ರಿಯಾದ್: ಮುಂದಿನ ಕಿರೀಟಧಾರಿ ಯುವರಾಜ ನೇತೃತ್ವದ ಆರ್ಥಿಕ ಸಮಿತಿಯು ಸೌದಿ ಅರೇಬಿಯಾದಲ್ಲಿ 24 ಗಂಟೆಗಳ ಒಳಗೆ ವೀಸಾ ಜಾರಿಮಾಡಲು ಆದೇಶಿಸಿದೆ. ಖಾಸಗಿ ಹೂಡಿಕೆದಾರರು ಮತ್ತು ವಿದೇಶಿ ಬಂಡವಾಳವನ್ನು ಆಕರ್ಷಿಸಲು ವೀಸಾ ಅನುಮತಿಸುವಲ್ಲಿನ ವಿಳಂಬವನ್ನು ತಪ್ಪಿಸಲಾಗುತ್ತಿದೆ.
24 ಗಂಟೆಗಳ ಒಳಗೆ ವೀಸಾವನ್ನು ಅನುಮತಿಸುವ ನಿರ್ಧಾರವು ದೇಶದ ಖಾಸಗಿ ಸಂಸ್ಥೆಗಳನ್ನು ಆಧುನೀಕರಿಸುವ ಒಂದು ಭಾಗವಾಗಿದೆ. ಹೊಸ ಪ್ರಸ್ತಾವನೆಯು ರಾಜಕುಮಾರ ಅಮೀರ್ ಮುಹಮ್ಮದ್ ಬಿನ್ ಸಲ್ಮಾನ್ ನೇತೃತ್ವದ ಹಣಕಾಸು ಸಮಿತಿಯಡಿರುವ ತಅ್‌ಸೀರ್ ಸಮಿತಿಯದ್ದಾಗಿದೆ. ಪರವಾನಗಿಗಳನ್ನು ಹದಿನೈದು ದಿನಗಳೊಳಗೆ ನೀಡುವಂತೆ ಮತ್ತು ಸಾಲಗಳು, ಸವಲತ್ತುಗಳನ್ನು ನೀಡುವಂತೆಯೂ ತಯ್ಸೀರ್ ಆದೇಶಿಸಿದೆ.
ಹೊಸ ಉದ್ಯಮಗಳಿಗೆ 15 ದಿನಗಳೊಳಗಾಗಿ ಪರವಾನಗಿಗಳು ನೀಡಬೇಕು ಮತ್ತು ಸಾಲ ಹಾಗೂ ಇತರ ಸವಲತ್ತುಗಳನ್ನು ತ್ವರಿತವಾಗಿ ನೀಡುವಂತೆಯೂ ತಯ್ಸೀರ್ ಸಮಿತಿಯು ಶಿಫಾರಸು ಮಾಡಿದೆ.
ಪರವಾನಗಿ,ಸಾಲ ಇವುಗಳಿಗೆ ಒಂದೇ ವಿಂಡೋ ಸಂವಿಧಾನವನ್ನು ಏರ್ಪಡಿಸುವಂತೆಯೂ ಸಮಿತಿ ನಿರ್ದೇಶಿಸಿದೆ.ಇದು ವಿಷನ್ 2030ರ ಅನುಸಾರ ಜಾರಿಗೆ ತರಲು ಉದ್ದೇಶಿಸಲಾದ ಆರ್ಥಿಕ ಸುಧಾರಣೆಯ ಭಾಗವಾಗಿದೆ.
ತೈಲೇತರ ಆದಾಯವನ್ನು ಹೆಚ್ಚಿಸುವುದು ಮುಖ್ಯ ಗುರಿಯಾಗಿದೆ. ಈ ವರ್ಷ 35 ಶೇ ಬೆಳವಣಿಗೆ ನಿರೀಕ್ಷಿಸಲಾಗಿದೆ. 2020 ರ ಹೊತ್ತಿಗೆ 53,000 ಕೋಟಿ ರಿಯಾಲ್ ಆದಾಯವು (10,26,000 ಕೋಟಿ ರೂ.) ಗುರಿಹೊಂದಲಾಗಿದೆ.