರಿಹಾರ ಒದಗಿಸಲು ಕೆ.ಸಿ.ಎಫ್ ರಾಷ್ಟ್ರೀಯ ನಾಯಕರ ಮಾರ್ಗದರ್ಶನದಂತೆ ಸತತ 2 ವರ್ಷಗಳ ನಿರಂತರವಾಗಿ ಕಾನೂನು ಹೋರಾಟ ನಡೆಸಿದ ಸಮಾಜಸೇವಕ ಅಬ್ದುಲ್ ಲತೀಫ್ ಶೇರಿ ಮತ್ತು ತಾಜುದ್ದೀನ್ ಕೆಮ್ಮಾರ ಅವರನ್ನು KCF ಗೌರವಿಸಿತು.