janadhvani

Kannada Online News Paper

ಎಸ್ಸೆಸ್ಸೆಫ್ ದ.ಕ ಜಿಲ್ಲಾ ಮಟ್ಟದ ಚುನಾವಣಾ ಕಾರ್ಯಾಗಾರ

ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ ಇದರ 2018ನೇ ಸಾಲಿನ ಚುನಾವಣಾ ಪ್ರಕ್ರಿಯೆಯು ನವೆಂಬರ್ ಒಂದರಿಂದ ಜನವರಿ ಕೊನೆಯ ತನಕ ನಡೆಯಲಿದ್ದು ,ಈ ಬಗ್ಗೆ ಯುನಿಟ್, ಸೆಕ್ಟರ್, ಡಿವಿಷನ್, ಜಿಲ್ಲಾ ಚುನಾವಣಾ ಅಧಿಕಾರಿಗಳನ್ನು ಸೇರಿಸಿ ದ.ಕ ಜಿಲ್ಲಾ ಮಟ್ಟದ ಕಾರ್ಯಾಗಾರವು ಬಿ.ಸಿ ರೋಡ್ ಸ್ಪರ್ಶ ಹಾಲ್ ನಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಮೀದ್ ಮುಸ್ಲಿಯಾರ್ ಶಿವಮೊಗ್ಗ ಕಾರ್ಯಾಗಾರವನ್ನು ಉದ್ಘಾಟಿಸಿದರು.


ರಾಜ್ಯ ಚುನಾವಣಾ ಮಂಡಳಿ ಸಂಚಾಲಕ ಹಾಫಿಳ್ ಯಾಕೂಬ್ ಸಅದಿ ನಾವೂರು ಕಾರ್ಯಾಗಾರ ನಡೆಸಿ ಕೊಟ್ಟರು.
ರಾಜ್ಯ ಟೆಕ್ನಿಕಲ್ ಆಫಿಸರ್ ರವೂಫ್ ಖಾನ್ ಕುಂದಾಪುರ ತಾಂತ್ರಿಕ ಮಾಹಿತಿ ನೀಡಿದರು.

ಜಿಲ್ಲಾ ನಾಯಕರಾದ ಇಬ್ರಾಹಿಮ್ ಸಖಾಫಿ ಸೆರ್ಕಳ, ಮುನೀರ್ ಸಖಾಫಿ ಉಳ್ಳಾಲ, ರಶೀದ್ ಹಾಜಿ ವಗ್ಗ, ಮಜೀದ್ ಸಖಾಫಿ ಅಮ್ಮುಂಜೆ ,ಶರೀಫ್ ನಂದಾವರ, ಕಾಸಿಂ ಮುಸ್ಲಿಯಾರ್ ಉಜಿರೆ, ಇಕ್ಬಾಲ್ ಮಂಗಳಪೇಟೆ, ಜಬ್ಬಾರ್ ಕಣ್ಣೂರು, ಮಜೀದ್ ಹಾಫಿಳ್ ಬಡಕಬೈಲ್, ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ ಸ್ವಾಗತಿಸಿದರು.ದ.ಕ ಜಿಲ್ಲಾ ಚುನಾವಣಾಧಿಕಾರಿ ಮುಹಮ್ಮದ್ ಅಲಿ ತುರ್ಕಳಿಕೆ ವಂದಿಸಿದರು.