janadhvani

Kannada Online News Paper

ಗಲ್ಫ್ ಬಿಕ್ಕಟ್ಟನ್ನು ಪರಿಹರಿಸುವ ಸರ್ವ ಪ್ರಯತ್ನಗಳಿಗೆ ಬೆಂಬಲ-ಜರ್ಮನ್ ಚಾನ್ಸೆಲರ್

ದೋಹಾ: ಕುವೈಟಿನ ಮಧ್ಯಸ್ಥಿಕೆಯಲ್ಲಿ ಗಲ್ಫ್ ಬಿಕ್ಕಟ್ಟನ್ನು ಪರಿಹರಿಸಲು ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಹೇಳಿದ್ದಾರೆ. ಗಲ್ಫ್ ಪ್ರದೇಶಕ್ಕೆ ಬಲವಾದ ಭದ್ರತಾ ವ್ಯವಸ್ಥೆಯ ಅವಶ್ಯಕತೆ ಇದೆ.

ಸಮಸ್ಯೆಗಳನ್ನು ಪರಿಹರಿಸಲು ಮತ್ತು ಮುಂದೆ ಉಂಟಾಗಬಹುದಾದ ಸಮಸ್ಯೆಗಳನ್ನು ತಪ್ಪಿಸಲು ಇದು ಅಗತ್ಯವಿದೆ. ನಿಯಂತ್ರಣಗಳಿಲ್ಲದೆ ಕಾರ್ಯಾಚರಿಸಲು ಸಾಧ್ಯವಾಗಬಲ್ಲ ಗಲ್ಫ್ ಸಹಕಾರ ಕೌನ್ಸಿಲ್‌ನ ಪ್ರಾಮುಖ್ಯತೆಯನ್ನು ಇತ್ತೀಚಿನ ಬಿಕ್ಕಟ್ಟು ಬಹಿರಂಗಪಡಿಸಿದೆ. ಆರ್ಥಿಕ ಏಳಿಗೆ ಭದ್ರತೆ ಮತ್ತು ಸ್ಥಿರತೆಗೆ ಮೂಲಭೂತ ಅಡಿಪಾಯ ಎಂದು ಏಂಜೆಲಾ ಮರ್ಕೆಲ್ ಹೇಳಿದ್ದಾರೆ.

ಕತರ್ ಮತ್ತು ಜರ್ಮನಿ ನಡುವೆ ಆರ್ಥಿಕ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಮತ್ತು ಬಲಪಡಿಸಲು ಅನೇಕ ಅವಕಾಶಗಳಿವೆ. ಗಲ್ಫ್ ಬಿಕ್ಕಟ್ಟು ವ್ಯವಹಾರ ಸಂಬಂಧದ ಮೇಲೆ ಪ್ರಭಾವ ಬೀರುವ ಸಂದರ್ಭದಲ್ಲಿ ಈ ಸಾಧ್ಯತೆಗಳನ್ನು ಪ್ರಯೋಜನ ಪಡಿಸಬೇಕು ಎಂದು ಏಂಜೆಲಾ ಮರ್ಕೆಲ್ ಹೇಳಿದರು.

error: Content is protected !! Not allowed copy content from janadhvani.com