janadhvani

Kannada Online News Paper

ಯುಎಇ: ವಿಸಾ ಇಲ್ಲದೆ ಕೆಲಸ ಮಾಡುತ್ತಿದ್ದೀರಾ? ಆದರೆ ಇದನ್ನು ಗಮನಿಸಿ

ಅಬುಧಾಬಿ: ಮಾನವ ಸಂಪನ್ಮೂಲ ಮತ್ತು ಸ್ವದೇಶೀಕರಣ ಸಚಿವಾಲಯವು ವಿಸಾ ಇಲ್ಲದೆ ಕೆಲಸ ಮಾಡದಂತೆ ವಿದೇಶೀಯರಿಗೆ ಎಚ್ಚರಿಕೆ ನೀಡಿದೆ.ವಿದೇಶದಿಂದ ಪ್ರವಾಸಿ ಮತ್ತು ವಿಸಿಟ್ ವೀಸಾಗಳಲ್ಲಿ ಕಾರ್ಮಿಕರನ್ನು ತಂದು ಕೆಲಸ ಮಾಡಿಸಲಾಗುತ್ತದೆ ಎನ್ನುವ ವರದಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಹೆಳಿಕೆ ನೀಡಿದ್ದಾರೆ.

ನಿರ್ಮಾಣ ವಲಯದಲ್ಲಿನ ಕಂಪೆನಿಗಳು ಅಲ್ಪಾವಧಿಯ ವೀಸಾಗಳಲ್ಲಿ ಎಂಜಿನಿಯರ್ಗಳನ್ನು ಮತ್ತು ಇತರರನ್ನು ತಂದು ಕೆಲಸ ಮಾಡಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಅವರು ಪಾಸ್‌ಪೋರ್ಟ್‌ಗೆ ವೀಸಾವನ್ನು ಛಾಪಿಸದೆ ಅಥವಾ ವೈದ್ಯಕೀಯ ಪರೀಕ್ಷೆಯನ್ನು ಪೂರ್ಣಗೊಳಿಸದೆ ಉದ್ಯೋಗವನ್ನು ಪಡೆಯುತ್ತಾರೆ. ಕಂಪೆನಿಗಳ ನಿರ್ದಿಷ್ಟ ಯೋಜನೆಗಳು ಪೂರ್ಣಗೊಂಡ ನಂತರ ಈ ಕಾರ್ಮಿಕರು ತಮ್ಮ ತಾಯ್ನಾಡಿಗೆ ಹಿಂದಿರುಗುತ್ತಾರೆ.

ಹೊಸದಾಗಿ ಡಿಗ್ರಿಪಡೆದು ಬಿಡುಗಡೆಯಾದ ಯುವ ಎಂಜಿನಿಯರ್ಗಳನ್ನು ಈ ರೀತಿಯಲ್ಲಿ ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ. ಕೆಲಸದ ಅನುಭವದ ಕೊರತೆಯಿಂದಾಗಿ, ಊರಿನ ಸಂಭಾವನೆಗಿಂತ ಹೆಚ್ಚು ವೇತನವನ್ನು ಗಲ್ಫ್ ದೇಶಗಳಲ್ಲಿ ಪಡೆಯುತ್ತಿದ್ದಾರೆ. ತಮ್ಮ ಕರ್ಚು ವೆಚ್ಚಗಳನ್ನು ತಾವೇ ಭರಿಸಬೇಕೆನ್ನು ಶರತ್ತನ್ನು ಒಪ್ಪಿಕೊಂಡು ಅವರನ್ನು ಕರೆಸಲಾಗುತ್ತದೆ.
ವಿದೇಶದಿಂದ ಕಾನೂನಿನನುಸಾರ ಕಾರ್ಮಿಕರನ್ನು ಕರೆತರಲು ಸಮಯಾವಕಾಶ ಮತ್ತು ನೇಮಕಾತಿ ವಿಳಂಬವನ್ನು ಇದು ತಪ್ಪಿಸುತ್ತದೆ. ಇದು ನಿರ್ಮಾಣ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಉತ್ತಮ ಮಾರ್ಗವಾಗಿದೆ ಎಂದು ನಂಬಿರುವ ಕಂಪೆನಿಗಳು ಇದನ್ನು ಮುಂದುವರಿಸಿದೆ.

ಕೆಲಸದ ಅಭಾವ ಎದುರಿಸುತ್ತಿರುವ ಅರಬ್ ದೇಶಗಳಿಂದ ಮಾತ್ರ ಕೆಲಸಗಾರರನ್ನು ಕರೆತರುವ ಕಂಪನಿಗಳೂ ಇವೆ.ಕಾನೂನುಬಾಹಿರ ಕಾರ್ಮಿಕರ ಉದ್ಯೋಗವು ಕಾನೂನಾತ್ಮಕ ಉದ್ಯೋಗಿಗಳಿಗೆ ತೊಡಕುಂಟು ಮಾಡುತ್ತಿರುವುದಾಗಿ ದೂರುಗಳು ಕೇಳಿ ಬರುತ್ತಿವೆ.ಕೆಲವು ಕಂಪನಿಗಳು ಎಂಜಿನಿಯರ್ಗಳ ಹೊರತಾಗಿ ಆಡಿಟರ್ಗಳನ್ನು ಕೂಡಾ ತರುತ್ತಿವೆ.

ಕಾನೂನು ಬಾಹಿರ- ಸಚಿವಾಲಯ

ಭೇಟಿ, ಸಂದರ್ಶನ, ಆಶ್ರಿತ ವಿಸಾಗಳಲ್ಲಿ ದೇಶಕ್ಕೆ ಆಗಮಿಸುವವರು ಕೆಲಸಕ್ಕೆ ಸೇರುವುದು ಕಾನೂನುಬಾಹಿರ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾನವ ಸಂಪನ್ಮೂಲ ಮತ್ತು ಸ್ವದೇಶೀಕರಣ ಸಚಿವಾಲಯದಿಂದ ಉದ್ಯೋಗದ ಪರವಾನಗಿ ಪಡೆಯುವುದು ಮೊದಲ ಹಂತವಾಗಿದೆ. ಕಾರ್ಮಿಕ ವಲಯಕ್ಕೆ ಪ್ರವೇಶಿಸಲು ಉದ್ಯೋಗ ಒಪ್ಪಂದ, ಕಾರ್ಮಿಕ ಕಾರ್ಡ್, ಯುಎಇ ಗುರುತಿನ ಚೀಟಿ, ವೈದ್ಯಕೀಯ ಪರೀಕ್ಷೆ, ಪಾಸ್ಪೋರ್ಟ್‌ನಲ್ಲಿ ವಿಸಾ ಛಾಪುವಿಕೆ ಇತ್ಯಾದಿಗಳನ್ನು ಪೂರ್ಣಗೊಳಿಸಬೇಕು. ಅಧಿಕೃತ ಉದ್ಯೋಗ ದಾಖಲೆಗಳಿಲ್ಲದೆ ಉದ್ಯೋಗಿ ನೇಮಕಗೊಂಡರೆ ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.

1973 ರ ಫೆಡರಲ್ ನಂಬರ್ ಲಾ ಸಂಖ್ಯೆಯ 6ನೇ ಕಲಂ ಪ್ರಕಾರ ಕಾನೂನು ಉಲ್ಲಂಘಕರು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಎಂಜಿನಿಯರುಗಳು ಪುರಸಭೆಯಿಂದ ಪರವಾನಗಿಗಳನ್ನು ಪಡೆಯಬೇಕು.ಎಂಜಿನಿಯರ್ಗಳಿಗೆ ನೇಮಕಾತಿ ನೀಡಲಾಗುವುದಕ್ಕೆ ಮುಂಚಿತವಾಗಿ ಪುರಸಭೆಯ ಪ್ರಮಾಣಪತ್ರವನ್ನು ಪಡೆಯಲು ಅಧಿಕಾರಿಗಳು ನೆನಪಿಸಿದರು. ಇಂಜಿನಿಯರಿಂಗ್ ಸಲಹಾ ಮತ್ತು ಒಪ್ಪಂದ ಕಂಪನಿಗಳು ಎಂಜಿನಿಯರ್ಗಳ ಎಲ್ಲಾ ವಿವರಗಳನ್ನು ಮುಂಚಿತವಾಗಿ ನೀಡಬೇಕು.

ರಾಸ್ ಅಲ್ ಖೈಮಾ ಪುರಸಭೆಯ ಮುಖ್ಯಸ್ಥ ಮುಂದಿರ್ ಬಿನ್ ಶಕರ್ ಅಲ್ ಸ‌ಆಬಿ ಅವರು, ಪುರಸಭೆಯಿಂದ ಯೊಗ್ಯತಾ ಪ್ರಮಾಣಪತ್ರಗಳನ್ನು ಪಡೆಯದೆ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ ಎಂದಿದ್ದಾರೆ.

error: Content is protected !! Not allowed copy content from janadhvani.com