ರಿಯಾದ್: ಐತಿಹಾಸಿಕ ಹರಮೈನ್ ರೈಲು ಓಡಾಟವು ಇನ್ನೊಂದು ವಾರದಲ್ಲಿ ಪ್ರಾರಂಭವಾಗಲಿದೆ. ಮಕ್ಕಾ, ಜಿದ್ದಾ, ರಾಬಿಗ್ ಮತ್ತು ಮದೀನಾ ಎಂಬ ನಾಲ್ಕು ನಗರಗಳನ್ನು ಸಂಪರ್ಕಿಸುವ ಹರಮೈನ್ ರೈಲು ಸೇವೆಯು ಅಕ್ಟೋಬರ್ 1 ರಂದು ಪ್ರಾರಂಭವಾಗಲಿದೆ.ಸೌದಿ ಆಡಳಿತಗಾರ ಸಲ್ಮಾನ್ ಯುವರಾಜ ಮದೀನಾದಲ್ಲಿ ಅಧಿಕೃತ ಉದ್ಘಾಟನೆಯನ್ನು ಮಾಡಲಿದ್ದಾರೆ.
ಈ ಮೂಲಕ ಯಾತ್ರಾರ್ಥಿಗಳು ಪವಿತ್ರ ಪಟ್ಟಣಗಳಿಗೆ ಸುಲಭವಾಗಿ ಪ್ರಯಾಣ ಮಾಡಲು ಸಾಧ್ಯವಾಗಲಿದೆ. ಪ್ರಾರಂಭಿಕ ಹಂತದಲ್ಲಿ ಮಕ್ಕಾದಿಂದ ಮದೀನಾಕ್ಕೆ ಮತ್ತು ಮದೀನಾದಿಂದ ಮಕ್ಕಾಗೆ ದಿನ ಎಂಟು ಓಡಾಟಗಳು ನಡೆಸಲಿದೆ. 2019 ರ ಜನವರಿ ಹೊತ್ತಿಗೆ ಸೇವೆಗಳ ಸಂಖ್ಯೆಯು 12 ಕ್ಕೆ ಏರಲಿದೆ. ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಲಿದ್ದು, ಆ ಮೂಲಕ ಕೋಟಿ ಪ್ರಯಾಣಿಕರು ವರ್ಷದಲ್ಲಿ ಪ್ರಯಾಣಿಸಲು ಸಾಧ್ಯವಾಗಲಿದೆ.
ಜಿದ್ದಾದ ಸುಲೈಮಾನಿಯಾ ಮತ್ತು ವಿಮಾನನಿಲ್ದಾಣ ಹೊರತಾಗಿ ಮಕ್ಕಾ, ಮದೀನಾ ಮತ್ತು ರಾಬಿಗ್‌ಗಳಲ್ಲಿ ಒಟ್ಟು ಐದು ನಿಲ್ಧಾಣಗಳು ಇವೆ.
ಪ್ರತಿ ರೈಲುಗಳು 417 ಆಸನಗಳನ್ನು ಹೊಂದಿದೆ. ನಾಲ್ಕು ಬಿಸ್ನೆಸ್ ಕ್ಕಾಸ್ ಕೋಚ್ಗಳು, ಎಂಟು ಎಕಾನಮಿ ಕೋಚ್‌ಗಳು ಮತ್ತು ಒಂದು ಪ್ಯಾಂಟ್ರಿ ಕಾರ್‌ಗಳನ್ನು ರೈಲು ಒಳಗೊಂಡಿವೆ.
ರೈಲು ಗಾಡಿಗಳು ಕಿಂಗ್ ಅಬ್ದುಲ್ಲಾ ಎಕನಾಮಿಕ್ ಸಿಟಿ ಮತ್ತು ಕಿಂಗ್ ಅಬ್ದುಲ್ಲಝೀಝ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹಾದು ಹೋಗಲಿದೆ.ಸುಮಾರು 600 ಜನರಿಗೆ ಮಕ್ಕಾ ಮತ್ತು ಜಿದ್ದಾ ನಿಲ್ಧಾಣಗಳಲ್ಲಿ ನಮಾಝ್ ನಿರ್ವಹಿಸುವ ಸೌಕರ್ಯಗಳನ್ನು ಸಜ್ಜುಗೊಳಿಸಲಾಗಿದೆ.ಅಲ್ಲದೆ, ನಾಗರಿಕ ರಕ್ಷಣಾ ಕೇಂದ್ರ, ಹೆಲಿಪ್ಯಾಡ್, ಹತ್ತು ಪ್ಲಾಟ್ ಫಾರ್ಮ್ ಗಳು ಮತ್ತು 5,000 ಕಾರುಗಳನ್ನು ನಿಲ್ಲಿಸುವ ಸೌಕರ್ಯಗಳನ್ನು ಹೊಂದಿವೆ.
ಪ್ರತಿ ಗಂಟೆಗೆ 300 ಕಿ.ಮೀ ವೇಗದಲ್ಲಿ 35 ರೈಲುಗಳನ್ನು ಸೇವೆಗೆ ಬಳಸಲಾಗುತ್ತಿದೆ. 450 ಕಿ.ಮೀ ದೀರ್ಘವಿರುವ ಹರಮೈನ್ ರೈಲು ಯೋಜನೆಗೆ 6,700 ಕೋಟಿ ರಿಯಾಲ್ ಖರ್ಚು ಅಂದಾಜಿಸಲಾಗಿದೆ.