ರಿಯಾದ್: ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಸೌದಿ ಅರೇಬಿಯಾದ ಸಣ್ಣ ವ್ಯಾಪಾರ ವಲಯದಲ್ಲಿನ ದೇಶೀಕರಣವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಘೋಷಿಸಿದೆ.
ಅದನ್ನು ಪಾಲಿಸದೆ ಮುಚ್ಚಿದ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯ ಎಚ್ಚರಿಸಿದೆ. ದೇಶೀಕರಣದ ಆದೇಶದ ಬಳಿಕ ದೇಶದಾದ್ಯಂತ ಸಚಿವಾಲಯವು ದಾಳಿ ನಡೆಸುತ್ತಿದೆ.
ಕಾರ್ಮಿಕ, ಉದ್ಯೋಗ, ನಗರ ಅಭಿವೃದ್ಧಿ ಮತ್ತು ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ತಂಡವು ತನಿಖೆಗಳನ್ನು ನಡೆಸುತ್ತಿದೆ. ಪ್ರಮುಖ ನಗರಗಳಲ್ಲಿ ಮುಚ್ಚಲಾಗಿರುವ ಅಂಗಡಿಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುವರು.ದೇಶೀಕರಣ ಕಾನೂನು ಜಾರಿ ನಂತರ ಮುಚ್ಚಿದ ಅಂಗಡಿಗಳ ಪಟ್ಟಿಯನ್ನು ಕಾರ್ಮಿಕ ಸಚಿವಾಲಯ ಸಂಗ್ರಹಿಸುತ್ತಿದೆ.
ಕಳೆದ ಮೂರು ದಿನಗಳಲ್ಲಿ ನಡೆಸಿದ ತಪಾಸಣಾ ಕಾರ್ಯಾಚರಣೆಯಲ್ಲಿ ಹೆಚ್ಚಿನ ಸಂಸ್ಥೆಗಳು ಕಾನೂನನ್ನು ಪಾಲಿಸಿದ್ದವು ಎಂದು ಕಾರ್ಮಿಕ ಸಚಿವಾಲಯದ ಅಂಡರ್ ಸೆಕ್ರೆಟರಿ ಸತ್ತಾಮ್ ಅಲ್ ಹರ್ಬಿ ಹೇಳಿದ್ದಾರೆ.ಅನೇಕ ಯುವಕರು ಸಣ್ಣ ಉದ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಪದವೀಧರರು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೊಸ ಉದ್ಯೋಗವನ್ನು ಸೇರಿಕೊಂಡಿದ್ದಾರೆ ಎಂದು ಅವರು ಹೇಳಿದರು.