janadhvani

Kannada Online News Paper

ಸೌದಿ: 12 ಸಣ್ಣ ಉದ್ಯಮ ವಲಯಗಳಲ್ಲಿ ಸ್ವದೇಶೀಕರಣದ ಮೊದಲ ಹಂತ ಆರಂಭ

ರಿಯಾದ್: ಸೌದಿ ಅರೇಬಿಯದಲ್ಲಿ 12 ಸಣ್ಣ ಉದ್ಯಮ ವಲಯಗಳಲ್ಲಿ ಘೋಷಿಸಲಾದ ಸ್ವದೇಶೀಕರಣದ ಮೊದಲ ಹಂತವು ಬುಧವಾರದಿಂದ ಜಾರಿಗೆ ಬಂದಿದೆ. ಇದರೊಂದಿಗೆ, ಭಾರತೀಯರು ಸೇರಿದಂತೆ ನೂರಾರು ವಿದೇಶಿಯರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ. ಸಿದ್ದ ಉಡುಪುಗಳು,ಪೀಠೋಪಕರಣಗಳು, ಪಾತ್ರೆಗಳು, ಬಿಡಿಭಾಗಗಳು ಮತ್ತು ಕಾರ್ಪೆಟ್ ಗಳು ಮುಂತಾದ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುವ ಸಣ್ಣ ವ್ಯವಹಾರ ಕೇಂದ್ರಗಳಲ್ಲಿ ಈ ಹೊಸ ನೀತಿ ಜಾರಿಗೆ ಬರಲಿದೆ.

ಶೇ 70 ರಷ್ಟು ಮೊದಲ ಹಂತದಲ್ಲಿ ಸ್ವದೇಶೀಕರಣ ಜಾರಿಗೊಳಿಸಲಾಗುತ್ತಿದ್ದು, ನಿರುದ್ಯೋಗವನ್ನು ನಿಭಾಯಿಸಲು ಮತ್ತು ಸ್ವದೇಶಿಗಳಿಗೆ ಹೆಚ್ಚಿನ ಅವಕಾಶಗಳನ್ನು ಪಡೆಯಲು ಸಣ್ಣ ವ್ಯವಹಾರಗಳಾದ್ಯಂತ ಈ ನೀತಿಯನ್ನು ವಿಸ್ತರಿಸಲಾಗಿದೆ. ಈ ವರ್ಷ ಜನವರಿ 28 ರಂದು ಕಾರ್ಮಿಕ ಸಚಿವಾಲಯವು 12 ವಲಯಗಳಲ್ಲಿ  ಸಂಪೂರ್ಣ ದೇಶೀಕರಣವನ್ನು ಘೋಷಿಸಿದ್ದವು. ನಂತರ, ವಾಣಿಜ್ಯೋದ್ಯಮಿಗಳು ಮತ್ತು ವ್ಯಾಪಾರಿ ಚೇಂಬರ್ಗಳ ಬೇಡಿಕೆಯಂತೆ ಶೇ.70 ರಷ್ಟು ದೇಶೀಕರಣ ಮಾಡುವಂತೆ ಆದೇಶ ನೀಡಲಾಗಿದೆ.

ಆದಾಗ್ಯೂ ಭಾರತೀಯರ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿ ಕೊಂಡಿರುವ ಕಿರಾಣಿ ಅಂಗಡಿಯನ್ನು ಘೋಷಣೆಯಿಂದ ದೂರ ಇಡಲಾಗಿತ್ತು. ಕಾರ್ಮಿಕ ಸಚಿವಾಲಯವು ಗ್ರೋಸರಿಗಳಲ್ಲಿ ಸ್ವದೇಶೀಗಳನ್ನು ನೇಮಕಗೊಳಿಸುವಂತೆ ಸೂಚನೆ ನೀಡಿದೆ ಎಂಬ ವರದಿ ಪ್ರಚಾರಪಡಿಸಲಾಗಿತ್ತು. ಇದು ಸತ್ಯಕ್ಕೆ ದೂರ ಎಂದು ಇಲಾಖೆ ವ್ಯಕ್ತಪಡಿಸಿದೆ.

error: Content is protected !! Not allowed copy content from janadhvani.com